ಕಾಂಚಿಪುರಂನ ಕಂಚಿ ಏಕಾಂಬರೇಶ್ವರ ದೇವಸ್ಥಾನದ ಬಗ್ಗೆ ಕಿರು ಪರಿಚಯ..

ಪುಣ್ಯ ಕ್ಷೇತ್ರಗಳ ಮಾಹಿತಿ

ಕಾಂಚಿಪುರಂನ ಕಂಚಿ ಏಕಾಂಬರೇಶ್ವರ ದೇವಸ್ಥಾನದ ಬಗ್ಗೆ ಕಿರು ಪರಿಚಯ..ಜಗತ್ತಿನ ಪ್ರತಿಯೊಂದು ಜೀವಿಯ ಭೌತಿಕ ಶರೀರವು ವಾಯು, ಜಲ, ಅಗ್ನಿ, ಭೂಮಿ, ಆಕಾಶ ಎಂಬ ಐದು ಅಂಶಗಳ ಸಂಯೋಜನೆಯಿಂದ ಮಾಡಲ್ಪಟ್ಟಿರುತ್ತದೆ. ಈ ಐದು ಅಂಶಗಳನ್ನು ಪಂಚಭೂತಗಳು ಎಂದು ಕರೆಯಲಾಗುತ್ತದೆ. ಪ್ರಕೃತಿಯ ಐದು ಪಂಚಭೂತಗಳನ್ನು 5 ಶಿವಲಿಂಗಗಳು ಪ್ರತಿನಿಧಿಸುತ್ತವೆ. ವಿಶೇಷವೇನೆಂದರೆ 5 ಪಂಚಭೂತಗಳನ್ನು ಪ್ರತಿನಿಧಿಸುವ 5 ಶಿವಾಲಯ ಇರುವುದು ದಕ್ಷಿಣ ಭಾರತದಲ್ಲಿ. 5 ಶಿವಲಿಂಗ ಕ್ಷೇತ್ರಗಳಲ್ಲಿ 4 ಕ್ಷೇತ್ರಗಳು ತಮಿಳುನಾಡು ರಾಜ್ಯದಲ್ಲಿ ಇದ್ದರೆ ಮತ್ತೊಂದು ಆಂಧ್ರ ಪ್ರದೇಶದಲ್ಲಿದೆ. ಈ ಪಂಚಭೂತ ಶಿವ ಕ್ಷೇತ್ರಗಳೆಂದರೆ ಕಾಳಹಸ್ತಿ, ಶ್ರೀ ಅರುಣಾಚಲೇಶ್ವರ, ತಿಲೈ ನಟರಾಜಾಲಯ, ಜಂಬುಕೇಶ್ವರ ಮತ್ತು ಏಕಾಂಬರೇಶ್ವರ ದೇವಸ್ಥಾನ.ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕೃರ್ತಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆಬೇಡ ನಿಮ್ಮಯಾವುದೇ ಘೋರ-ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ9663542672.

ಏಕಾಂಬರೇಶ್ವರ ದೇವಾಲಯ ಕಾಂಚಿಪುರಂನ ಅತಿ ದೊಡ್ಡ ದೇವಾಲಯ, ಈ ದೇವಸ್ಥಾನದ ಗೋಪುರವು 59 ಮೀಟರ್ ಎತ್ತರವಿದೆ. ಈ ಗೋಪುರವು ದೇಶದ ಅತಿ ಎತ್ತರವಾದ ಗೋಪುರವಾಗಿದೆ. ಈ ದೇವಸ್ಥಾನದಲ್ಲಿ ಎರಡು ಕಲ್ಯಾಣಿಗಳಿವೆ. ದೇವಸ್ಥಾನದ ಒಂದು ಕಲ್ಯಾಣಿಯನ್ನು ಕಂಬೈ ತೀರ್ಥ ಎಂದು ಕರೆಯಲಾಗುತ್ತದೆ. ಕಂಬೈ ತೀರ್ಥಕ್ಕೂ ಹಾಗೂ ಗಂಗಾನದಿಗು ಸಂಪರ್ಕವಿದೆ ಎಂದು ಭಾವಿಸಲಾಗುತ್ತದೆ. ದೇವಸ್ಥಾನದಲ್ಲಿ ಏಕಾಂಬರೇಶ್ವರ ಎಂದು ಕರೆಯಲ್ಪಡುವ ಶಿವಲಿಂಗವಿದೆ. ಈ ಶಿವಲಿಂಗವನ್ನು ಪಾರ್ವತಿ ದೇವಿ ಪ್ರತಿಷ್ಠಾಪನೆ ಮಾಡಿದ್ದಾರೆ ಎಂಬ ನಂಬಿಕೆ ಇದೆ.

