ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡುವ ಹೂವನ್ನು ಏನು ಮಾಡಬೇಕು ಎಂಬುದರ ಬಗ್ಗೆ ತಿಳಿದಿದೆಯೇ ನಿಮಗೆ ?

ಜ್ಯೋತಿಷ್ಯ

ಕೆಲವೊಂದು ಬಾರಿ ದೇವರಿಗೆ ನಮಸ್ಕರಿಸಲು ದೇವಸ್ಥಾನಕ್ಕೆ ಹೋದಾಗ ಪ್ರಸಾದವೆಂದು ಹೂವುಗಳನ್ನು ನೀಡಲಾಗುತ್ತದೆ. ಈ ರೀತಿಯಾಗಿ ದೇವಸ್ಥಾನದಲ್ಲಿ ಕೊಟ್ಟ ಹೂವನ್ನು ಏನು ಮಾಡಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಸಾಮಾನ್ಯವಾಗಿ ಕೆಲವೊಬ್ಬರು ದೇವಸ್ಥಾನದಲ್ಲಿ ಕೊಟ್ಟ ಹೂವನ್ನು ಜೇಬಿನಲ್ಲಿ ಅಥವಾ ಪರ್ಸಲ್ಲಿ ಇಟ್ಟುಕೊಳ್ಳುತ್ತಾರೆ. ಆದ್ದರಿಂದ ದೇವಸ್ಥಾನದಲ್ಲಿ ಪ್ರಸಾದವಾಗಿ ಕೊಟ್ಟ ಹೂವಿನಿಂದ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ದೇವಸ್ಥಾನದಲ್ಲಿ ಪ್ರಸಾದವಾಗಿ ಕೊಟ್ಟ ಹೂವಿನಿಂದ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಬೇಕು ಎಂದರೆ ದೇವಸ್ಥಾನದಲ್ಲಿ ಕೊಟ್ಟ ಹೂವನ್ನು ನೀವು ಮನೆಯಲ್ಲಿ ಹಣ ಇಡುವ ಸ್ಥಳದಲ್ಲಿ ಕೆಂಪು ಬಟ್ಟೆಯನ್ನು ಹಾಕಿ ಅದರ ಮೇಲೆ ಹೂವನ್ನು ಇಡಬೇಕು. ಈ ರೀತಿಯಾಗಿ ನೀವು ಯಾವ ಯಾವ ದೇವಸ್ಥಾನಕ್ಕೆ ತೆರಳುತ್ತಿರೋ ಅಲ್ಲಿ ಕೊಟ್ಟ ಹೂವನ್ನು ಕೆಂಪು ಬಟ್ಟೆಯಲ್ಲಿ ಹಾಕುತ್ತಾ ಬರುವುದರಿಂದ ನಿಮ್ಮ ಮನೆಯ ಆರ್ಥಿಕ ಪರಿಸ್ಥಿತಿ ದಿನದಿಂದ ದಿನಕ್ಕೆ ಏಳಿಗೆಯನ್ನು ಕಾಣಲು ಪ್ರಾರಂಭವಾಗುತ್ತದೆ.

ಹೂವು ಎಂಬುದು ದೇವರ ಪಾದದಲ್ಲಿ ಇರುತ್ತದೆ. ಆದ್ದರಿಂದ ದೇವಸ್ಥಾನದಲ್ಲಿ ಪ್ರಸಾದವೆಂದು ನೀಡಿದ ಹೂವು ಬಹಳ ಶ್ರೇಷ್ಠವಾಗಿರುತ್ತದೆ. ಒಂದು ವೇಳೆ ದೂರದಲ್ಲಿರುವ ದೇವಸ್ಥಾನಕ್ಕೆ ಹೋಗಿದ್ದರೆ, ಅಲ್ಲಿಂದ ಹೂವನ್ನು ತರಲು ಕಷ್ಟವಾದರೆ ದೇವಸ್ಥಾನದಲ್ಲಿ ಕೊಟ್ಟ ಹೂವನ್ನು ಕಣ್ಣಿಗೆ ಒತ್ತಿಕೊಂಡು ಅರಳಿಮರದ ಕೆಳಗೆ ಇಟ್ಟರೆ ತುಂಬಾ ಒಳ್ಳೆಯದು. ಒಂದು ವೇಳೆ ನೀವಿರುವ ಸ್ಥಳದಲ್ಲಿ ಅರಳಿಮರ ಇಲ್ಲದಿದ್ದರೆ ಹರಿಯುವ ನದಿಯಲ್ಲಿ ಹೂವನ್ನು ಬಿಟ್ಟರೆ ಒಳ್ಳೆಯದು. ಈ ರೀತಿ ಮಾಡುವುದರಿಂದಲೂ ಆ ಹೂವಿನಿಂದ ಸಂಪೂರ್ಣವಾದ ಲಾಭವು ದೊರೆಯುತ್ತದೆ.