ಮಚ್ಚೆ ಎಂಬುದು ಪ್ರತಿಯೊಬ್ಬ ಮಾನವನ ದೇಹದಲ್ಲಿ ಯಾವುದಾದರೂ ಒಂದು ಭಾಗದಲ್ಲಿ ಇದ್ದೇ ಇರುತ್ತದೆ. ಕೆಲವರಿಗೆ ಹೊಟ್ಟೆ ಮೇಲೆ,ಕೆಲವರಿಗೆ ಹಣೆ ಮೇಲೆ, ಕೆಲವರಿಗೆ ಗಲ್ಲದ ಮೇಲೆ ಹೀಗೆ ಹಲವಾರು ಕಡೆ ಮಚ್ಚೆಗಳು ಇದ್ದೇ ಇರುತ್ತವೆ. ಹಾಗಾದರೆ ಯಾವ ಮಚ್ಚೆ ಎಲ್ಲಿದ್ದರೆ ಶುಭ ಹಾಗೂ ಅಶುಭ ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಮುಖದ ಮೇಲೆ ಮಚ್ಚೆ ಇದ್ದರೆ ಅವರನ್ನು ಲಕ್ಷಣವಂತರು ಎಂದು ಕರೆಯಲಾಗುತ್ತದೆ. ಕೆಲವು ಮಚ್ಚೆಗಳು ಸೌಂದರ್ಯವನ್ನು ಹೆಚ್ಚಿಸಿದರೆ ಇನ್ನೂ ಕೆಲವು ಮಚ್ಚೆಗಳು ದೃಷ್ಟಿ ತಾಗದಂತೆ ನೋಡಿಕೊಳ್ಳುತ್ತದೆ. ಯಾರ ಹಣೆಯ ಮೇಲೆ ಮಚ್ಚೆ ಇರುತ್ತದೆಯೋ ಅಂಥವರು ಕೆಟ್ಟದಾದ ನಿರ್ಧಾರವನ್ನು ತೆಗೆದುಕೊಳ್ಳುತ್ತಿರುತ್ತಾರೆ. ಹಾಗೆ ಇವರು ತೆಗೆದುಕೊಳ್ಳುವ ನಿರ್ಧಾರದಿಂದ ಸಾಕಷ್ಟು ಸಮಸ್ಯೆಗಳು ಎದುರಾಗುತ್ತದೆ ಆದ್ದರಿಂದ ಮನೆಯಲ್ಲಿರುವ ಸದಸ್ಯರು ಇವರಿಗೆ ಆಗಾಗ ಬುದ್ಧಿ ಹೇಳುವ ಅವಶ್ಯಕತೆ ಇರುತ್ತದೆ. ಮೂಗಿನ ಮೇಲೆ ಮಚ್ಚೆ ಇದ್ದರೆ ಜೀವನದಲ್ಲಿ ಕಷ್ಟಗಳು ಜಾಸ್ತಿ ಎಂಬ ಅರ್ಥವಿದೆ. ಇಂಥವರು ತಮ್ಮ ಸಂಗಾತಿಯ ಮೇಲೆ ಯಾವಾಗಲೂ ಅಪನಂಬಿಕೆಯನ್ನು ಇಟ್ಟುಕೊಂಡಿರುತ್ತಾರೆ ಹಾಗೂ ಇವರ ಕೈಯಲ್ಲಿ ಯಾವಾಗಲೂ ಹಣವು ನಿಲ್ಲುವುದಿಲ್ಲ ಹಾಗೂ ಇವರ ಕೋಪವೇ ಇವರಿಗೆ ದೊಡ್ಡ ಶತ್ರುವಾಗಿರುತ್ತದೆ.
