ಗೋಮತಿ ಚಕ್ರವನ್ನು ಕೊರಳಿನಲ್ಲಿ ಧರಿಸಿದರೆ ಏನೆಲ್ಲಾ ಪ್ರಯೋಜನಗಳು ಲಭಿಸುತ್ತದೆ ಎಂಬುದು ತಿಳಿದಿದೆಯೇ ನಿಮಗೆ ?

ಜ್ಯೋತಿಷ್ಯ

ಪ್ರತಿಯೊಬ್ಬರಿಗೂ ತಾವು ಮಾಡುವ ಉದ್ಯೋಗದಲ್ಲಿ ಉನ್ನತಿಯನ್ನು ಪಡೆದುಕೊಳ್ಳಬೇಕು ಎಂಬ ಆಸೆ ಇರುತ್ತದೆ.ಇನ್ನು ಕೆಲವರಿಗೆ ಎಷ್ಟು ವರ್ಷದಿಂದ ಕಷ್ಟ ಪಟ್ಟು ದುಡಿದರು ಬಡ್ತಿಯನ್ನು ಪಡೆದುಕೊಳ್ಳಲು ಸಾದ್ಯವಾಗುತ್ತಿಲ್ಲ ಎಂದು ಕೊರಗುತ್ತಿರುತ್ತಾರೆ. ಗೋಮತಿ ಚಕ್ರದಿಂದ ಉದ್ಯೋಗದಲ್ಲಿ ಪ್ರಗತಿಯನ್ನು ಕಾಣಬಹುದು. ಒಟ್ಟಾರೆಯಾಗಿ ಗೋಮತಿ ಚಕ್ರದಿಂದ ನಾವು ಮಾಡುವ ಕೆಲಸದಲ್ಲಿ ಉನ್ನತಿಯನ್ನು ಹಾಗೂ ಯಶಸ್ಸನ್ನು ಕಾಣಬಹುದು.ಶುಕ್ರವಾರ ದಿನ ಲಕ್ಷ್ಮಿಯ ಅನುಗ್ರಹವಿರುವುದರಿಂದ ಗೋಮತಿ ಚಕ್ರವನ್ನು ಶುಕ್ರವಾರದ ದಿನದಂದು ಖರೀದಿ ಮಾಡಿ ಮನೆಗೆ ತರಬೇಕು. ಗೋಮತಿ ಚಕ್ರವನ್ನು ತಂದ ನಂತರ ಶುದ್ಧವಾದ ನೀರಿನಿಂದ ತೊಳೆದು ಪ್ರತಿನಿತ್ಯ ದೇವರಿಗೆ ಹೇಗೆ ಪೂಜೆ ಮಾಡುತ್ತೇವೆ ಹಾಗೆ ದೇವರಕೋಣೆಯಲ್ಲಿ ಇಟ್ಟು ಪೂಜೆಯನ್ನು ಮಾಡಬೇಕು. ಒಂದರ ಮೇಲಂತೆ ಒಂದು ಹೀಗೆ ಮೂರು ಗೋಮತಿ ಚಕ್ರವನ್ನು ಇಟ್ಟು ಪೂಜೆ ಮಾಡಿ ನಂತರ ಕೊರಳಿಗೆ ಹಾಕಿಕೊಳ್ಳಬೇಕು. ಒಂದು ವೇಳೆ ಕೊರಳಲ್ಲಿ ಹಾಕಿಕೊಳ್ಳಲು ಸಾಧ್ಯವಾಗದಿದ್ದರೆ ಪರ್ಸ್ ಅಲ್ಲೂ ಕೂಡ ಇಟ್ಟುಕೊಳ್ಳಬಹುದು.

ಗೋಮತಿ ಚಕ್ರವನ್ನು ಹಾಕಿಕೊಳ್ಳುವುದಕ್ಕೆ ಮುಂಚೆ ಬುದ್ದಿಮಾಂದ್ಯ ಮಕ್ಕಳಿಗೆ ಅಥವಾ ನೆನಪಿನ ಶಕ್ತಿ ಕಮ್ಮಿ ಇರುವಂತಹ ಮಕ್ಕಳಿಗೆ ಹಾಲನ್ನು ಅಥವಾ ಹಾಲಿನಿಂದ ಮಾಡಿದ ಪದಾರ್ಥವನ್ನು ಅಥವಾ ಅನ್ನವನ್ನು ದಾನದ ರೂಪದಲ್ಲಿ ಕೊಟ್ಟರೆ ತುಂಬಾ ಒಳ್ಳೆಯದು. ಮಾಂಸಾಹಾರ ಸೇವನೆ ಮಾಡುವವರು ಮಾಂಸಾಹಾರವನ್ನು ತಿನ್ನುವ ದಿನ ಗೋಮತಿ ಚಕ್ರವನ್ನು ಕೊರಳಿನಿಂದ ತೆಗೆದು ಒಂದು ಕಡೆ ಇಟ್ಟು ನಂತರ ಮಾಂಸ ಆಹಾರ ಸೇವನೆ ಮಾಡಬೇಕು. ಅದೇ ರೀತಿ ರಾತ್ರಿ ಮಲಗುವ ಮುನ್ನ ಗೋಮತಿ ಚಕ್ರವನ್ನು ತೆಗೆದು ಇಟ್ಟು ಮರುದಿನ ಸ್ನಾನವನ್ನು ಮಾಡಿ ಪೂಜೆಯನ್ನು ಮಾಡಿ ನಂತರ ಗೋಮತಿ ಚಕ್ರವನ್ನು ಕೊರಳಿನಲ್ಲಿ ಧರಿಸಿಕೊಳ್ಳಬೇಕು.ಗೋಮತಿ ಚಕ್ರವನ್ನು ಧರಿಸುವುದರಿಂದ ಲಕ್ಷ್ಮೀದೇವಿಯ ಕೃಪೆಯು ನಮ್ಮ ಮೇಲಿರಲಿದ್ದು ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಹಾಯಕವಾಗುತ್ತದೆ ಎಂದರೆ ತಪ್ಪಾಗಲಾರದು. ಇದರಿಂದ ವ್ಯಾಪಾರ ಮಾಡುವವರಿಗೆ ವ್ಯಾಪಾರದಲ್ಲಿ ಅಧಿಕ ಲಾಭ ದೊರೆಯುತ್ತದೆ ಹಾಗೂ ಉದ್ಯೋಗದಲ್ಲಿ ಉನ್ನತಿಯನ್ನು ಪಡೆದುಕೊಳ್ಳುತ್ತಾರೆ.

Leave a Reply

Your email address will not be published. Required fields are marked *