ಎಷ್ಟೇ ಹಣ ಸಂಪಾದನೆ ಮಾಡಿದರು ನೆಮ್ಮದಿ ಇಲ್ಲವೆಂದರೆ ಈ ಚಿಕ್ಕ ಪರಿಹಾರವನ್ನು ಮಾಡಿ.

ಜ್ಯೋತಿಷ್ಯ

ಎಷ್ಟೇ ಹಣ ಸಂಪಾದನೆ ಮಾಡಿದರು ನೆಮ್ಮದಿ ಇಲ್ಲವೆಂದರೆ ಈ ಚಿಕ್ಕ ಪರಿಹಾರವನ್ನು ಮಾಡಿ..ಕೆಲವರಿಗೆ ಧನ ಸಂಪಾದನೆಯೂ ಚೆನ್ನಾಗಿರುತ್ತದೆ ಹಾಗೆಯೇ ವಾಸಿಸಲು ಸ್ವಂತ ಮನೆಯೂ ಸಹ ಇರುತ್ತದೆ. ಆದರೆ ಕೆಲವರಿಗೆ ಮನೆಯಲ್ಲಿ ಸುಖಜ ಶಾಂತಿ, ನೆಮ್ಮದಿ ಎಂಬುದು ಇರುವುದಿಲ್ಲ. ಅದಕ್ಕಾಗಿ ಹಿರಿಯರು ಹೇಳುವುದು ಮನುಷ್ಯನಿಗೆ ಎಲ್ಲವೂ ಇದ್ದರೂ ಒಂದಲ್ಲ ಒಂದು ಕೊರತೆಯನ್ನು ದೇವರು ಕೊಟ್ಟಿರುತ್ತಾನೆ ಎಂದು. ಕುಟುಂಬದ ಸದಸ್ಯರ ಜೊತೆ ಪ್ರತಿನಿತ್ಯ ಒಂದಲ್ಲ ಒಂದು ಕಾರಣಕ್ಕೆ ಜಗಳವಾಡುವುದು, ಮನೆಯಲ್ಲಿರುವ ಸದಸ್ಯರು ಒಬ್ಬರಾದ ಮೇಲೆ ಒಬ್ಬರು ಆರೋಗ್ಯ ಸಮಸ್ಯೆ ತುತ್ತಾಗುತ್ತಿದ್ದಾರೆ ಈ ಪರಿಹಾರವನ್ನು ಮಾಡುವುದರಿಂದ ಎಲ್ಲಾ ಸಂಕಷ್ಟಗಳಿಂದ ನಿವಾರಣೆಯ ಜೊತೆಗೆ ಸುಖ,ಶಾಂತಿ ಹಾಗೂ ನೆಮ್ಮದಿಯನ್ನು ಪಡೆದುಕೊಳ್ಳಬಹುದು.ಲವಂಗದಿಂದ ಶನಿದೋಷ, ರಾಹುದೋಷ, ದೃಷ್ಟಿದೋಷ ದೂರವಾಗುತ್ತದೆ. ಮೊದಲಿಗೆ ಅರಿಶಿನದ ಕೊಂಬನ್ನು ಬಲ ಕೈಯಲ್ಲಿಟ್ಟುಕೊಂಡು ಮುಷ್ಟಿಯಿಂದ ಮುಚ್ಚಿ ಈ ಮಂತ್ರವನ್ನು 108 ಬಾರಿ ಪಠಿಸಬೇಕು. ಓಂ ರತಿಯೇ ಕಾಮದೇವಾಯ ನಮಃ . ಈ ಮಂತ್ರವನ್ನು ಪಠಿಸಿದ ನಂತರ ಪತಿ-ಪತ್ನಿಯು ಮಲಗುವ ತಲೆ ದಿಂಬಿನ ಕೆಳಗಡೆ ಇಡಬೇಕು. ಒಂದು ರಾತ್ರಿ ಮಲಗಿ ಎದ್ದ ಮೇಲೆ ತಲೆ ದಿಂಬಿನ ಕೆಳಗಡೆ ಇಟ್ಟಿದ್ದ ಅರಿಶಿನದ ಕೊಂಬನ್ನು ಮಣ್ಣಿನಲ್ಲಿ ಮುಚ್ಚಬೇಕು. ಈ ಚಿಕ್ಕ ಕೆಲಸವನ್ನು 5 ಶನಿವಾರ ಮಾಡಬೇಕು. ಹೆಂಗಸರು ಮುಟ್ಟಾದ ಸಮಯದಲ್ಲಿ ಈ ಕೆಲಸವನ್ನು ಮಾಡಬಾರದು.ಈ ರೀತಿಯಾಗಿ ಮಾಡುವುದರಿಂದ ಧನಸಂಪತ್ತು ವೃದ್ಧಿಯಾಗುತ್ತದೆ ಹಾಗೂ ಮನೆಯಲ್ಲಿ ಸುಖ, ಶಾಂತಿ,ನೆಮ್ಮದಿ ಎಂಬುದು ದೊರೆಯುತ್ತದೆ.ಒಂದು ಗಾಜಿನ ಬಾಟಲಿಗೆ ಅರಿಶಿನವನ್ನು ಹಾಕಿ ಅದರ ಮೇಲೆ 2 ಲವಂಗ ಹಾಗೂ ಎರಡು ಮೆಣಸಿನಕಾಯಿಯನ್ನು ಹಾಕಬೇಕು. ಈ ವಸ್ತುಗಳನ್ನು ಹಾಕಬೇಕಾದರೆ ನಿಮ್ಮ ಮನಸ್ಸಿನಲ್ಲಿರುವ ಕೋರಿಕೆಗಳನ್ನು ಹೇಳಿಕೊಂಡು ಹಾಕಬೇಕು. ಅಡುಗೆ ಕೋಣೆಯಲ್ಲಿ ಅರಿಶಿನದ ಡಬ್ಬ ಹಾಗೂ ಉಪ್ಪಿನ ಡಬ್ಬವನ್ನು ಅಕ್ಕಪಕ್ಕದಲ್ಲಿ ಇಡಬಾರದು, ಏಕೆಂದರೆ ಮನೆಯಲ್ಲಿ ಕಲಹಗಳು ಹೆಚ್ಚಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಮನೆಯಲ್ಲಿ ಅರಿಶಿನದ ಡಬ್ಬದ ಪಕ್ಕ ಉಪ್ಪಿನ ಡಬ್ಬವನ್ನು ಇಡಬೇಡಿ. ಈ ರೀತಿಯಾಗಿ ಮಾಡುವುದರಿಂದ ಸಕಲ ಸಂಕಷ್ಟ ಗಳಿಂದಲೂ ದೂರವಾಗಬಹುದು ಹಾಗೂ ನೆಮ್ಮದಿಯಿಂದ ಜೀವನವನ್ನು ಸಹ ನಡೆಸಬಹುದು.

Leave a Reply

Your email address will not be published. Required fields are marked *