ವಾಯುವ್ಯ ದಿಕ್ಕಿನಲ್ಲಿ ಈ ವಸ್ತುಗಳನ್ನು ಇಟ್ಟರೆ ಜೀವನದ ದಿಕ್ಕೇ ಬದಲಾಗುತ್ತದೆ..ಸಾಮಾನ್ಯವಾಗಿ ಪ್ರತಿಯೊಬ್ಬರೂ ವಾಸ್ತು ಶಾಸ್ತ್ರದ ಪ್ರಕಾರವಾಗಿ ಮನೆಯನ್ನು ಕಟ್ಟಿಸುತ್ತಾರೆ. ಉತ್ತರ ಹಾಗೂ ಪಶ್ಚಿಮ ದಿಕ್ಕಿನ ಮಧ್ಯಭಾಗದಲ್ಲಿ ವಾಯುವ್ಯ ದಿಕ್ಕು ಬರುತ್ತದೆ. ವಾಯುವ್ಯ ದಿಕ್ಕಿನಲ್ಲಿ ಯಾವ ವಸ್ತುಗಳನ್ನು ಇಟ್ಟರೆ ಅದು ಲಾಭದಾಯಕವಾಗುತ್ತದೆ ಹಾಗೂ ಯಾವ ವಸ್ತುಗಳನ್ನು ಈ ದಿಕ್ಕಿನ ಕಡೆ ಇಡಬಾರದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.ಸಾಮಾನ್ಯವಾಗಿ ವಾಯುವ್ಯ ದಿಕ್ಕಿಗೆ ಕೋಣೆಗಳನ್ನು ಕಟ್ಟಿ ಕೊಳ್ಳಲಾಗುತ್ತದೆ. ಚಂದ್ರದೇವನು ವಾಯುವ್ಯ ದಿಕ್ಕಿಗೆ ಅಧಿಪತಿಯಾಗಿರುವನು. ಆರೋಗ್ಯದ ಮೇಲೆ ಹಿಡಿತವನ್ನು ಸಾಧಿಸುವವನು ಚಂದ್ರನಾಗಿರುತ್ತಾನೆ. ಹಾಗಾಗಿ ಚಂದನ ಅನುಗ್ರಹ ಸಿಗಬೇಕೆಂದರೆ ವಾಯುವ್ಯ ದಿಕ್ಕನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕಾಗುತ್ತದೆ. ವಾಯುವ್ಯ ದಿಕ್ಕಿನಲ್ಲಿ ಸಾಮಾನ್ಯವಾಗಿ ಸ್ಟೋರ್ ರೂಮ್ ಅನ್ನು ಕಟ್ಟಬೇಕು ಎನ್ನುತ್ತಾರೆ. ಸ್ಟೋರ್ ರೂಮ್ ಅಲ್ಲಿ ಧವಸ ಧಾನ್ಯಗಳನ್ನು ಇಡುವುದರಿಂದ ಚಂದನ ಅನುಗ್ರಹವು ಪ್ರಾಪ್ತಿಯಾಗುತ್ತದೆ. ಇದರಿಂದ ಬ್ಯಾಂಕಿನ ವ್ಯವಹಾರಗಳೆಲ್ಲ ಅಚ್ಚುಕಟ್ಟಾಗಿ ನಡೆಯುತ್ತದೆ.
ಪಶ್ಚಿಮ ವಾಯುವ್ಯ ದಿಕ್ಕಿನಲ್ಲಿ ಸ್ಟೋರ್ ರೂಮ್ ಅನ್ನು ಬರುವ ಹಾಗೆ ಮಾಡಿದರೆ ಲಾಭದಾಯಕವಾಗುತ್ತದೆ. ವಾಯುವ್ಯ ದಿಕ್ಕಿನಲ್ಲಿ ಮಲಗುವುದರಿಂದ ಮಾನಸಿಕ ಚಿಂತನೆಗಳು ಜಾಸ್ತಿಯಾಗುತ್ತದೆ ಹಾಗೂ ಇದರಿಂದ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ. ಪಶ್ಚಿಮ ವಾಯುವ್ಯ ದಿಕ್ಕಿನ ಕಡೆ ಬೇಳೆಕಾಳುಗಳನ್ನು ಇಡಬೇಕು. ಉತ್ತರ ವಾಯುವ್ಯ ದಿಕ್ಕಿನಲ್ಲಿ ನೀರಿನ ಟ್ಯಾಂಕ್ ಇಡುವುದು ಅಥವಾ ನೀರು ತುಂಬುವ ಸಂಪನ್ನು ಮಾಡಿಸಿಕೊಳ್ಳುವುದನ್ನು ಮಾಡಬಾರದು. ಇದರಿಂದ ಅನೇಕ ರೀತಿಯ ಸಂಕಷ್ಟಗಳನ್ನು ಎದುರಿಸುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಯಾವುದೇ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕೆ, ಶಾಂತಿಯಿಂದ ಇರುವುದಕ್ಕೆ ಯಾವುದೇ ಕಾರಣಕ್ಕೂ ವಾಯುವ್ಯ ದಿಕ್ಕನ್ನು ಆರಿಸಿ ಕೊಳ್ಳಬಾರದು. ಈ ದಿಕ್ಕನ್ನು ಬಿಟ್ಟು ಬೇರೆ ದಿಕ್ಕನ್ನು ಆಯ್ದುಕೊಂಡರೆ ಜೀವನದಲ್ಲಿ ಸಾಕಷ್ಟು ಲಾಭವನ್ನು ಪಡೆದುಕೊಳ್ಳಬಹುದು. ಹಾಗಾಗಿ ಮನೆಯನ್ನು ನಿರ್ಮಾಣ ಮಾಡಬೇಕಾದರೆ ಸಂಪೂರ್ಣವಾಗಿ ವಾಸ್ತುಶಾಸ್ತ್ರದ ಪ್ರಕಾರವಾಗಿ ನಿರ್ಮಾಣ ಮಾಡಿದರೆ ಸುಖಕರವಾದ ಜೀವನವನ್ನು ನಡೆಸಬಹುದು.