ಶ್ರೀ ಗುರುರಾಘವೇಂದ್ರರ ಜನ್ಮದ ಹಿಂದಿನ ರಹಸ್ಯಗಳು ಏನು ಎಂಬುದು ತಿಳಿದಿದೆಯೇ ?

ಜ್ಯೋತಿಷ್ಯ

ಶ್ರೀ ಗುರುರಾಘವೇಂದ್ರರ ಜನ್ಮದ ಹಿಂದಿನ ರಹಸ್ಯಗಳು ಏನು ಎಂಬುದು ತಿಳಿದಿದೆಯೇ..ಪವಾಡ ಮಾಡಿದವರೆಲ್ಲಾ ಮಹಾಮಹಿಮರು ಆಗುವುದಿಲ್ಲ, ಯಾರು ದೈವಾಂಶಸಂಭೂತರಾಗಿ ಜನಿಸಿ ಜನರ ಕಷ್ಟ ಕಾರ್ಪಣ್ಯಗಳನ್ನು ನೀಗಿಸುತ್ತಾರೋ ಅಂತವರು ಮಾತ್ರ ಮಹಾಮಹಿಮರಾಗುವುದು. ಅಂತಹವರಲ್ಲಿ ಗುರುರಾಘವೇಂದ್ರರರೆ ಅಗ್ರ ಗಣ್ಯರು. ಗುರು ರಾಘವೇಂದ್ರರು ದೈವಾಂಶ ಸಂಭೂತರಾಗಿರುವುದರಿಂದ ಗುರು ರಾಘವೇಂದ್ರರನ್ನು ಕಲಿಯುಗದ ಕಾಮಧೇನು ಎಂದು ಕರೆಯಲಾಗುತ್ತದೆ. ಹೀಗೆ ಜನರ ಕಷ್ಟಗಳನ್ನು ನಿವಾರಿಸುತ್ತಾ ಪ್ರತಿಯೊಬ್ಬರ ಮನೆಯಲ್ಲೂ ನೆಲೆಸಿದ್ದಾರೆ. ರಾಘವೇಂದ್ರ ಸ್ವಾಮಿಗಳಾಗಿ ಅವತಾರವನ್ನು ತಾಳುವುದಕ್ಕೆ ಮೊದಲು ಯಾವ ಯಾವ ಅವತಾರವನ್ನು ತಾಳಿದ್ದರು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.ಗುರುರಾಘವೇಂದ್ರರು ಮಾಡಿದ ಪವಾಡಗಳು ಬಹಳಷ್ಟಿವೆ ಹಾಗೂ ಇಂದಿಗೂ ಬೃಂದಾವನದಲ್ಲಿ ಗುರುರಾಯರ ಬೆಳಕಿದೆ. ಭಕ್ತರ ಕೋರಿಕೆಗಳನ್ನು ಈಡೇರಿಸುವ ಶಕ್ತಿಯು ಇದೆ.ರಾಯರು ಎಂಬ ಹೆಸರಿನಲ್ಲಿ ಬಹಳಷ್ಟು ಶಕ್ತಿ ಇದೆ. ಆದ್ದರಿಂದ ಭಕ್ತಿಯಿಂದ ಗುರು ರಾಯರನ್ನು ಸ್ಮರಿಸಿಕೊಂಡರೆ ಕಷ್ಟಗಳೆಲ್ಲ ದೂರವಾಗುತ್ತದೆ. ಮಂತ್ರಾಲಯದಲ್ಲಿ ಇದ್ದ ಗುರು ರಾಯರೇ ನರಸಿಂಹನ ಅವತಾರಕ್ಕೆ ಕಾರಣಕರ್ತರಾದ ಪ್ರಹ್ಲಾದರು ಎಂಬ ನಂಬಿಕೆ ಇದೆ. ಪೂರ್ವಕಾಲದಲ್ಲಿ ಸೃಷ್ಟಿಕರ್ತನಾದ ಬ್ರಹ್ಮ ದೇವರ ದೇವಗಣದಲ್ಲಿ ಶಂಕುಕರ್ಣರಾಗಿದ್ದ ರಾಯರು ಬ್ರಹ್ಮ ದೇವರ ಆಶೀರ್ವಾದದಿಂದ ಭೂಲೋಕದಲ್ಲಿ ಪ್ರಹ್ಲಾದನಾಗಿ ಜನ್ಮವನ್ನು ತಾಳಿದ್ದರು. ಹಿರಣ್ಯ ಕಶುಪಿನ ಸಂಹಾರಕ್ಕೆ ಕಾರಣಕರ್ತರಾದ ರಾಯರು ಲೋಕ ಕಲ್ಯಾಣದ ನಂತರ ಮುಂದಿನ ಜನ್ಮದಲ್ಲಿ ವ್ಯಾಸರಾಗಿ ಹುಟ್ಟುತ್ತಾರೆ. ವ್ಯಾಸರ ಅವತಾರದ ಬಳಿಕ ಶ್ರೀ ರಾಘವೇಂದ್ರ ತೀರ್ಥ ಯತಿರಾಜರಾಗಿ ಮಂತ್ರಾಲಯದಲ್ಲಿ ನೆಲೆಸುತ್ತಾರೆ.

ಗುರು ರಾಘವೇಂದ್ರರ ಜನನವಾಗಿದ್ದು 16ನೇ ಶತಮಾನದಲ್ಲಿ. ತಿರುಪತಿ ದೇವರ ಅನುಗ್ರಹದಿಂದ ಜನಿಸಿದ ಮಗುವೇ ರಾಘವೇಂದ್ರ ತೀರ್ಥರು.ರಾಘವೇಂದ್ರ ತೀರ್ಥರು ಹಲವಾರು ಕೃತಿಗಳನ್ನು ಸಹ ಬರೆದಿದ್ದಾರೆ. ಮಹಾಭಾರತ ಹಾಗೂ ಇನ್ನಿತರ ಕೃತಿಗಳಿಗೆ ಅರ್ಥ ವಿವರಣೆ ಹಾಗೂ ಭಾಷೆಯಲ್ಲೂ ಕೂಡ ಬರೆದಿದ್ದಾರೆ. ಕಷ್ಟಗಳನ್ನು ಮೆಟ್ಟಿ ನಿಂತ ರಾಯರು ಎಂದಿಗೂ ಇನ್ನೊಬ್ಬರ ಬಳಿ ಕೈಚಾಚಿ ನಿಂತಿದ್ದವರಲ್ಲ. ದೇವರು ಕೊಡುವ ಸಂಪತ್ತು ಬೇಕು ಆದರೆ ದೇವರು ಕೊಡುವ ಬಡತನ ಬೇಡವಾ ಎಂದು ಸಾರಿದವರು ರಾಘವೇಂದ್ರ ತೀರ್ಥರು.

Leave a Reply

Your email address will not be published. Required fields are marked *