ಆಷಾಢ ಮಾಸದಲ್ಲಿ ಮಣ್ಣಿನ ದೀಪದಿಂದ ಅಮ್ಮನವರಿಗೆ ದೀಪಾರಾಧನೆ ಏಕೆ ಮಾಡುತ್ತಾರೆ ತಿಳಿದಿದೆಯೇ ನಿಮಗೆ ?

ಜ್ಯೋತಿಷ್ಯ

ಆಷಾಢಮಾಸ ಹಾಗೂ ಶ್ರಾವಣಮಾಸ ಹತ್ತಿರ ಬರುತ್ತಿರುವುದರಿಂದ ಅಮ್ಮನವರಿಗೆ ವಿಶೇಷವಾದ ದೀಪಾರಾಧನೆಯನ್ನು ಮಾಡುವುದರಿಂದ ಸಾಕಷ್ಟು ಲಾಭವಿರುತ್ತದೆ. ಈ ದೀಪಾರಾಧನೆಗೆ ಎರಡು ಮಣ್ಣಿನ ದೀಪವನ್ನು ತೆಗೆದುಕೊಳ್ಳಬೇಕು. ಎರಡು ದೀಪಕ್ಕೂ ಅರಿಶಿನವನ್ನು ಹಚ್ಚಬೇಕು. ಅದರಲ್ಲಿ ಒಂದು ದೀಪಕ್ಕೆ ಮಾತ್ರ ಒಳಭಾಗ ಒಂದನ್ನು ಬಿಟ್ಟು ಉಳಿದ ಎಲ್ಲಾ ಭಾಗಕ್ಕೂ ಅರಿಶಿಣವನ್ನು ಹಚ್ಚಬೇಕು. ಒಂದು ಹಿತ್ತಾಳೆಯ ಅಥವಾ ತಾಮ್ರದ ತಟ್ಟೆಯನ್ನು ತೆಗೆದುಕೊಂಡು ತಟ್ಟೆಯೊಳಗೆ ರಂಗೋಲಿಯನ್ನು ಹಾಕಬೇಕು. ರಂಗೋಲಿಯನ್ನು ಬಿಡಿಸಿದ ನಂತರ ಅರಿಶಿನದಿಂದ ಅಲಂಕಾರವನ್ನು ಮಾಡಿ ಕುಂಕುಮವನ್ನು ಇಡಬೇಕು. ನಂತರ ಪಚ್ಚ ಕರ್ಪೂರವನ್ನು ಪುಡಿಮಾಡಿಕೊಂಡು ಅದರ ಮೇಲೆ ಹಾಕಬೇಕು. ಹಿತ್ತಾಳೆ,ತಾಮ್ರದ ತಟ್ಟೆ ಮಾತ್ರ ಉಪಯೋಗಿಸಬೇಕು ಅದರ ಬದಲು ಸ್ಟೀಲ್ ತಟ್ಟೆಯನ್ನು ಯಾವುದೇ ಕಾರಣಕ್ಕೂ ಉಪಯೋಗಿಸಬಾರದು.ರಂಗೋಲಿ ಇಂದ ಅಲಂಕಾರವನ್ನು ಮಾಡಿದ ನಂತರ ಬೇವಿನ ಸೊಪ್ಪನ್ನು ರಂಗೋಲಿಯ ಮೇಲೆ ಇಡಬೇಕು. ಲಕ್ಷ್ಮೀದೇವಿಗೆ ತುಂಬಾ ಪ್ರಿಯವಾದದ್ದು ಬೇವಿನ ಸೊಪ್ಪು ಹಾಗೂ ಗ್ರಾಮದೇವತೆಗೆ ಕೂಡ ಬೇವಿನ ಸೊಪ್ಪು ತುಂಬ ಪ್ರಿಯವಾದದ್ದು. ಬೇವಿನ ಸೊಪ್ಪನ್ನು ರಂಗೋಲಿಯ ಮೇಲೆ ಇಟ್ಟ ನಂತರ ಅದರ ಮೇಲೆ ಸ್ವಲ್ಪ ಅರಿಶಿನವನ್ನು ಹಾಕಿ ಸಂಪೂರ್ಣವಾಗಿ ಎಲ್ಲಾ ಭಾಗಕ್ಕೂ ಹಾಕಿದ್ದ ಅರಿಶಿಣದ ದೀಪವನ್ನು ಮೊದಲಿಗೆ ಇಡಬೇಕು. ದೀಪದ ಒಳಗೆ ಸ್ವಲ್ಪ ಅಕ್ಷತೆಯನ್ನು ಹಾಕಿ ಅದರ ಮೇಲೆ ಉಳಿದಿರುವ ಮತ್ತೊಂದು ದೀಪವನ್ನು ಇಡಬೇಕು. ಎರಡನೆಯ ದೀಪಕ್ಕೂ ಅರಿಶಿನ-ಕುಂಕುಮವನ್ನು ಹಚ್ಚಿ ಅಕ್ಷತೆಯನ್ನು ಹಾಕಬೇಕು.
ದೀಪಕ್ಕೆ ಕೊಬ್ಬರಿ ಎಣ್ಣೆ ಅಥವಾ ತುಪ್ಪವನ್ನು ಹಾಕಿ ದೀಪಾರಾಧನೆಯನ್ನು ಮಾಡಬೇಕು. 6 ಬತ್ತಿಯನ್ನು ತೆಗೆದುಕೊಂಡು ಎಲ್ಲಾ ಬತ್ತಿಯನ್ನು ಒಗ್ಗೂಡಿಸಿ ಒಂದು ಬತ್ತಿಯನ್ನಾಗಿ ಮಾಡಿ ದೀಪವನ್ನು ಹಚ್ಚಬೇಕು. ಮಣ್ಣಿನ ದೀಪವನ್ನು ಹೆಚ್ಚಾಗಿ ಬಳಸುವುದರಿಂದ ಮನೆಗೆ ಯಾವ ಕೆಟ್ಟ ದೃಷ್ಟಿಯು ಬೀಳುವುದಿಲ್ಲ ಹಾಗೂ ಮನೆಯಲ್ಲಿ ಒಂದರ ಮೇಲೆ ಒಂದರಂತೆ ಶುಭ ಕಾರ್ಯಗಳು ನಡೆಯುತ್ತಿರುತ್ತವೆ. ಒಂದು ವೇಳೆ ಮಣ್ಣಿನ ದೀಪ ಇಲ್ಲವೆಂದರೆ ಹಿತ್ತಾಳೆಯ ಅಥವಾ ಬೆಳ್ಳಿಯ ದೀಪವನ್ನು ಹಚ್ಚಿ ದೀಪಾರಾಧನೆ ಮಾಡಬಹುದು.

ದೀಪಾರಾಧನೆಯನ್ನು ಅಮ್ಮನವರ ದಿನವಾದ ಮಂಗಳವಾರ ಅಥವಾ ಶುಕ್ರವಾರ ಮಾಡಿದರೆ ತುಂಬಾ ಒಳ್ಳೆಯದು. ಮುಂಜಾನೆ 6 ಘಂಟೆಯ ಒಳಗೆ ಅಥವಾ ಸಾಯಂಕಾಲ 6 ಘಂಟೆಯ ನಂತರ ದೀಪಾರಾಧನೆ ಮಾಡಬಹುದು. ಈ ರೀತಿಯಾಗಿ ದೀಪಾರಾಧನೆಯನ್ನು ಮಾಡುವುದರಿಂದ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ.