ಕೆಟ್ಟ ದೃಷ್ಟಿಯಿಂದ ಮುಕ್ತಿಪಡೆದು ನೆಮ್ಮದಿಯಿಂದ ಜೀವನ ನಡೆಸ ಬೇಕೆಂದರೆ ಏನು ಮಾಡಬೇಕೆಂದು ತಿಳಿದಿದೆಯೇ ನಿಮಗೆ ..ನಾವು ಮಾಡುವಂತಹ ಪ್ರತಿಯೊಂದು ಕೆಲಸ ಕಾರ್ಯಗಳಲ್ಲೂ ಅಡೆ-ತಡೆ ಬರುತ್ತಿದ್ದು ಯಾವುದೇ ಕೆಲಸವನ್ನು ಮಾಡಲು ಹೊರಟಾಗಲೂ ಆಸಕ್ತಿ ಬಾರದೇ ಇರುವುದು ಎಂದರೆ ನರದೃಷ್ಟಿ, ನರದೋಷ ತಾಗಿದೆ ಎಂಬುದನ್ನು ಸೂಚಿಸುತ್ತದೆ.
ಯಾರಾದರೂ ಕೆಟ್ಟ ದೃಷ್ಟಿಯಿಂದ ಬೇರೆಯವರನ್ನು ನೋಡಿದರೆ ಎಂದರೆ ಅವರಿಂದ ಉದ್ಭವವಾದ ನಕಾರಾತ್ಮಕ ಶಕ್ತಿಯು ಆಕರ್ಷಿಸಲ್ಪಡುತ್ತದೆ. ಇದರಿಂದ ಇಲ್ಲಿಯವರೆಗೆ ವ್ಯಾಪಾರದಲ್ಲಿ, ವ್ಯವಹಾರದಲ್ಲಿ ಹಾಗೂ ಮನೆಯಲ್ಲಿ ಸುಖದಿಂದ ಇದ್ದವರು ಇನ್ನು ಮುಂದೆ ನೆಮ್ಮದಿ ಇಲ್ಲದಂತೆ ವ್ಯಾಪಾರ-ವ್ಯವಹಾರದಲ್ಲಿ ನಷ್ಟವನ್ನು ಅನುಭವಿಸುವಂತೆ ಆಗುತ್ತದೆ. ಇದರಿಂದ ನರದೃಷ್ಟಿ, ನರದೋಷ ಆಗಿದೆ ಎಂಬುದು ಖಚಿತವಾಗುತ್ತದೆ. ಈ ಎಲ್ಲಾ ತೊಂದರೆಗಳಿಂದ ಯಾವ ರೀತಿಯಲ್ಲಿ ಮುಕ್ತಿಯನ್ನು ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಮೊದಲಿಗೆ ನಿಂಬೆ ಹಣ್ಣನ್ನು ತೆಗೆದುಕೊಂಡು ಅದನ್ನು ಎರಡು ಭಾಗ ಮಾಡಬೇಕು, ಭಾಗ ಮಾಡಿಕೊಂಡ ನಿಂಬೆಹುಳಿಗಯ 4 ಭಾಗಕ್ಕೆ 2 ಲವಂಗ 2 ಕರಿಮೆಣಸು ಚುಚ್ಚಬೇಕು, ಇದಾದ ಮೇಲೆ ಉಪ್ಪಿನಿಂದ ಮೂರು ಬಾರಿ ನಿವಾಳಿಸಬೇಕು, ತದನಂತರ ನಿಂಬೆಹುಳಿಗೆ ಕುಂಕುಮವನ್ನು ಅದ್ದಬೇಕು ಆದರೆ ಯಾವುದೇ ಕಾರಣಕ್ಕೂ ಲವಂಗ ಹಾಗೂ ಕರಿ ಮೆಣಸಿಗೆ ಕುಂಕುಮವನ್ನು ಅದ್ದಬಾರದು. ಈ ರೀತಿಯಾಗಿ ಮಾಡಿದ ನಂತರ ನೀವು ಇಟ್ಟಿ ಕೊಂಡಿರುವ ಕಲ್ಲುಪ್ಪಿನ ಬಟ್ಟಲಿನ ಮೇಲೆ ಈ 2 ನಿಂಬೆ ಹೋಳನ್ನು ಇಡಬೇಕು.
ಈ ಎರಡು ಹೋಳನ್ನು ಮನೆಯಲ್ಲಿ ಯಾರು ಓಡಾಡದೆ ಇರುವ ಒಂದು ಜಾಗದಲ್ಲಿ ಬಟ್ಟಲಿನ ಸಮೇತ ಹಾಗೆ ಇಟ್ಟು ಬಿಡಬೇಕು. ಮತ್ತೊಂದು ನಿಂಬೆಹಣ್ಣನ್ನು ಮನೆಯಿಂದ ಹೊರಗೆ ಹೋಗುವಾಗ ಜೇಬಿನಲ್ಲಿ ಆದರೂ ಸರಿ ಅಥವಾ ಪರ್ಸ್ ಅಲ್ಲಿ ಆದರೂ ಸರಿ ನಿಮ್ಮ ಜೊತೆ ತೆಗೆದುಕೊಂಡು ಹೋಗಬೇಕು.ಇದರಿಂದ ಯಾವುದೇ ರೀತಿಯ ನಕಾರಾತ್ಮಕ ಶಕ್ತಿಯು ನಿಮ್ಮ ಹತ್ತಿರ ಸುಳಿಯದೇ ಇರುವ ಹಾಗೆ ಮಾಡುತ್ತದೆ.
ಅದೇ ರೀತಿ ಭಾನುವಾರದ ದಿನ ನಿಂಬೆಹಣ್ಣನ್ನು ಎರಡು ಭಾಗ ಮಾಡಿ ಅದನ್ನು ಉಪ್ಪಿನಲ್ಲಿ ಅದ್ದಿ ಮನೆಯ ಹೊಸ್ತಿಲಿನ ಎರಡೂ ಭಾಗಕ್ಕೆ ಇಟ್ಟರೆ ಮನೆಯೊಳಗೆ ಯಾವುದೇ ನಕಾರಾತ್ಮಕ ಶಕ್ತಿಯ ಸಂಚಲನವಾಗದಂತೆ ನೋಡಿಕೊಳ್ಳುತ್ತದೆ.