ನಿಂಬೆಹಣ್ಣಿನಿಂದ ಯಾವ ರೀತಿ ಶತ್ರುವನ್ನು ನಾಶ ಮಾಡಬಹುದು ಎಂಬುದು ತಿಳಿದಿದೆಯೇ ನಿಮಗೆ ?

ಜ್ಯೋತಿಷ್ಯ

ಒಂದು ವೇಳೆ ನೀವು ಮಾಡುವಂತ ಕೆಲಸದ ಜಾಗದಲ್ಲಿ ಅಥವಾ ಮನೆಯ ಅಕ್ಕಪಕ್ಕದಲ್ಲಿ ಅಥವಾ ಬಂಧುಬಳಗದವರು ನಿಮ್ಮ ಏಳಿಗೆಯನ್ನು ಸಹಿಸುವುದಕ್ಕೆ ಆಗದೆ ಇರುವವರಿಂದ ರಕ್ಷಣೆ ಮಾಡಿಕೊಳ್ಳಬೇಕು ಎಂದರೆ ನಾವು ಹೇಳುವ ಈ ಸಣ್ಣ ಉಪಾಯವನ್ನು ಮಾಡಿದರೆ ನಿಮ್ಮ ಶತ್ರು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ ಹಾಗೂ ನಿಮ್ಮಿಂದಲೇ ನಿಮ್ಮ ಶತ್ರು ನಾಶವಾಗುತ್ತಾನೆ. ಹಾಗಾದರೆ ಶತ್ರುನಾಶ ವನ್ನು ಯಾವ ರೀತಿ ಮಾಡಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಶುಕ್ರವಾರದ ದಿನದಂದು ಮಧ್ಯಾಹ್ನ 12ಗಂಟೆಯಿಂದ 2 ಗಂಟೆಯ ಒಳಗೆ ಈ ಚಿಕ್ಕ ಕೆಲಸವನ್ನು ಮಾಡಬೇಕಾಗುತ್ತದೆ. ಮೊದಲಿಗೆ ನಿಂಬೆ ಹಣ್ಣನ್ನು ತೆಗೆದುಕೊಂಡು ನಿಮಗೆ ತೊಂದರೆಯನ್ನು ಕೊಡುತ್ತಿರುವ ಶತ್ರುಗಳ ಹೆಸರನ್ನು ನಿಂಬೆಹಣ್ಣಿನ ಮೇಲೆ ಬರೆಯಬೇಕು. ಶತ್ರುಗಳ ಹೆಸರನ್ನು ನಿಂಬೆಹಣ್ಣಿನ ಮೇಲೆ ಬರೆದನಂತರ ನಿಂಬೆಹಣ್ಣನ್ನು ಎರಡು ಭಾಗ ಮಾಡಬೇಕು. ನಿಂಬೆಹಣ್ಣನ್ನು ಎರಡು ಭಾಗ ಮಾಡಿದ ನಂತರ ಶತ್ರು ವಿನಾಶಕ ಅಂಜನವನ್ನು ಭಾಗ ಮಾಡಿಕೊಂಡ ನಿಂಬೆಹಣ್ಣಿನ ಹೋಳಿಗೆ ಹಾಕಬೇಕು. ತದನಂತರ ನಿಂಬೆ ಹಣ್ಣಿನ ಹೋಳನ್ನು ತಟ್ಟೆಯ ಒಳಗೆ ಇಟ್ಟುಕೊಂಡು ಮನೆಯ ಯಾವುದಾದರೂ ಒಂದು ಮೂಲೆಯ ಜಾಗದಲ್ಲಿ ಇಡಬೇಕು.

ಮನೆಯ ಒಂದು ಮೂಲೆಯ ಜಾಗದಲ್ಲಿ ಇಟ್ಟ ನಂತರ ನಿಂಬೆಹಣ್ಣು ಸಂಪೂರ್ಣವಾಗಿ ಒಣಗುವ ತನಕ 4 ರಿಂದ 5 ದಿನಗಳವರೆಗೆ ಕಾಯಬೇಕು. ಸಂಪೂರ್ಣವಾಗಿ ಒಣಗಿದ ನಂತರ ನಿಂಬೆ ಹಣ್ಣನ್ನು ತೆಗೆದುಕೊಂಡು ಮನೆಯ ಯಾವುದಾದರೂ ಒಂದು ಜಾಗದಲ್ಲಿ ಸುಡಬೇಕು. ನಿಂಬೆಹಣ್ಣನ್ನು ಸುಟ್ಟ ನಂತರ ಅದರಿಂದ ಬರುವ ಬೂದಿಯನ್ನು ಯಾವುದಾದರೂ ಹರಿಯುವ ನದಿಯಲ್ಲಿ ಹಾಕಬೇಕು. ಈ ರೀತಿ ಮಾಡುವುದರಿಂದ ಯಾವುದೇ ಕಾರಣಕ್ಕೂ ಎಂತಹದ್ದೆ ಪರಿಸ್ಥಿತಿಯಲ್ಲೂ ನಿಮ್ಮ ಶತ್ರು ನಿಮ್ಮ ಬಳಿ ಬರುವುದಿಲ್ಲ ಹಾಗೂ ನೀವು ಜೀವನದಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿಯಿಂದ ಇರಬಹುದು.

Leave a Reply

Your email address will not be published. Required fields are marked *