ಕಾಲಿನಲ್ಲಿರುವ ಉದ್ದವಾದ ಬೆರಳಿನ ರಹಸ್ಯ ತಿಳಿದಿದೆಯೇ ನಿಮಗೆ ?

ಜ್ಯೋತಿಷ್ಯ

ಸಾಮಾನ್ಯವಾಗಿ ಕಾಲಿನಲ್ಲಿರುವ ಬೆರಳುಗಳು ನೇರವಾಗಿ ಸಮನಾಗಿರುತ್ತದೆ. ಆದರೆ ಕೆಲ ಜನರ ಕಾಲಿನ ಬೆರಳುಗಳು ಅಂಕುಡೊಂಕಾಗಿ ಇರುತ್ತದೆ. ಕೆಲವೊಮ್ಮೆ ಕಾಲಿನ ಹೆಬ್ಬೆರಳಿಗಿಂತ ಕಿರು ಬೆರಳುಗಳು ಎತ್ತರವಾಗಿರುತ್ತದೆ. ಆದ್ದರಿಂದ ಕಾಲಿನ ಬೆರಳುಗಳಿಗೆ ವಿಭಿನ್ನವಾದ ಮಹತ್ವವಿರುತ್ತದೆ. ಶಾಸ್ತ್ರಗಳ ಪ್ರಕಾರ ದೇಹದಲ್ಲಿರುವ ಪ್ರತಿಯೊಂದು ಅಂಗವೂ ಅವರವರ ಬಗ್ಗೆ ತಿಳಿಸಿಕೊಡುತ್ತದೆ. ಒಂದು ವೇಳೆ ವ್ಯಕ್ತಿಯ ಶರೀರದ ಅಂಗಗಳನ್ನು ಸರಿಯಾಗಿ ಗಮನಿಸಿದರೆ ಆ ವ್ಯಕ್ತಿಯ ಬಗ್ಗೆ ಹಲವಾರು ರಹಸ್ಯಗಳು ಗೊತ್ತಾಗುತ್ತದೆ. ಇದರಿಂದ ವ್ಯಕ್ತಿಯ ಸ್ವಭಾವ ಹೇಗಿರುತ್ತದೆ ಹಾಗೂ ವ್ಯಕ್ತಿತ್ವ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದು. ಹಾಗಾದರೆ ಕಾಲಿನಲ್ಲಿರುವ ಉದ್ದವಾದ ಬೆರಳು ಏನನ್ನು ಸೂಚಿಸುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಒಂದು ವೇಳೆ ಯಾವ ವ್ಯಕ್ತಿಯ ಕಾಲಿನ ಹೆಬ್ಬೆರಳಿನ ಪಕ್ಕದ ಬೆರಳು ಉದ್ದವಾಗಿದ್ದು ಮತ್ತು ಉಳಿದೆಲ್ಲ ಬೆರಳುಗಳು ಚಿಕ್ಕದಾಗಿದ್ದರೆ ಆ ವ್ಯಕ್ತಿಯು ತುಂಬಾ ಶಕ್ತಿಶಾಲಿಯಾಗಿರುತ್ತಾರೆ. ಯಾವುದಾದರೂ ಹೊಸ ಆಲೋಚನೆಯಿಂದ ಸಾಧನೆಯನ್ನು ಮಾಡಲು ತುಂಬಾ ಉತ್ಸುಕರಾಗಿರುತ್ತಾರೆ. ಇಂಥವರು ಅಂದುಕೊಂಡ ಕೆಲಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತಾರೆ.ಒಂದು ವೇಳೆ ಕಾಲಿನ ಹೆಬ್ಬೆರಳಿನ ಪಕ್ಕದ ಬೆರಳು ಚಿಕ್ಕದಾಗಿದ್ದರೆ ಅಂತಹ ವ್ಯಕ್ತಿಗಳು ಜೀವನದಲ್ಲಿ ಎಂದಿಗೂ ಖುಷಿಯಾಗಿರುತ್ತಾರೆ. ಒಂದು ವೇಳೆ ಹೆಬ್ಬೆರಳಿನ ಪಕ್ಕದ ಬೆರಳು ಸಮನಾಗಿದ್ದರೆ ಅಂದರೆ ಹೆಬ್ಬೆರಳು ಹಾಗೂ ಪಕ್ಕದ ಬೆರಳು ಒಂದೇ ಸಮವಿದ್ದು ಹಾಗೂ ಉಳಿದೆಲ್ಲ ಬೆರಳುಗಳು ಚಿಕ್ಕದಾಗಿದ್ದರೆ ಅಂತಹ ವ್ಯಕ್ತಿಗಳು ಸಮಾಜದಲ್ಲಿ ದೊಡ್ಡ ಹೆಸರನ್ನು ಸಂಪಾದಿಸುತ್ತಾರೆ ಎಂದು ಸೂಚಿಸುತ್ತದೆ. ಇಂಥ ವ್ಯಕ್ತಿಗಳು ಶಾಂತ ಸ್ವಭಾವದಿಂದ ಕೂಡಿರುತ್ತಾರೆ ಹಾಗೂ ಯಾರೊಂದಿಗೂ ವಿನಾಕಾರಣ ಜಗಳವನ್ನು ಮಾಡುವುದಿಲ್ಲ.ಒಂದು ವೇಳೆ ಕಾಲಿನ ಬೆರಳುಗಳು ಯಾವ ವ್ಯಕ್ತಿಯಲ್ಲಿ ಇಳಿಮುಖವಾಗಿ ಹೋಗಿರುತ್ತದೆಯೋ ಅಂತ ವ್ಯಕ್ತಿಗಳು ತಮ್ಮ ಶ್ರೇಷ್ಟತೆಯನ್ನು ತೋರಿಸಿಕೊಳ್ಳಲು ಶ್ರಮವಹಿಸುತ್ತಾರೆ, ಅಧಿಕಾರದ ಮಾತುಗಳನ್ನು ಜಾಸ್ತಿಯಾಗಿ ಆಡುತ್ತಾರೆ, ಇಂತಹ ವ್ಯಕ್ತಿಗಳು ಏನು ಯೋಚನೆ ಮಾಡುತ್ತಾರೋ ಅದು ಸರಿ ಎಂದು ಭಾವಿಸುತ್ತಾರೆ. ಒಂದು ವೇಳೆ ಇಂಥ ವ್ಯಕ್ತಿಗಳ ಮಾತನ್ನು ಮನೆಯಲ್ಲಿ ಕೇಳದಿದ್ದರೆ ಅವರ ಮೇಲೆ ಕೋಪಗೊಳ್ಳುತ್ತಾರೆ.