ಅಮಾವಾಸ್ಯೆ ದಿನ ಈ ಪರಿಹಾರ ಮಾಡಿದರೆ ನರ ದೃಷ್ಟಿ ಹಾಗೂ ಕೆಟ್ಟ ದೃಷ್ಟಿಯಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು.

ಜ್ಯೋತಿಷ್ಯ

ಅಮಾವಾಸ್ಯೆ ದಿನ ಈ ಪರಿಹಾರ ಮಾಡಿದರೆ ನರ ದೃಷ್ಟಿ ಹಾಗೂ ಕೆಟ್ಟ ದೃಷ್ಟಿಯಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು..ಅಮಾವಾಸ್ಯೆಯ ದಿನದಂದು ಈ ಸರಳ ಪರಿಹಾರವನ್ನು ಮಾಡಿದರೆ ಎಂತಹದ್ದೇ ನರದೃಷ್ಟಿ, ಕೆಟ್ಟದೃಷ್ಟಿ ಹಾಗೂ ದುಷ್ಟಶಕ್ತಿ ಪ್ರಭಾವದಿಂದ ಮುಕ್ತರಾಗಬಹುದು. ಹಾಗಾದರೆ ಈ ಸರಳ ಪರಿಹಾರವನ್ನು ಯಾವ ರೀತಿ ಹಾಗೂ ಯಾವ ಸಮಯದಲ್ಲಿ ಮಾಡಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಮೊದಲಿಗೆ ಅಮಾವಾಸ್ಯೆ ದಿನದಂದು ಮನೆಯ ಬಾಗಿಲಿನ ಹೊರಗಡೆ ನಿಂತುಕೊಂಡು ನಿಂಬೆಹಣ್ಣನ್ನು ಎರಡು ಕೈಯಲ್ಲಿ ಹಿಡಿದುಕೊಂಡು ಬಲಭಾಗದಿಂದ ಮೂರು ಬಾರಿ ವೃತ್ತಾಕಾರವಾಗಿ ನಿವಾಳಿಸಬೇಕು.ತದನಂತರ ನಿಂಬೆಹಣ್ಣನ್ನು ಚಾಕುವಿನ ಸಹಾಯದಿಂದ ಎರಡು ಭಾಗ ಮಾಡಿಕೊಳ್ಳಬೇಕು. ನಿಂಬೆಹಣ್ಣನ್ನು ಭಾಗ ಮಾಡಿಕೊಂಡ ನಂತರ ಕುಂಕುಮದಲ್ಲಿ ನಿಂಬೆಹಣ್ಣನ್ನು ಅದ್ದಬೇಕು. ಭಾಗ ಮಾಡಿಕೊಂಡ ಎರಡು ನಿಂಬೆ ಹೋಳಿಗೆ ಸಂಪೂರ್ಣವಾಗಿ ಕುಂಕುಮವನ್ನು ಅದ್ದಬೇಕು.

ನಿಂಬೆಹಣ್ಣು ದೃಷ್ಟಿಯನ್ನು ನಿವಾಳಿಸುವುದಕ್ಕೆ ಮತ್ತು ದುಷ್ಟಶಕ್ತಿಯನ್ನು ಮಟ್ಟ ಹಾಕುವುದಕ್ಕೆ ತುಂಬಾ ಸಹಾಯಕಾರಿಯಾಗಿದೆ. ಈ ಪರಿಹಾರವನ್ನು ಅಮಾವಾಸ್ಯೆಯ ದಿನ ರಾತ್ರಿ 9 ಗಂಟೆಯ ನಂತರ ಮಾಡಬೇಕಾಗುತ್ತದೆ. ಈ ಪರಿಹಾರವನ್ನು ಮಾಡಬೇಕಾದರೆ ಯಾರು ನೋಡದೆ ಇದ್ದರೆ ತುಂಬಾ ಒಳ್ಳೆಯದು. ಭಾಗ ಮಾಡಿಕೊಂಡ ನಿಂಬೆ ಹೋಳಿಗೆ ಕುಂಕುಮ ಹಚ್ಚಿದ ನಂತರ ಅದರ ಮೇಲೆ 2 ಒಣ ಮೆಣಸಿಕಾಯಿ ಇಡಬೇಕು.

ತದನಂತರ ಮನೆಯ ಹೊಸ್ತಿಲಿನ ಎಡಭಾಗಕ್ಕೆ ಒಂದು ನಿಂಬೆ ಹೋಳನ್ನು ಹಾಗೂ ಮತ್ತೊಂದನ್ನು ಬಲಭಾಗಕ್ಕೆ ಇಡಬೇಕು. ಈ ಕೆಲಸ ಮಾಡಿದ ನಂತರ ಮರುದಿನ ಮುಂಜಾನೆ ಬೇಗ ಎದ್ದು ಹೊಸ್ತಿಲಿನ ಎರಡೂ ಭಾಗದಲ್ಲಿ ಇಟ್ಟಿದ್ದ ನಿಂಬೆ ಹೋಳನ್ನು ತೆಗೆದುಕೊಂಡು ಯಾರು ಓಡಾಡದೆ ಇರುವ ಜಾಗದಲ್ಲಿ ಹಾಕಬೇಕು. ನಿಂಬೆ ಹೋಳನ್ನು ಯಾರು ಓಡಾಡದೆ ಇರುವ ಜಾಗದಲ್ಲಿ ಹಾಕಿದ ನಂತರ ಮನೆಗೆ ಬಂದು ತಲೆಯಿಂದ ಸ್ನಾನ ಮಾಡಿದರೆ ತುಂಬಾ ಒಳ್ಳೆಯದು. ಈ ರೀತಿಯಾಗಿ ಮಾಡುವುದರಿಂದ ನರದೃಷ್ಟಿ, ಕೆಟ್ಟ ದೃಷ್ಟಿ ಅಥವಾ ನಿಮ್ಮ ಮನೆಯ ಮೇಲೆ ದುಷ್ಟಶಕ್ತಿಯ ಪ್ರಭಾವ ಬಿದಿದ್ದರೆ ಮತ್ತು ಮನೆಯ ಯಜಮಾನ ಕಷ್ಟಪಟ್ಟು ದುಡಿದ ಹಣ ಕೈಯಲ್ಲಿ ನಿಲ್ಲುತ್ತಿಲ್ಲ ಎಂದರೆ ಈ ಪರಿಹಾರ ಮಾಡುವುದರಿಂದ ಎಲ್ಲ ತೊಂದರೆಗಳಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು.

Leave a Reply

Your email address will not be published. Required fields are marked *