ವಿಧವೆಯರು ಶುಭಕಾರ್ಯಗಳಿಗೆ ಹೋದರೆ ಅದು ಶುಭವೋ ಅಥವಾ ಅಶುಭವೋ ತಿಳಿದಿದೆಯೇ ನಿಮಗೆ ?

ಜ್ಯೋತಿಷ್ಯ

ಹುಟ್ಟು ಮತ್ತು ಸಾವು ಎಂಬುದು ಯಾರ ಕೈಯಲ್ಲೂ ಇರುವುದಿಲ್ಲ, ಆದ್ದರಿಂದ ಹಿರಿಯರು ಹೇಳುವುದು ಹುಟ್ಟು ಉಚಿತ ಸಾವು ಖಚಿತ ಎಂದು. ವ್ಯಕ್ತಿಯು ಸತ್ತ ಮೇಲೆ ಅವನು ಸಂಪಾದನೆ ಮಾಡಿದ ಹಣ ವನ್ನಾಗಲಿ,ವಾಹನವನ್ನು ಆಗಲಿ ಅಥವಾ ಚಿನ್ನಾಭರಣವನ್ನು ಆಗಲಿ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಆದರೆ ವ್ಯಕ್ತಿಯು ಸತ್ತ ನಂತರ ಅವನು ಮಾಡಿದ ಪಾಪ ಕರ್ಮಗಳನ್ನು ತೆಗೆದುಕೊಂಡು ಹೋಗುತ್ತಾನೆ. ಪತಿಯು ಸತ್ತ ನಂತರ ಯಾವ ರೀತಿ ಪತ್ನಿಯನ್ನು ವಿಧವೆ ಎಂದು ಕರೆಯುತ್ತೇವೋ ಹಾಗೆಯೇ ಒಂದು ವೇಳೆ ಪತ್ನಿಯು ಸತ್ತರೆ ಗಂಡನನ್ನು ವಿಧುರ ಎಂದು ಕರೆಯಲಾಗುತ್ತದೆ.

ಒಂದು ಹೆಣ್ಣಿಗೆ ಗಂಡನು ಸತ್ತ ನಂತರ ಅರಿಶಿನ ಕುಂಕುಮ ಕೊಡುವುದಕ್ಕೂ ಹಾಗೂ ಶುಭ ಸಮಾರಂಭಗಳಲ್ಲಿ ಆರತಿ ಮಾಡುವುದಕ್ಕೆ ಕರೆಯುವುದಿಲ್ಲವೂ ಅದೇ ರೀತಿ ಪತ್ನಿಯು ಸತ್ತು ಹೋಗಿದ್ದರೆ ಗಂಡನನ್ನು ಯಾವುದೇ ರೀತಿಯ ಒಳ್ಳೆಯ ಕೆಲಸವನ್ನು ಶುಭಕಾರ್ಯದಲ್ಲಿ ಮಾಡಲು ಕರೆಯುವುದಿಲ್ಲ, ಏಕೆಂದರೆ ಪತಿಯೂ ಕೂಡ ಆಶುಭನಾಗಿರುತ್ತಾನೆ.ಒಂದು ಹೆಣ್ಣು ಹುಟ್ಟಿದರೆ ಅರಿಶಿನ ಕುಂಕುಮ ಶೋಭಿತಳಾದಳು ಎಂದು ಹೇಳಲಾಗುತ್ತದೆ. ಮದುವೆಯಾದಾಗ ಅರಿಶಿನ ಕುಂಕುಮವನ್ನು ಯಾರೂ ಕೊಡುವುದಿಲ್ಲ, ಹುಟ್ಟಿದ ತಕ್ಷಣವೇ ಅವಳು ಅದನ್ನು ಗಳಿಸಿರುತ್ತಾಳೆ. ಆದ್ದರಿಂದ ಒಂದು ವೇಳೆ ಗಂಡನ ಸತ್ತು ಹೋದರು ಅರಿಶಿನ-ಕುಂಕುಮವನ್ನು ಇಟ್ಟುಕೊಳ್ಳಬಹುದು ಆದರೆ ಅಲಂಕಾರವನ್ನು ಮಾಡಿಕೊಳ್ಳಬಾರದು.ಒಂದು ವೇಳೆ ಅಲಂಕಾರ ಮಾಡಿಕೊಂಡರೆ ಶಾಸ್ತ್ರದ ವಿರುದ್ಧವಾಗುತ್ತದೆ.ಒಂದು ವೇಳೆ ಪತಿಯು ಸತ್ತು ಹೋಗಿದ್ದರೆ ಪತ್ನಿಯ ಕೈಯಲ್ಲಿ ಮೊದಲನೇ ಶುಭಕಾರ್ಯವನ್ನು ಮಾಡಿಸುವುದಿಲ್ಲ. ಹಾಗೆಯೇ ಪತ್ನಿ ಸತ್ತು ಹೋಗಿದ್ದಾರೆ ಪತಿಯ ಕೈಯಲ್ಲಿ ಯಾವುದೇ ರೀತಿಯ ಮೊದಲನೆಯ ಶುಭಕಾರ್ಯವನ್ನು ಮಾಡಿಸುವುದಿಲ್ಲ. ಏಕೆಂದರೆ ಇವೆರಡೂ ವಿಷಯಗಳು ಅತಿ ಮುಖ್ಯವಾಗಿರುತ್ತದೆ ಒಂದು ವೇಳೆ ಮಾಡಿಸಿದರೆ ಅದು ಶಾಸ್ತ್ರದ ವಿರುದ್ಧವಾಗಿರುತ್ತದೆ. ಹಾಗೆಂದು ಯಾವುದೇ ಕಾರಣಕ್ಕೂ ಅಂತವರ ಮನಸ್ಸನ್ನು ನೋಯಿಸಬಾರದು ಮತ್ತು ಅವರಿಗೂ ಒಂದು ಒಳ್ಳೆಯ ಸ್ಥಾನಮಾನವನ್ನು ನೀಡಬೇಕು.

Leave a Reply

Your email address will not be published. Required fields are marked *