ಈ ಶಿವಲಿಂಗವು ಪಂಚಭೂತಗಳಲ್ಲಿ ಒಂದಾದ ಪೃಥ್ವಿಯ ಸಂಕೇತವಾಗಿದೆ. ದೇವಸ್ಥಾನದ ಸುತ್ತಲೂ 1008 ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ದೇವಸ್ಥಾನದ ವಿಶಾಲ ಮಂಟಪವು 1000 ಮಂಟಪಗಳಿಂದ ಕೂಡಿದೆ.ಈ ದೇವಸ್ಥಾನದ ಮತ್ತೊಂದು ವಿಶೇಷವೇನೆಂದರೆ ಮಾರ್ಚ್ 19, 20, 21 ನೇ ತಾರೀಖಿನಂದು ಸೂರ್ಯನ ಕಿರಣಗಳು ನೇರವಾಗಿ ಶಿವಲಿಂಗದ ಮೇಲೆ ಬೀಳುತ್ತದೆ. ಅಲ್ಲಿರುವ ಶಿವಲಿಂಗಕ್ಕೆ ಏಕಾಂಬರೇಶ್ವರ ಎಂಬ ಹೆಸರು ಬರಲು ಅಲ್ಲಿರುವ ಮಾವಿನ ಮರವೆ ಕಾರಣ. ಏಕ ಎಂದರೆ ಒಂದು, ಅಂಬರ ಎಂದರೆ ಮಾವಿನ ಮರ ಎಂದರ್ಥ ದೇವಸ್ಥಾನದ ಹಿಂಬದಿಯಲ್ಲಿ 3500 ವರ್ಷದ ಹಿಂದಿನ ಪುರಾತನ ಕಾಲದ ಮಾವಿನ ಮರವಿದೆ. ಈ ಮಾವಿನ ಮರದಲ್ಲಿ ಇರುವ 4 ಕೊಂಬೆಗಳು 4 ವೇದಗಳನ್ನು ಪ್ರತಿನಿಧಿಸುತ್ತದೆ. ಪಾರ್ವತಿ ದೇವಿಯು ಇದೇ ಮರದ ಕೆಳಗೆ ಕುಳಿತುಕೊಂಡು ಶಿವನನ್ನು ಜಪಿಸಿ ಹಾಗೂ ಅವರನ್ನು ಮೆಚ್ಚಿಸಿ ಮದುವೆಯಾದರೂ ಎಂಬ ನಂಬಿಕೆಯು ಕೂಡ ಇದೆ.

ಶಿವಪರಮಾತ್ಮ ಕಾಮಾಕ್ಷಿಯನ್ನು ಪರೀಕ್ಷಿಸಲೆಂದು ಗಂಗೆಯನ್ನು ದಕ್ಷಿಣ ಕಡೆ ಹರಿಸಲು ಕಳುಹಿಸಿಕೊಡುತ್ತಾರೆ. ಆಗ ತನ್ನ ಹತ್ತಿರ ಉಕ್ಕಿ ಬರುತ್ತಿದ್ದ ಗಂಗೆಯನ್ನು ಕಾಮಾಕ್ಷಿದೇವಿಯು ಕಾಳಿ ಸ್ವರೂಪವನ್ನು ತಾಳಿ ತನ್ನ ಕಪಾಲದಲ್ಲಿ ತುಂಬಿಕೊಳ್ಳುತ್ತಾರೆ. ಆಗ ಶಿವಪರಮಾತ್ಮ ಅಲ್ಲಿಯೇ ಹರಿಯುತ್ತಿದ್ದ ವೇದಾವತಿ ಎಂಬ ನದಿಯಲ್ಲಿ ಪ್ರವಾಹವನ್ನು ಸೃಷ್ಟಿಸುತ್ತಾರೆ. ಕಾಮಾಕ್ಷಿ ದೇವಿಯು ಮರಳಿನಿಂದ ಮಾಡಿದ್ದ ಶಿವಲಿಂಗವು ನೀರಿನಲ್ಲಿ ಕೊಚ್ಚಿ ಹೋಗುವುದೆಂಬ ಭಯದಿಂದ ಲಿಂಗವನ್ನು ತಬ್ಬಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಕಾಮಾಕ್ಷಿ ದೇವಿಯ ಬಳೆಯ ಗುರುತು ಶಿವಲಿಂಗದ ಮೇಲೆ ಬೀಳುತ್ತದೆ. ಆಗ ಕಾಮಾಕ್ಷಿ ದೇವಿಯ ಭಕ್ತಿಗೆ ಮೆಚ್ಚಿ ಶಿವ ಪರಮಾತ್ಮ ಧರೆಗೆ ಬಂದು ಕಾಮಾಕ್ಷಿಯನ್ನು ಮದುವೆಯಾಗುತ್ತಾರೆ. ಕಂಚಿಯ ಏಕಾಂಬರೇಶ್ವರ ಶಿವಲಿಂಗಕ್ಕೆ ಅಭಿಷೇಕವನ್ನು ಮಾಡುವುದಿಲ್ಲ, ಇಡೀ ಭಾರತದಲ್ಲಿ ಅಭಿಷೇಕವನ್ನು ಮಾಡದ ಶಿವ ದೇವಸ್ಥಾನವೆಂದರೆ ಅದು ಕಂಚಿಯ ಏಕಾಂಬರೇಶ್ವರ ದೇವಸ್ಥಾನ. ಎಲ್ಲಾ ಶಿವನ ದೇವಸ್ಥಾನದಲ್ಲಿ ಶಿವನ ಜೊತೆ ಪಾರ್ವತಿದೇವಿ ಇರುತ್ತಾರೆ ಆದರೆ ಈ ದೇವಸ್ಥಾನದಲ್ಲಿ ಪಾರ್ವತಿದೇವಿ ಇಲ್ಲ ಅದರ ಬದಲಾಗಿ ಕಾಮಾಕ್ಷಿ ದೇವಿಯ ಪ್ರತ್ಯೇಕ ದೇವಸ್ಥಾನವಿದೆ. ಈ ದೇವಸ್ಥಾನದಲ್ಲಿ ಪೂಜಿಸಿದರೆ ಜನನ ಮರಣದ ಚಕ್ರದಿಂದ ಮುಕ್ತಿಯನ್ನು ಪಡೆಯಬಹುದು ಎನ್ನಲಾಗುತ್ತದೆ.