ಚಾಮುಂಡೇಶ್ವರಿ ದೇವಿಯ ಸಹೋದರಿ ಚಿಕ್ಕ ದೇವಮ್ಮ ದೇವಿಯ ಬೆಟ್ಟದ ಪವಾಡ ಗೊತ್ತಾ..?

ಪುಣ್ಯ ಕ್ಷೇತ್ರಗಳ ಮಾಹಿತಿ

ಚಾಮುಂಡೇಶ್ವರಿ ದೇವಿಯ ಏಳು ಜನ ಸಹೋದರಿಯರಲ್ಲಿ ಒಬ್ಬಳು ಎಂದು ಪರಿಗಣಿಸುವ ಚಿಕ್ಕದೇವಮ್ಮ ದೇವಿಯು ನೆಲೆಸಿರುವ ಪರಮ ಪವಿತ್ರ ಯಾತ್ರಾ ಸ್ಥಳವೇ ಚಿಕ್ಕದೇವಮ್ಮನ ಬೆಟ್ಟ. ಚಿಕ್ಕದೇವಮ್ಮ ದೇವಿಗೆ ಬಹಳ ಶಕ್ತಿ ಇದೆ. ನಂಬಿ ಬಂದ ಭಕ್ತರನ್ನು ಹಾಗೂ ಅವರ ಕೋರಿಕೆಗಳನ್ನು , ಇಷ್ಟಾರ್ಥಗಳನ್ನು ನೆರವೇರಿಸುತ್ತಾ ಭಕ್ತರ ಪಾಲಿಗೆ ವರವಾಗಿ ಚಿಕ್ಕದೇವಮ್ಮ ತಾಯಿಯು ಈ ಬೆಟ್ಟದ ಮೇಲೆ ನೆಲೆಸಿದ್ದಾರೆ. ಚಿಕ್ಕದೇವಮ್ಮ ತಾಯಿ ಹೆಚ್ ಡಿ ಕೋಟೆ ಹಾಗೂ ಸುತ್ತಮುತ್ತಲ ಪ್ರದೇಶದ ಆರಾಧ್ಯ ದೇವತೆ ಆಗಿದ್ದಾರೆ. ಮಂಗಳವಾರ ಹಾಗೂ ಶುಕ್ರವಾರ ಈ ಪವಿತ್ರ ಸ್ಥಳಕ್ಕೆ ಬರುವ ಭಕ್ತರ ಸಂಖ್ಯೆ ಜಾಸ್ತಿ ಇರುತ್ತದೆ.

ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ-ಕೃರ್ತಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿ-ದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡ-ಚಣೆ ಉಂಟಾ-ಗುವ ಯಾವು-ದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು-ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮಸ-ಮ-ಸ್ಯೆಗಳು ಬಗೆಹರಿದಿಲ್ಲವೇ ಚಿಂತೆ ಬೇಡ ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ-ಶತಸಿದ್ಧ ಇಂದೇ ಗುರು-ಜೀಯವರನ್ನು ಸಂಪರ್ಕಿಸಿ 9663953892. 

ಹಿರಿಯರು ಹೇಳುವ ಪ್ರಕಾರ ರಕ್ಕಸರ ಸಂಹಾರಕ್ಕಾಗಿ ಆದಿಶಕ್ತಿಯು ಏಳು ದೇವತೆಗಳ ರೂಪವನ್ನು ತಾಳಿ ಭೂಲೋಕದಲ್ಲಿ ಅವತರಿಸುತ್ತಾಳೆ. ಭೂಲೋಕಕ್ಕೆ ಬರುವ ಈ ದೇವತೆಗಳು ದಕ್ಷಿಣ ದಿಕ್ಕಿನಲ್ಲಿ ಇರುವ ಎತ್ತರದ ಬೆಟ್ಟ ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಏಳು ಜನರಲ್ಲಿ ಚಾಮುಂಡೇಶ್ವರಿ ದೇವಿಯು ಒಬ್ಬರು. ಚಾಮುಂಡೇಶ್ವರಿ ದೇವಿಯ ಸಹೋದರಿಯಾದ ಚಿಕ್ಕದೇವಮ್ಮ ಈ ಸ್ಥಳಕ್ಕೆ ಆಗಮಿಸುತ್ತಿದ್ದಾಗ ಈ ಬೆಟ್ಟವು ಸಾವಿರಾರು ರಕ್ಕಸರಿಂದ ಕೂಡಿರುತ್ತದೆ, ಆ ಸಮಯದಲ್ಲಿ ರಕ್ಕಸರ ನೋಡಿ ಹೆದರಿಕೊಂಡ ದೇವಿಯು ಬೆಟ್ಟದಲ್ಲಿ ಅವತಿಕೊಂಡು ಕೂರುತ್ತಾರೆ. ನಂತರ ಸ್ವಲ್ಪ ಸಮಯ ಸುಧಾರಿಸಿಕೊಂಡು ಬೆಟ್ಟದ ಮೇಲಿರುವ ಎಲ್ಲಾ ರಕ್ಕಸರನ್ನು ಸಂಹರಿಸಿ ಬೆಟ್ಟದ ಮೇಲೆ ನೆಲೆಸುತ್ತಾಳೆ.

