ಯಾವ ದೇವಾನುದೇವತೆಗಳನ್ನು ಸಹ ಶನಿ ದೇವರು ಬಿಟ್ಟಿಲ್ಲ, ಆದರೆ ಶನಿಮಹಾತ್ಮ ವಿಘ್ನವಿನಾಶಕ ಗಣೇಶನನ್ನು ಏನು ಮಾಡಲು ಸಾಧ್ಯವಾಗಲಿಲ್ಲ. ಒಮ್ಮೆ ಶನಿಮಹಾತ್ಮ ಗಣೇಶನನ್ನು ಬೆನ್ನು ಹತ್ತಿದಾಗ ಚತುರನಾದ ಗಣೇಶ ಏನು ಮಾಡಿದರು ಎಂದು ತಿಳಿದುಕೊಳ್ಳೋಣ ಬನ್ನಿ. ಒಮ್ಮೆ ವಿಘ್ನವಿನಾಶಕ ಗಣೇಶನು ವಿಹಾರಕ್ಕೆಂದು ಹೊರಟಿರುತ್ತಾರನೆ, ಆಗ ಆಕಸ್ಮಿಕವಾಗಿ ಶನಿದೇವರು ಎದುರಾಗುತ್ತಾರೆ. ಆಗ ನೋಡಲು ಮುದ್ದು ಮುದ್ದಾಗಿದ್ದ ಗಣಪತಿಯನ್ನು ನೋಡಿ ಶನಿ ದೇವರಿಗೆ ಹಿಡಿಯಬೇಕು ಎಂದು ಅನಿಸುತ್ತದೆ.
ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇಮತ್ತು ನೀವು-ಉತ್ತರ ತಿಳಿಯಲು ಬಯಸುವಿರಾಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇಪೂಜೆ ಪ್ರಯತ್ನ ಮಾಡಿದರು ನಿಮ್ಮಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆಬೇಡ ನಿಮ್ಮ ಯಾವುದೇ ಘೋರನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ 9663542672.
ಆಗ ಗಣೇಶನು ಶನಿ ದೇವರು ತನ್ನ ಕಡೆಯೆ ಬರುವುದನ್ನು ನೋಡಿ ಹೆದರುತ್ತಾರೆ. ಆಗ ಗಣೇಶನಿಗೆ ಏನೇ ಆದರೂ ಸರಿ ಶನಿದೇವರಿಗೆ ಸಿಗಬಾರದು ಎಂದು ಅಲ್ಲಿಂದ ಓಡಲು ಪ್ರಾರಂಭಿಸುತ್ತಾರೆ. ಆಗ ಹೀಗೆ ಓಡುತ್ತಿದ್ದ ಗಣೇಶನನ್ನು ಶನಿದೇವರು ಕೂಗಿ ನಿಲ್ಲು ಎನ್ನುತ್ತಾರೆ ಮತ್ತು ಶನಿದೇವರು ಗಣೇಶನಿಗೆ ನಾನು ಯಾವುದೇ ತೊಂದರೆಯನ್ನು ನಿನಗೆ ಕೊಡುವುದಿಲ್ಲ, ಒಂದೇ ಒಂದು ನಿಮಿಷ ನಿನ್ನ ಜನ್ಮ ರಾಶಿಯನ್ನು ಪ್ರವೇಶ ಮಾಡಿ ಹೊರಟು ಹೋಗುತ್ತೇನೆ ಎನ್ನುತ್ತಾರೆ. ಆದರೆ ಇದಕ್ಕೆ ಒಪ್ಪದ ಗಣೇಶನು ಶನಿಯ ಸಹವಾಸವೇ ಬೇಡ ಎಂದು ಮತ್ತೆ ಓಡಲು ಪ್ರಾರಂಭಿಸುತ್ತಾರೆ.
ಆಗ ಗಣೇಶನ ಮಾತನ್ನು ಕೇಳಿ ಶನಿದೇವನಿಗೆ ಕೋಪ ಬಂದು ಇಂದು ಏನೇ ಆದರೂ ಸರಿ ಗಣೇಶನನ್ನು ಹಿಡಿಯಲೇ ಹಿಡಿಯುತ್ತೇನೆ ಎಂದು ಅವರು ಕೂಡ ಗಣೇಶನ ಹಿಂದೆ ಓಡಲು ಪ್ರಾರಂಭಿಸುತ್ತಾರೆ. ಎಷ್ಟೇ ದೂರ ಓಡಿದರೂ ಶನಿದೇವರು ಗಣೇಶನನ್ನು ಹಿಂಬಾಲಿಸುತ್ತ ಇರುತ್ತಾರೆ. ಆದ್ದರಿಂದ ಗಣೇಶನಿಗೆ ಆಯಾಸಗೊಂಡು ಒಂದು ಕಡೆ ನಿಲ್ಲುತ್ತಾರೆ. ಆಗ ಶನಿದೇವರು ನಗುನಗುತ್ತಾ ಗಣೇಶನ ಹತ್ತಿರ ಬರಲು ಪ್ರಾರಂಭಿಸಿದಾಗ ಅಲ್ಲಿ ಹುಲ್ಲನ್ನು ಮೇಯುತ್ತಿದ್ದ ಹಸಿವಿನ ಮುಂದೆ ಗರಿಕೆ ಯಾಗುತ್ತಾರೆ ಮತ್ತು ಹಸುವು ಆ ಗರಿಕೆಯನ್ನು ತಿನ್ನುತ್ತದೆ.
ಆಗ ಶನಿದೇವರು ಕೂಡ ಏನಾದರೂ ಸರಿ ಗಣೇಶನನ್ನು ಹಿಡಿಯಲೇ ಬೇಕು ಎಂದು ಶನಿದೇವರು ಸಹ ಗರಿಕೆಯಾಗುತ್ತಾರೆ. ಆಗ ಹಸು ಆ ಗರಿಕೆಯನ್ನು ಸಹ ತಿನ್ನುತ್ತದೆ. ಆಗ ಗಣೇಶನಿಗೆ ಒಂದು ಉಪಾಯ ಹೊಳೆದು ಹಸುವಿನ ಸಗಣಿಯ ಮುಖಾಂತರ ಮತ್ತೆ ಹೊರಗಡೆ ಬರುತ್ತಾರೆ. ಆಗ ಶನಿದೇವರು ಸಗಣಿಯಿಂದ ಹೊರಬರಲು ಇಚ್ಛೆ ಪಡೆದೆ ಗಣೇಶನನ್ನು ಬಿಟ್ಟು ತಮ್ಮ ಕೆಲಸಕ್ಕೆ ಹೋಗುತ್ತಾರೆ.
ಈ ಕಾರಣದಿಂದ ಶುಭಕಾರ್ಯವನ್ನು ಮಾಡಬೇಕಾದರೆ ಶನಿಯ ವಕ್ರದೃಷ್ಟಿ ಬೀಳಬಾರದೆಂದು ಗರಿಕೆ ಹಾಗೂ ಸಗಣಿಯನ್ನು ತಂದು ಸಗಣಿಯನ್ನು ಉಂಡೆ ಮಾಡಿ ಗರಿಕೆಯನ್ನು ಮುಡಿಸಿ ಗಣೇಶನನ್ನು ಪ್ರಥಮವಾಗಿ ಪೂಜಿಸಲಾಗುತ್ತದೆ ಎಂಬ ನಂಬಿಕೆಯು ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ.