ಆಕಸ್ಮಿಕವಾಗಿ ತಿಳಿದೋ ಅಥವಾ ತಿಳಿಯದೆ ಸರ್ಪಕ್ಕೆ ತೊಂದರೆಯಾದರೆ ಏನಾಗುತ್ತದೆ ಎಂಬುದು ತಿಳಿದಿದೆಯೇ ?

ಜ್ಯೋತಿಷ್ಯ

ಒಂದೊಂದು ಪ್ರಾಂತ್ಯದಲ್ಲಿ ಒಂದೊಂದು ರೀತಿಯಲ್ಲಿ ದೇವರ ಆರಾಧನೆಯನ್ನು ಮಾಡುತ್ತಾರೆ. ಮುಖ್ಯವಾಗಿ ನಾಗದೇವರ ಆರಾಧನೆಗೆ ವಿಶೇಷವಾದ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಈ ಪ್ರಾಣಿಯನ್ನು ದೈವ ರೂಪದಲ್ಲಿ ಪೂಜೆ ಮಾಡಲಾಗುತ್ತದೆ. ಒಂದು ವೇಳೆ ಮನುಷ್ಯನಿಂದ ಆ ಪ್ರಾಣಿಗೆ ತೊಂದರೆಯಾದರೆ ಅವನು ಮುಂದಿನ ಪೀಳಿಗೆಗೆ ಅಥವಾ ಅವನಿಗೆ ಬಹಳಷ್ಟು ರೀತಿಯಲ್ಲಿ ತೊಂದರೆಯನ್ನು ಕೊಡುತ್ತದೆ. ವಿಶೇಷವಾಗಿ ಸರ್ಪಗಳಿಗೆ ಈ ರೀತಿ ತೊಂದರೆಯಾದಾಗ ಮುಂದಿನ ಪೀಳಿಗೆ ಏಳಿಗೆ ಆಗುವುದು ಬಹಳ ಕಷ್ಟ.ಮುಖ್ಯವಾಗಿ ಮನೆಯಲ್ಲಿ ಯಾವುದೇ ಶುಭ ಕಾರ್ಯ ನಡೆಯಲು ಬಿಡುವುದಿಲ್ಲ ಮತ್ತು ಚರ್ಮದ ರೋಗಗಳು ಶುರುವಾಗಲು ಪ್ರಾರಂಭವಾಗುತ್ತದೆ. ಸರ್ಪವನ್ನು ದೇವರಾಗಿ ಪೂಜೆ ಮಾಡುತ್ತಿದ್ದೇವೆ, ಆಕಸ್ಮಿಕವಾಗಿ ನಮಗೆ ತಿಳಿಯದೆ ಸರ್ಪಕ್ಕೆ ತೊಂದರೆಯಾದಾಗ ಮತ್ತು ಅದಕ್ಕೆ ಮೋಕ್ಷ ಸಿಗದೆ ಇದ್ದಾಗ, ಮನುಷ್ಯನ ದೇಹದ ಮೇಲೆ ಅದರಲ್ಲೂ ಚರ್ಮದ ಸಮಸ್ಯೆಯಿಂದ ಬಳಲುವಂತೆ ಆಗುತ್ತದೆ.
ಒಂದು ವೇಳೆ ದಾರಿಯಲ್ಲಿ ಹೋಗಬೇಕಾದರೆ ಆಕಸ್ಮಿಕವಾಗಿ ಸರ್ಪ ಕಂಡು ನಮಗೆ ತಿಳಿಯದೆ ಏನಾದರೂ ಅವಘಡ ಆಗಿದ್ದರೆ ನಾವು ಅದನ್ನು ಹಾಗೆ ಬಿಟ್ಟು ಹೋಗಬಾರದು ಅದಕ್ಕೆ ಸಂಸ್ಕಾರವನ್ನು ಮಾಡಬೇಕು. ಒಂದು ವೇಳೆ ಸರ್ಪಕ್ಕೆ ಮೋಕ್ಷ ಸಿಗದೆ ಇದ್ದಾಗ ದೇಹದ ಹಲವಾರು ಭಾಗದಲ್ಲಿ ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ. ಅದರಲ್ಲೂ ಮುಖ್ಯವಾಗಿ ದೇಹದ ಚರ್ಮ ಕಪ್ಪಾಗುತ್ತ ಬರುತ್ತದೆ, ದೇಹದಿಂದ ಚರ್ಮವು ಎಡೆಯುತ್ತಾ ಬರುತ್ತದೆ.ಈ ರೀತಿಯ ಸಮಸ್ಯೆ ಇದ್ದಾಗ ಭಾನುವಾರದ ದಿನ ಹುತ್ತದ ಮಣ್ಣನ್ನು ತೆಗೆದುಕೊಂಡು ಮನೆಯಲ್ಲಿ ಶೇಖರಣೆ ಮಾಡಿ ಇಡಬೇಕು. ಸೋಮವಾರದ ದಿನ ಸೂರ್ಯ ಉದಯಿಸುವುದಕ್ಕಿಂತ ಮುಂಚೆ ಮನೆಯಲ್ಲಿ ಶೇಖರಣೆ ಮಾಡಿದ ಹುತ್ತದ ಮಣ್ಣಿನಿಂದ ಶಿವಲಿಂಗವನ್ನು ಮಾಡಬೇಕು. ಶಿವಲಿಂಗವನ್ನು ಮಾಡಿದ ನಂತರ ಪ್ರತಿನಿತ್ಯ 108 ಬಿಲ್ವಪತ್ರೆಯನ್ನು ಇಟ್ಟು ಪೂಜೆಯನ್ನು ಮಾಡಬೇಕು. ಈ ರೀತಿಯ ಪೂಜೆಯನ್ನು 21 ದಿನಗಳ ಕಾಲ ಪ್ರತಿನಿತ್ಯವೂ ಮಾಡಬೇಕು. 22 ನೇ ದಿನ ಹರಿಯುವ ನದಿಯ ತೀರಕ್ಕೆ ಹೋಗಿ ಅಲ್ಲಿ ಕುಳಿತುಕೊಂಡು ಶಿವಲಿಂಗವನ್ನು ಕರಗಿಸಬೇಕು. ಶಿವಲಿಂಗವನ್ನು ಕರಗಿಸಿದ ನಂತರ ಆ ಮಣ್ಣನ್ನು ತೆಗೆದುಕೊಂಡು ದೇಹದ ಯಾವ ಭಾಗದಲ್ಲಿ ಸಮಸ್ಯೆ ಉದ್ಭವವಾಗಿ ಇರುತ್ತದೆಯೋ ಆ ಭಾಗಕ್ಕೆ ಲೇಪನ ಮಾಡಿಕೊಂಡು ನಂತರ ಸ್ನಾನ ಮಾಡುವುದರಿಂದ ನಿಮ್ಮ ಸಮಸ್ಯೆಗಳೆಲ್ಲ ಪರಿಹಾರವಾಗುತ್ತದೆ.