ಕೆಲವೊಂದು ಅಪಾರ್ಟ್ಮೆಂಟ್ ಮನೆಗಳಲ್ಲಿ ದೇವರನ್ನ ಪೂಜಿಸುವುದಕ್ಕೆ ಎಂದು ಪ್ರತ್ಯೇಕವಾದ ಕೊಠಡಿ ಇರುವುದಿಲ್ಲ, ಇನ್ನು ಕೆಲವರ ಮನೆಯಲ್ಲಿ ದೇವರ ಕೋಣೆಯನ್ನು ಪ್ರತ್ಯೇಕವಾಗಿ ಕಟ್ಟುವುದಕ್ಕೆ ಜಾಗವಿರುವುದಿಲ್ಲ ಎಂದರೆ ಆಗ ಆ ಮನೆಯಲ್ಲಿ ವಾಸಿಸುವುದು ಎಷ್ಟು ಯೋಗ್ಯ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ.ಮೊಟ್ಟಮೊದಲಿಗೆ ಹೊಸದಾಗಿ ಮನೆಯನ್ನು ಕಟ್ಟುವುದಾದರೆ ಪ್ರತ್ಯೇಕವಾಗಿ ದೇವರ ಕೋಣೆಯನ್ನು ಕಟ್ಟಲೇಬೇಕು. ಮನೆಗೆ ಯಜಮಾನನು ಕಷ್ಟಪಟ್ಟು ದುಡಿಯುವ ಗಂಡನಲ್ಲ, ಮನೆಗೆ ಯಜಮಾನನು ಕುಲದೇವರು ಅಥವಾ ಮನೆದೇವರು. ಯಾವಾಗ ಮನೆದೇವರು ತೃಪ್ತಿಯಿಂದ ಇರುತ್ತಾರೆ ಆಗ ಮಾತ್ರ ಯಜಮಾನನು ತೃಪ್ತಿಯಿಂದ ಜೀವನವನ್ನು ನಡೆಸಬಹುದು. ಆದ್ದರಿಂದ ಸ್ವಂತ ಮನೆಯನ್ನು ಕಟ್ಟುತ್ತಿದ್ದರೆ ಪ್ರತ್ಯೇಕವಾಗಿ ದೇವರ ಕೋಣೆಯನ್ನು ಕಟ್ಟುವುದು ಅತಿಮುಖ್ಯ.ಒಂದು ವೇಳೆ ಯಾರಾದರೂ ಬಾಡಿಗೆ ಮನೆಯಲ್ಲಿದ್ದು ಅಲ್ಲಿ ದೇವರ ಮನೆಯು ಇಲ್ಲವೆಂದರೆ ಪ್ಲೇವುಡ್ನಲ್ಲಿ ಮಾಡಿಸಿ ಯಾವುದೋ ಒಂದು ಗೋಡೆ ಮೇಲೆ ನೇತು ಹಾಕಬೇಡಿ ಅದರ ಬದಲು ಕೆಳಗಿನ ಹಂತದಿಂದ ಬರುವಹಾಗೆ ದೇವರನ್ನು ಪೂಜಿಸಬೇಕು. ಯಾವತ್ತೂ ಕೂಡ ಪೂಜೆಯನ್ನು ನಿಂತುಕೊಂಡು ಮಾಡಬಾರದು. ಕೇವಲ ಮಂಗಳಾರತಿ, ಪ್ರದಕ್ಷಿಣೆ, ನಮಸ್ಕಾರ ಹಾಗೂ ಪ್ರಾರ್ಥನೆಯ ಸಮಯದಲ್ಲಿ ಮಾತ್ರ ನಿಂತುಕೊಳ್ಳಬೇಕು. ಪೂಜೆಯನ್ನು ಯಾವಾಗಲೂ ಕುಳಿತುಕೊಂಡು ನಿಧಾನವಾಗಿ, ನಿಸ್ಸಂದೇಹವಾಗಿ, ಸಂತೃಪ್ತಿಯಿಂದ, ಭಕ್ತಿಯಿಂದ ದೇವರ ಪೂಜೆಯನ್ನು ಮಾಡಬೇಕು.
ಯಾವ ರೀತಿ ಮನುಷ್ಯನಿಗೆ ಏಕಾಂತ ಬೇಕೋ ಅದೇ ರೀತಿ ದೇವರನ್ನು ಪೂಜೆ ಮಾಡುವುದಕ್ಕೂ ಒಂದು ಪ್ರತ್ಯೇಕವಾದ ಸ್ಥಳವಿರಬೇಕು. ಹಾಗಾಗಿ ಪ್ರತ್ಯೇಕವಾದ ದೇವರ ಕೊಠಡಿಯನ್ನು ಕಟ್ಟಿ ಅಲ್ಲಿ ಕುಲದೇವರು ಅಥವಾ ಮನೆ ದೇವರನ್ನು ಪೂಜೆ ಮಾಡುವುದರಿಂದ ಜೀವನದಲ್ಲಿ ಏಳಿಗೆಯನ್ನು ಕಾಣಬಹುದು.