ಜನರ ಜೀವನಾಡಿಯಾಗಿರುವ ಕಪಿಲಾನದಿಯು ಈ ಬೆಟ್ಟದ ಮುಂದೆ ಶಾಂತವಾಗಿ ಹರಿಯುತ್ತದೆ. ವರ್ಷಕ್ಕೊಮ್ಮೆ ಇಲ್ಲಿ ತೆಪ್ಪೋತ್ಸವ ನಡೆಯುತ್ತದೆ. ಈ ಸ್ಥಳಕ್ಕೆ ಹಾಲಗಡ ಎಂಬ ಹೆಸರು ಬರಲು ಕಾರಣವೇನೆಂದರೆ ಪ್ರತಿನಿತ್ಯ ಒಬ್ಬ ಮಹಿಳೆಯು ನದಿಯನ್ನು ದಾಟಿ ಬೆಟ್ಟವನ್ನು ಏರಿ ದೇವಿಗೆ ಹಾಲಿನ ಅಭಿಷೇಕವನ್ನು ಮಾಡುತ್ತಿದ್ದಳು ಆದರೆ ಒಂದು ದಿನ ನದಿದಾಟಿ ಬರಬೇಕಾದರೆ ಆಯತಪ್ಪಿ ಬಿದ್ದು ಹಾಲು ನೀರಿನ ಪಾಲಾಗುತ್ತದೆ ನಂತರ ಭಯದಿಂದ ಆ ಮಹಿಳೆ ನದಿಯ ನೀರನ್ನೇ ತುಂಬಿಕೊಂಡು ಬಂದು ದೇವಿಗೆ ಅರ್ಪಿಸುತ್ತಾರೆ. ಇದನ್ನು ನೋಡಿದ ದೇವಿಯು ಆಕೆಯ ಭಕ್ತಿಗೆ ಮೆಚ್ಚಿ ಅದೇ ನೀರನ್ನು ಹಾಲನ್ನಾಗಿಸುತ್ತಾಳೆ. ಇದರಿಂದ ಆ ಸ್ಥಳಕ್ಕೆ ಹಾಲಗಡ ಎಂಬ ಹೆಸರು ಬಂದಿತು.
ಮಂಗಳವಾರ, ಶುಕ್ರವಾರ ಹಾಗೂ ಅಮಾವಾಸ್ಯೆ ದಿನದಂದು ಈ ದೇವಿಯನ್ನು ನೋಡಲು ಸಹಸ್ರಾರು ಭಕ್ತರು ಆಗಮಿಸುತ್ತಾರೆ.

ಹಿರಿಯರು ಹೇಳುವ ಪ್ರಕಾರ ಚಿಕ್ಕ ದೇವನ ಬೆಟ್ಟದಿಂದ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಸುರಂಗ ಮಾರ್ಗವಿದೆ. ಚಿಕ್ಕದೇವಮ್ಮ ಬೆಟ್ಟದಿಂದ ಕಪಿಲಾ ನದಿ ಹರಿಯುವುದನ್ನು ನೋಡಬಹುದು. ಚಿಕ್ಕದೇವಮ್ಮನ ಬೆಟ್ಟ ಮೈಸೂರಿನಿಂದ 60 ಕಿಲೋಮೀಟರ್ ದೂರವಿದೆ. ಇಲ್ಲಿಗೆ ಬರುವ ಭಕ್ತಾದಿಗಳ ಕೋರಿಕೆಯನ್ನು ಇಷ್ಟಾರ್ಥಗಳನ್ನು ಈಡೇರಿಸುತ್ತಾ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆಯನ್ನು ತನ್ನತ್ತ ಸೆಳಯುತ್ತಿದ್ದಾರೆ ಚಿಕ್ಕದೇವಮ್ಮ ದೇವಿ ಎಂದರೆ ತಪ್ಪಾಗಲಾರದು.

ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ-ಕೃರ್ತಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿ-ದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡ-ಚಣೆ ಉಂಟಾ-ಗುವ ಯಾವುದೇ ಪ್ರಶ್ನೆಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆಪ್ರಯತ್ನ ಮಾಡಿದರು ನಿಮ್ಮಸ-ಮ-ಸ್ಯೆಗಳು ಬಗೆಹರಿದಿಲ್ಲವೇ ಚಿಂತೆ ಬೇಡನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಇಂದೇ ಗುರು-ಜೀಯವರನ್ನು ಸಂಪರ್ಕಿಸಿ 9663953892.

Leave a Reply

Your email address will not be published. Required fields are marked *