ಈ ವಸ್ತುವನ್ನು ಬೇರೆಯವರಿಗೆ ಕೊಟ್ಟರೆ ದರಿದ್ರತನ ಬರುವುದು ಖಚಿತ

ಜ್ಯೋತಿಷ್ಯ

ಈ ಒಂದು ವಸ್ತುವನ್ನು ಮನೆಗೆ ಯಾರಾದರೂ ಬಂದಾಗ ಯಾವುದೇ ಕಾರಣಕ್ಕೂ ನೀಡಬಾರದು. ಒಂದು ವೇಳೆ ಈ ವಸ್ತುವನ್ನು ಕೊಟ್ಟಿದ್ದೆ ಆದಲ್ಲಿ ಕಷ್ಟದ ದಿನಗಳು ಪ್ರಾರಂಭವಾಗುತ್ತದೆ ಹಾಗೂ ಜೀವನಪರ್ಯಂತ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಹಾಗಾದರೆ ಮನೆಯಲ್ಲಿರುವ ಯಾವ ಒಂದು ವಸ್ತುವನ್ನು ಬೇರೆಯವರಿಗೆ ನೀಡಬಾರದು ಎಂದು ತಿಳಿದುಕೊಳ್ಳೋಣ ಬನ್ನಿ.ಜೀವನದಲ್ಲಿ ಮನುಷ್ಯನು ಶ್ರೀಮಂತನಾಗಬೇಕು ಎಂದರೆ ತಾಯಿ ಮಹಾಲಕ್ಷ್ಮಿ ಆಶೀರ್ವಾದ ಮುಖ್ಯವಾಗಿರುತ್ತದೆ. ಲಕ್ಷ್ಮೀದೇವಿಗೆ ಶುಚಿ ಎಂದರೆ ಬಹಳ ಇಷ್ಟ, ಆದ್ದರಿಂದ ಮನೆಯನ್ನು ಯಾವಾಗಲೂ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಲಕ್ಷ್ಮಿ ದೇವಿಗೆ ಸಂಬಂಧಿಸಿದಂತಹ ವಸ್ತುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಲಕ್ಷ್ಮಿ ದೇವಿಗೆ ಸಂಬಂಧಿಸಿದ ವಸ್ತುಗಳೆಂದರೆ ರುಬ್ಬುವ ಕಲ್ಲು, ಪೊರಕೆ, ಮನೆಯ ಮುಖ್ಯದ್ವಾರದ ಹೊಸ್ತಿಲು ಈ ರೀತಿಯಾದ ವಸ್ತುಗಳನ್ನು ಕಾಲಿನಿಂದ ತುಳಿಯುವುದು ಆಗಲಿ ಅಥವಾ ಕುಳಿತುಕೊಳ್ಳುವುದು ಆಗಲಿ ಅದರ ಮೇಲೆ ಮಾಡಬಾರದು. ಮನೆಯಲ್ಲಿ ತುಳಸಿ ಗಿಡವನ್ನು ಇಟ್ಟು ಪೂಜೆ ಮಾಡುವುದರಿಂದ ಮನೆಗೆ ರಕ್ಷಣೆಯೂ ದೊರೆಯುತ್ತದೆ ಹಾಗೂ ಹೀಗೆ ಪೂಜೆ ಮಾಡುವುದರಿಂದ ಲಕ್ಷ್ಮೀದೇವಿ ಅನುಗ್ರಹವು ಪ್ರಾಪ್ತಿಯಾಗುತ್ತದೆ.

ಮಲಗುವ ಕೋಣೆಯ ಹಾಸಿಗೆಯ ಮೇಲೆ ಯಾವುದೇ ಕಾರಣಕ್ಕೂ ಹಣವನ್ನು ಮತ್ತು ಚಿನ್ನಾಭರಣವನ್ನು ಇಡಬಾರದು. ಒಂದು ವೇಳೆ ಮಲಗುವ ಹಾಸಿಗೆಯ ಮೇಲೆ ಹಣವನ್ನು ಅಥವಾ ಆಭರಣವನ್ನು ಇಟ್ಟಿದ್ದೆ ಆದಲ್ಲಿ ದರಿದ್ರತನ ಎಂಬುದು ಪ್ರಾರಂಭವಾಗುತ್ತದೆ ಹಾಗೂ ಕಷ್ಟಗಳು ದಿನೇದಿನೇ ಹೆಚ್ಚಾಗುತ್ತದೆ. ಸುಮಂಗಲಿಯರು, ಮುತ್ತೈದೆಯರು ಅಥವಾ ಹೆಣ್ಣು ಮಕ್ಕಳು ಮನೆಯಲ್ಲಿ ಉಪಯೋಗಿಸುವ ಕೊಬ್ಬರಿ ಎಣ್ಣೆಯನ್ನು ಯಾವುದೇ ಕಾರಣಕ್ಕೂ ಬೇರೆಯವರಿಗೆ ಕೊಡಬಾರದು.ಒಂದು ವೇಳೆ ನಿಮ್ಮ ಮನೆಗೆ ಬಂಧು ಮಿತ್ರರು ಅಥವಾ ಸ್ನೇಹಿತರು ಬಂದರೆ ಅವರಿಗೆ ಹೊಸದಾದ ಒಂದು ಕೊಬ್ಬರಿಎಣ್ಣೆಯ ಡಬ್ಬವನ್ನು ಕೊಡಬೇಕು ಹಾಗೂ ಯಾವುದೇ ಕಾರಣಕ್ಕೂ ಮನೆಯಲ್ಲಿ ಉಪಯೋಗಿಸಿದ ಕೊಬ್ಬರಿ ಎಣ್ಣೆಯನ್ನು ಕೊಡಬೇಡಿ. ಒಂದು ವೇಳೆ ನೀವೇನಾದರೂ ಕೊಬ್ಬರಿ ಎಣ್ಣೆಯನ್ನು ಕೊಟ್ಟಿದ್ದೆ ಆದಲ್ಲಿ ಲಕ್ಷ್ಮೀದೇವಿಯು ನಿಮ್ಮ ಮನೆಯಲ್ಲಿ ನೆಳೆಸುವುದಿಲ್ಲ ಮತ್ತು ನೀವು ಯಾರಿಗೆ ಕೊಬ್ಬರಿ ಎಣ್ಣೆಯನ್ನು ಕೊಡುತ್ತಿರೋ ಅವರ ಮನೆಗೆ ಲಕ್ಷ್ಮೀದೇವಿಯು ಹೊರಟು ಹೋಗುತ್ತಾಳೆ. ಇದರಿಂದ ಮನೆಯಲ್ಲಿ ಹಣಕಾಸಿನ ಸಮಸ್ಯೆ ಶುರುವಾಗಿ ಸಾಲ ಮಾಡುವ ಸ್ಥಿತಿಗೆ ಬರಬೇಕಾಗುತ್ತದೆ. ಕೊಬ್ಬರಿ ಎಣ್ಣೆಯನ್ನು ಯಾವುದೇ ಕಾರಣಕ್ಕೂ ಚೆಲ್ಲಬೇಡಿ ಹಾಗೂ ಅದನ್ನು ತುಳಿಯಬೇಡಿ ಇದರಿಂದ ಲಕ್ಷ್ಮೀದೇವಿಯು ಕೋಪಗೊಳ್ಳುತ್ತಾಳೆ.

Leave a Reply

Your email address will not be published. Required fields are marked *