ಸಾಮಾನ್ಯವಾಗಿ ಕೆಲವೊಬ್ಬರು ಸ್ಮಶಾನಕ್ಕೆ ಹೋಗುವುದಕ್ಕೆ ಹೆದರುತ್ತಾರೆ ಹಾಗೂ ಸತ್ತ ಹೆಣವನ್ನು ನೋಡುವುದಕ್ಕೂ ಭಯಪಡುತ್ತಾರೆ, ಮತ್ತೆ ಇನ್ನು ಕೆಲವರಿಗೆ ಸತ್ತವರನ್ನು ಕೊನೆಯ ಬಾರಿ ಕಣ್ತುಂಬ ನೋಡಿಕೊಳ್ಳಬೇಕು ಹಾಗೂ ಅವಕಾಶ ಸಿಕ್ಕರೆ ಅವರ ಕಾರ್ಯಗಳನ್ನು ಮಾಡಬೇಕು ಎಂಬ ಆಸೆ ಇರುತ್ತದೆ. ಈ ರೀತಿಯ ಗುಣವನ್ನು ಹೊಂದಿರುವ ವ್ಯಕ್ತಿಯು ದೈವಾಂಶವನ್ನು ಹೊಂದಿರುತ್ತಾನೆ ಹಾಗೂ ಶಿವ ಗಣದಲ್ಲಿ ಇರುವಂತಹ ಒಂದು ಗಣ ಆ ವ್ಯಕ್ತಿಯಲ್ಲಿ ಇರುತ್ತದೆ.ಸ್ಮಶಾನದ ಒಳಭಾಗದಲ್ಲಿ ಯಾವುದೇ ಆತ್ಮವು ವಾಸವಾಗಿ ಇರುವುದಿಲ್ಲ. ಸ್ಮಶಾನದ ಒಳಗಡೆ ಶಿವನ ತತ್ವ ಹಾಗೂ ಶಿವಗಣಗಳು ಇರುತ್ತವೆ. ಶಿವನ ಸ್ವರೂಪವಾಗಿರುವ ಕಾಲಭೈರವ, ಮಹಾಮುನಿಗಳು, ಮಹಾಋಷಿಗಳು ಹಾಗೂ ಶಿವನಿರುವ ಸ್ಥಳವಾಗಿರುವುದರಿಂದ ಅಮಾವಾಸ್ಯೆ ದಿನ ಮಾತ್ರ ಕಾಳಿಯು ಸ್ಮಶಾನ ಪ್ರವೇಶ ಮಾಡುತ್ತಾಳೆ. ಆತ್ಮಗಳು ಎಂದಿಗೂ ಸ್ಮಶಾನದ ಒಳಗಡೆ ವಾಸ ಮಾಡುವುದಿಲ್ಲ.
ಆತ್ಮಗಳು ಸ್ಮಶಾನದಿಂದ ಹೊರಗಡೆ ಜನರ ಅಕ್ಕಪಕ್ಕದಲ್ಲೇ ಇರುತ್ತದೆ. ಆತ್ಮಗಳು ವಾಸಮಾಡುವುದು ಮನೆಯಲ್ಲಿ, ಮನೆಯ ಮೆಟ್ಟಿಲಿನ ಕೆಳಗಡೆ, ಉಪಯೋಗ ಮಾಡದಂತಹ ಜಾಗದಲ್ಲಿ, ಹಳೆಯ ಕಟ್ಟಡವಾಗಿ ನಿಂತಿರುವ ಮನೆಗಳಲ್ಲಿ, ತುಂಬಾ ಇಷ್ಟವಾದ ಮರಗಳಲ್ಲಿ ಹಾಗೂ ಮರದ ಪೊಟರೆಗಳಲ್ಲಿ ವಾಸವಾಗಿರುತ್ತದೆ. ಹಸು, ಎಮ್ಮೆಯನ್ನು ಕಟ್ಟುವ ಜಾಗವಾದ ಕೊಠಕೆಯಲ್ಲಿ, ಮನೆಯ ಅಟ್ಟದ ಮೇಲೆ ಈ ರೀತಿ ಗೌಪ್ಯವಾದ ಸ್ಥಳದಲ್ಲಿ ಮನುಷ್ಯರನ್ನು ನೋಡಿ ಹೆದರಿ ವಾಸವಾಗಿರುತ್ತವೆ. ಈ ರೀತಿಯಾದ ಆತ್ಮಗಳು ಮನುಷ್ಯನಿಗೆ ಯಾವ ತೊಂದರೆಯನ್ನು ಕೊಡುವುದಿಲ್ಲ.ಕೆಲವೊಂದು ಆತ್ಮಗಳು ಕೆಲವರಿಗೆ ಉದ್ದೇಶಪೂರ್ವಕವಾಗಿಯೇ ತೊಂದರೆಯನ್ನು ಕೊಡಬೇಕೆಂದು ಬಂದಿರುತ್ತದೆ ಹಾಗೂ ಆ ಸಂದರ್ಭದಲ್ಲಿ ಆ ವ್ಯಕ್ತಿಗೆ ಆತ್ಮ ಗಳಿಂದ ತೊಂದರೆಯುಂಟಾಗುತ್ತದೆ. ಹಾಗಾಗಿ ಆತ್ಮಗಳು ನಮ್ಮ ಜೊತೆಯೇ ಇರುವಂಥವವು ಅದಕ್ಕೆ ಹೆದರುವ ಅವಶ್ಯಕತೆ ಇಲ್ಲ ಹಾಗೂ ಆತ್ಮಗಳು ಸ್ಮಶಾನದ ಒಳಗಡೆ ಎಂದೂ ವಾಸವನ್ನು ಮಾಡುವುದಿಲ್ಲ ಏಕೆಂದರೆ ಅದು ಶಿವನ ವಾಸಸ್ಥಾನ ವಾಗಿರುವುದರಿಂದ ಸ್ಮಶಾನದಿಂದ ಹೊರಗಡೆ ಆತ್ಮಗಳು ವಾಸವಾಗಿರುತ್ತವೆ.
ಈ ಸಮಸ್ಯೆಯಿಂದ ಹೊರಬರಬೇಕೆಂದರೆ ಪ್ರೇತ ಉಚ್ಚಾಟನೆ ಮಂತ್ರವನ್ನು ಹಾಕಿಕೊಳ್ಳಬೇಕು ಹಾಗೂ ಮನೆದೇವರು ಅಥವಾ ಕುಲದೇವರ ಮೇಲೆ ನಂಬಿಕೆಯನ್ನು ಇಟ್ಟು ಪೂಜೆ ಮಾಡಬೇಕು. ಶುಕ್ರವಾರದ ದಿನದಂದು ಮನೆಯಲ್ಲಿ ಧೂಪವನ್ನು ಹೆಚ್ಚಾಗಿ ಹಚ್ಚಬೇಕು.