ಮಕ್ಕಳಿಗೆ ವಿದ್ಯಾಭ್ಯಾಸದ ಕಡೆ ಆಸಕ್ತಿಯಿಲ್ಲ ಎಂದರೆ ಈ ಉಪಾಯವನ್ನು ಮಾಡಿ ನೋಡಿ.

ಜ್ಯೋತಿಷ್ಯ

ಕೋವಿಡ್ ಕಾರಣದಿಂದಾಗಿ ಇಡೀ ರಾಜ್ಯವೇ ಲಾಕ್ ಡೌನ್ ಆಗಿರುವುದರಿಂದ ಬಹಳಷ್ಟು ಮಂದಿಗೆ ತೊಂದರೆಯಾಗಿದೆ. ಅದರಲ್ಲೂ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಬಹಳ ತೊಂದರೆಯಾಗಿದೆ. ಮಕ್ಕಳ ಭವಿಷ್ಯವನ್ನು ರೂಪಿಸಬೇಕೆಂದು ತಂದೆ-ತಾಯಿಗಳು ಬಹಳಷ್ಟು ಕನಸನ್ನು ಪಟ್ಟಿರುತ್ತಾರೆ, ಆದರೆ ಈಗಿರುವ ಸಂದರ್ಭವನ್ನು ನೋಡಿದರೆ ಬುದ್ಧಿವಂತ ಮಕ್ಕಳು ಕೂಡ ಮಂದಹೀನ ಬುದ್ಧಿಯವರು ಆಗುತ್ತಿದ್ದಾರೆ. ಮಕ್ಕಳಿಗೆ ವಿದ್ಯಾಭ್ಯಾಸದ ಕೊರತೆ ಶುರುವಾಗಿದೆ ಹಾಗೂ ಇದರಿಂದ ಜ್ಞಾಪಕ ಶಕ್ತಿಯೂ ಕಡಿಮೆಯಾಗುತ್ತಿದೆ. ಆದರೆ ಇದರಿಂದ ಮಕ್ಕಳ ಮೇಲೆ ಯಾವುದೇ ಕಾರಣಕ್ಕೂ ತಂದೆ-ತಾಯಂದಿರು ಒತ್ತಡವನ್ನು ಹಾಕಬಾರದು. ಈ ಕಾರಣಗಳಿಗಾಗಿಯೇ ವಿಶೇಷವಾದ ಹಯಗ್ರೀವ ಸ್ವಾಮಿಯ ಮೂಲ ಮಂತ್ರವನ್ನು ಜಪಿಸಬೇಕು.

ಒಂದು ವೇಳೆ ಮಕ್ಕಳಿಗೆ ವಿದ್ಯಾಭ್ಯಾಸದ ಕೊರತೆ ಆಗುತ್ತಿದೆ ಅಥವಾ ಎಷ್ಟು ಓದಿದರೂ ಜ್ಞಾಪಕಶಕ್ತಿ ಇಲ್ಲ ಎನ್ನುವವರು ಹಯಗ್ರೀವ ಸ್ವಾಮಿಯ ಮಂತ್ರವನ್ನು ತಂದೆ-ತಾಯಿಯರು ತಮ್ಮ ಮಕ್ಕಳ ಕೈಯಲ್ಲಿ ಹೇಳಿಸಬೇಕು. ಈ ಮಂತ್ರವನ್ನು ಜಪಿಸಿದರೆ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ ಹಾಗೂ ವಿದ್ಯೆಯಲ್ಲಿ ಏಳಿಗೆಯನ್ನು ಸಹ ಕಾಣಬಹುದು.

ಹಯಗ್ರೀವ ಸ್ವಾಮಿಯ ಚಿತ್ರಪಟವನ್ನು ಮಗು ಎಲ್ಲಿ ವಿದ್ಯಾಭ್ಯಾಸ ಮಾಡುತ್ತದೆಯೋ ಅಲ್ಲಿ ಹಾಕಬೇಕು, ನಂತರ ಒಂದು ಲೋಟದಲ್ಲಿ ಹಾಲನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಕಲ್ಲುಸಕ್ಕರೆಯನ್ನು ಹಾಕಬೇಕು. ಕಲ್ಲುಸಕ್ಕರೆ ಹಾಕಿದ ನಂತರ ಈ ಮಂತ್ರವನ್ನು ಜಪಿಸಿ ಪ್ರತಿನಿತ್ಯ ಮುಂಜಾನೆ ಹಾಗೂ ಸಾಯಂಕಾಲ ಈ ಹಾಲನ್ನು ಕುಡಿಸಬೇಕು.

‘ವಿದ್ಯಾನಂದಂ ಮಯಂ ದೇವಂ
ನಿರ್ಮಲಂ ಸ್ಪಟಿಕಕೃತಿಂ ಆಧಾರಂ
ಸರ್ವ ವಿದ್ಯಾನಾಂ ಹಯಗ್ರೀವಂ
ಉಪಸ್ಮಹೆ’

ಈ ಮಂತ್ರವನ್ನು 21 ಬಾರಿ ಜಪಿಸಿ ನಂತರ ಹಾಲನ್ನು ಕುಡಿಯುವುದರಿಂದ ವಿದ್ಯಾಪ್ರಾಪ್ತಿಯು ಆ ಮಗುವಿಗೆ ಆಗುತ್ತದೆ. ಇದರಿಂದ ಮಗುವಿನಲ್ಲಿ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ ಹಾಗೂ ಓದಿನ ಕಡೆ ಆಸಕ್ತಿಯೂ ಬರುತ್ತದೆ.

Leave a Reply

Your email address will not be published. Required fields are marked *