ಹುಬ್ಬುಗಳ ನಡುವೆ ಮಚ್ಚೆ ಇದ್ದವರು ಯಾವಾಗಲೂ ಲವಲವಿಕೆಯಿಂದ ಕೂಡಿರುತ್ತಾರೆ ಮತ್ತು ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಮೂಗು ಹಾಗೂ ತುಟಿಯ ಮಧ್ಯಭಾಗದಲ್ಲಿ ಮಚ್ಚೆಯಿದ್ದರೆ ಅನಾರೋಗ್ಯದ ಸಮಸ್ಯೆ ಹೆಚ್ಚಾಗಿರುತ್ತದೆ. ಇಂತಹ ಮಚ್ಚೆಗಳಿಂದ ವೈವಾಹಿಕ ಕಲಹಗಳು ನಡೆಯುತ್ತಿರುತ್ತವೆ ಆದ್ದರಿಂದ ಈ ಮಚ್ಚೆಯನ್ನು ತೆಗೆಸುವುದು ಉತ್ತಮ. ಕೆನ್ನೆಯ ಮೇಲೆ ಮಚ್ಚೆ ಇರುವವರು ತುಂಬಾ ಅದೃಷ್ಟ ಶಾಲಿಗಳಾಗಿರುತ್ತಾರೆ. ಚಿಕ್ಕವಯಸ್ಸಿನಲ್ಲಿ ದೊಡ್ಡ ಸ್ಥಾನವನ್ನು ಕೆಲಸದಲ್ಲಿ ಅಲಂಕರಿಸಲಿದ್ದಾರೆ ಹಾಗೂ ಚೆನ್ನಾಗಿ ಹಣ ಸಂಪಾದನೆಯನ್ನು ಮಾಡುತ್ತಾರೆ. ಗಲ್ಲದ ಮೇಲೆ ಮಚ್ಚೆ ಇರುವವರು ಜೀವನದ ಪ್ರತಿಯೊಂದು ಘಟ್ಟದಲ್ಲಿಯೂ ಯಶಸ್ಸನ್ನು ಕಾಣುತ್ತಾರೆ.ತಲೆಯಲ್ಲಿ ಮಚ್ಚೆ ಇದ್ದರೆ ರಾಜಕೀಯದಲ್ಲಿ ಉನ್ನತ ಸ್ಥಾನವನ್ನು ಏರುತ್ತಾರೆ. ಕಿವಿ ಮೇಲೆ ಇರುವ ಮಚ್ಚೆಯು ಐಷಾರಾಮಿ ಜೀವನವನ್ನು ಸೂಚಿಸುತ್ತದೆ. ನಾಲಿಗೆಯ ಮಧ್ಯಭಾಗದಲ್ಲಿರುವ ಮಚ್ಚೆಯೂ ಶಿಕ್ಷಣದಲ್ಲಿರುವ ಅಡೆತಡೆಗಳನ್ನು ಸೂಚಿಸುತ್ತದೆ. ನಾಲಿಗೆ ತುದಿ ಭಾಗದಲ್ಲಿ ಮಚ್ಚೆ ಇದ್ದರೆ ತುಂಬಾ ಬುದ್ಧಿಶಾಲಿಗಳಾಗಿರುತ್ತಾರೆ ಹಾಗೂ ಬೇರೆಯವರನ್ನು ಮನ ಪರಿವರ್ತನೆ ಮಾಡುವ ಚಾಣಕ್ಯತೆಯನ್ನು ಹೊಂದಿರುತ್ತಾರೆ. ಕತ್ತಿನ ಭಾಗದಲ್ಲಿ ಮಚ್ಚೆ ಇದ್ದರೆ ಅನಿರೀಕ್ಷಿತವಾಗಿ ಹಣವು ಹುಡುಕಿಕೊಂಡು ಬರುತ್ತದೆ. ಅದೇ ರೀತಿ ಎರಡೂ ಬದಿಯಲ್ಲೂ ಮಚ್ಚೆ ಇದ್ದರೆ ಅವರಂತ ಮೂರ್ಖರು ಇನ್ಯಾರೂ ಇಲ್ಲ ಎಂದು ಹೇಳಲಾಗುತ್ತದೆ. ಹೊಟ್ಟೆಯ ಮೇಲೆ,ಎದೆಯ ಮೇಲೆ ಮಚ್ಚೆ ಇರುವವರು ಸೋಮಾರಿಗಳು ಹಾಗೂ ಐಷಾರಾಮಿ ಜೀವನವನ್ನು ಇಚ್ಚಿಸುವವರು ಆಗಿರುತ್ತಾರೆ.