ಅಕ್ಷಯಪಾತ್ರೆಯನ್ನು ಹೇಗೆ ಸಿದ್ದ ಮಾಡಿಕೊಳ್ಳಬೇಕು ತಿಳಿದಿದೆಯೇ ನಿಮಗೆ ?

ಜ್ಯೋತಿಷ್ಯ

ಅಕ್ಷಯಪಾತ್ರೆಯನ್ನು ಸಿದ್ದ ಮಾಡಿಕೊಳ್ಳಬೇಕಾದರೆ ಒಂದು ಮಣ್ಣಿನ ಮಡಿಕೆಯನ್ನು ನಿಮಗೆ ಅನುಕೂಲವಾಗುವ ದಿನದಂದು ಮನೆಗೆ ತರಬೇಕು. ಮನೆಗೆ ಮಣ್ಣಿನ ಮಡಕೆಯನ್ನು ತಂದ ನಂತರ ಶುದ್ಧವಾದ ನೀರಿನಿಂದ ತೊಳೆಯಬೇಕು. ತದನಂತರ ಒಂದು ತಟ್ಟೆಯನ್ನು ತೆಗೆದುಕೊಂಡು ಅರಿಶಿನವನ್ನು ಹಾಕಬೇಕು. ಅರಿಶಿನಕ್ಕೆ ಕರ್ಪೂರ, ಪಚ್ಚಕರ್ಪೂರ, ಜವ್ವಾದಿ ಈ ಮೂರು ವಸ್ತುಗಳನ್ನು ಅರಿಶಿನಕ್ಕೆ ಹಾಕಿ ರೋಸ್ ವಾಟರ್ ನಿಂದ ಪೇಸ್ಟ್ ಮಾಡಿಕೊಂಡು ಮಡಿಕೆ ಸುತ್ತಾ ಲೇಪನ ಮಾಡಬೇಕು. ಲೇಪನ ಮಾಡಿದ ನಂತರ ಕುಂಕುಮದಿಂದ ಶ್ರೀಂ ಎಂದು ಬೊಟ್ಟನ್ನು ಇಡಬೇಕು.

ಅಕ್ಷಯ ಪಾತ್ರೆಗೆ ಮೊದಲಿಗೆ ಅರಿಶಿನ-ಕುಂಕುಮ, ಸ್ವಲ್ಪ ಪಚ್ಚಕರ್ಪೂರ, ಜವ್ವಾದಿ, ಕರ್ಪೂರ ಹಾಕಬೇಕು. ಈ ಪದಾರ್ಥಗಳನ್ನು ಹಾಕಿದ ನಂತರ ಸ್ವಲ್ಪ ಕಲ್ಲುಪ್ಪನ್ನು ಹಾಕಬೇಕು. ಕಲ್ಲುಪ್ಪನ್ನು ಹಾಕಿದ ನಂತರ ಒಂದು ವಸ್ತ್ರದಿಂದ ಮುಚ್ಚಬೇಕು. ಈ ರೀತಿ ಮಾಡಿದರೆ ಅಕ್ಷಯಪಾತ್ರೆ ಸಿದ್ಧವಾಗುತ್ತದೆ. ಇದರಿಂದ ಲಕ್ಷ್ಮೀದೇವಿಯು ಸ್ಥಿರವಾಗಿ ವಾಸಿಸಲು ಇಷ್ಟಪಡುತ್ತಾಳೆ.

ಈ ರೀತಿಯಾಗಿ ಅಕ್ಷಯಪಾತ್ರೆಯನ್ನು ಸಿದ್ದಮಾಡಿಕೊಂಡು ಪ್ರತಿನಿತ್ಯ ಮನೆಯಲ್ಲಿ ಪೂಜೆಯನ್ನು ಮಾಡುವುದರಿಂದ ಲಕ್ಷ್ಮೀದೇವಿ ಅನುಗ್ರಹವು ಪ್ರಾಪ್ತಿಯಾಗುತ್ತದೆ ಹಾಗೂ ಯಾವುದೇ ರೀತಿಯ ಆರ್ಥಿಕ ಸಮಸ್ಯೆಗಳು ಇದ್ದರೂ ಪರಿಹಾರವಾಗುತ್ತದೆ ಮತ್ತು ಬಾಕಿ ಬರಬೇಕಾಗಿದ್ದ ಹಣ ಕೈ ಸೇರುತ್ತದೆ ಮತ್ತು ಧನ ಸಂಪತ್ತು ವೃದ್ಧಿಯಾಗುತ್ತದೆ.

ಒಂದು ವೇಳೆ ಮನೆಯಲ್ಲಿ ಅನವಶ್ಯಕ ಖರ್ಚುಗಳು ಜಾಸ್ತಿಯಾಗುತ್ತಿವೆ ಮತ್ತು ಎಷ್ಟೇ ಸಂಪಾದನೆ ಮಾಡಿ ಹಣವನ್ನು ತಂದರು ಅದು ಕೈಯಲ್ಲಿ ನಿಲ್ಲುತ್ತಿಲ್ಲ ಎನ್ನುವವರು ಸಂಬಳ ತಂದ ದಿನದಂದು ಹಣವನ್ನು ಅಕ್ಷಯ ಪಾತ್ರೆಯ ಒಳಗೆ ಹಾಕಿ ತದನಂತರ ಉಪಯೋಗಿಸುವುದರಿಂದ ಅನವಶ್ಯಕ ಖರ್ಚುಗಳು ಕಡಿಮೆಯಾಗಿ ಧನ ಸಂಪತ್ತು ವೃದ್ಧಿಯಾಗುತ್ತದೆ.

ಸಾಲದಿಂದ ಕೊರಗುತ್ತಿರುವವರು ಶುಕ್ರವಾರದ ದಿನದಂದು ನಿಮ್ಮ ಹತ್ತಿರ ಎಷ್ಟು ಹಣ ಇರುತ್ತದೆಯೋ ಅಷ್ಟು ಹಣವನ್ನು ಅಕ್ಷಯಪಾತ್ರೆಗೆ ಹಾಕಿ ಮಂಗಳವಾರದಂದು ಆ ಹಣವನ್ನು ತೆಗೆದುಕೊಂಡು ಉಪಯೋಗಿಸುವುದರಿಂದ ಸಾಲಬಾಧೆ ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ.ಮಡಿಕೆಯಲ್ಲಿರುವ ಕಲ್ಲುಪ್ಪನ್ನು ಮೂರು ತಿಂಗಳಿಗೊಮ್ಮೆ ಬದಲಾಯಿಸಬೇಕು. ಕಲ್ಲುಪ್ಪನ್ನು ಬದಲಾಯಿಸುವಾಗ ಭಾನುವಾರ ದಿನದಂದು ಮಡಿಕೆಯಿಂದ ತೆಗೆದು ಹರಿಯುವ ನೀರಿನಲ್ಲಿ ವಿಸರ್ಜನೆ ಮಾಡಬೇಕು. ಈ ರೀತಿಯಾಗಿ ಮಾಡುವುದರಿಂದ ಅಕ್ಷಯ ಪಾತ್ರೆಯಿಂದ ನಿಮ್ಮ ಮನೆಯಲ್ಲಿ ಸುಖ,ಸಂತೋಷ ಅಕ್ಷಯವಾಗುತ್ತಿರುವುದುರಲ್ಲಿ ಸಂಶಯವಿಲ್ಲ.