ಈ ಒಂದು ವಸ್ತುವನ್ನು ದಾನವಾಗಿ ನೀಡುವುದರಿಂದ ಶನಿಕಾಟ ಕಡಿಮೆಯಾಗುತ್ತಾ ಬರುತ್ತದೆ.

ಜ್ಯೋತಿಷ್ಯ

ಪ್ರತಿಯೊಬ್ಬ ಮನುಷ್ಯನಿಗೂ ಐಷಾರಾಮಿ ಜೀವನವನ್ನು ನಡೆಸಬೇಕೆಂಬ ಆಸೆ ಇರುತ್ತದೆ. ಆದರೆ ನಾವು ಮಾಡುವ ಪಾಪ-ಪುಣ್ಯದ ಕೆಲಸಗಳನ್ನು ಬರೆದಿಡುವುದು ಶನಿಮಹಾತ್ಮ. ನಾವು ಮಾಡಿದ ಕೆಲಸಗಳ ಅನುಸಾರವಾಗಿ ಶನಿ ದೇವರು ಪ್ರತಿಯೊಂದು ಸಮಯದಲ್ಲಿ ಯಾರಿಗೆ ಏನು ಲಭಿಸಬೇಕು ಎಂಬುದನ್ನು ತಿಳಿದುಕೊಂಡು ಆ ವ್ಯಕ್ತಿಗೆ ಕಷ್ಟವನ್ನು ಆಗಲಿ ಅಥವಾ ಸುಖವನ್ನು ಆಗಲಿ ನೀಡುತ್ತಿರುತ್ತಾರೆ. ಆದರೆ ಕೆಲವರು ಯಾವುದೇ ಕೆಲಸ ಕಾರ್ಯಗಳನ್ನು ಮಾಡಿದರು ಅವರಿಗೆ ಯಶಸ್ಸು ದೊರೆಯುತ್ತಿರುವುದಿಲ್ಲ ಹಾಗೂ ಮನೆಯಲ್ಲಿ ಸಮಸ್ಯೆಗಳು ಹೆಚ್ಚಾಗುತ್ತಿರುತ್ತದೆ ಇದಕ್ಕೆಲ್ಲ ಕಾರಣವೇನೆಂದರೆ ಹಿಂದಿನ ಜನ್ಮದಲ್ಲಿ ಮಾಡಿದ ಪಾಪ ಕರ್ಮಗಳು ಈ ಜನ್ಮದಲ್ಲಿ ಅವರಿಗೆ ಕಷ್ಟ ಪಡುವಂತೆ ಮಾಡಿರುತ್ತದೆ.ನವಗ್ರಹದಲ್ಲಿ ಶನಿಮಹಾತ್ಮನಿಗೆ ಅಧಿಪತಿ ಯಾಗಿರುವುದು ಎಳ್ಳು. ಹಾಗಾಗಿ ಎಳ್ಳನ್ನು ದಾನವಾಗಿ ಕೊಡುವುದರಿಂದ ತುಂಬಾ ಒಳ್ಳೆಯದಾಗುತ್ತದೆ. ಬ್ರಾಹ್ಮಣರಿಗೆ ಶನಿವಾರದ ದಿನದಂದು ಎಲೆ,ಅಡಿಕೆ, ಬಾಳೆ ಹಣ್ಣು ಹಾಗೂ ಎಳ್ಳನ್ನು ದಾನ ಕೊಡುವ ಸಮಯದಲ್ಲಿ ನಾಣ್ಯವನ್ನು ಕೊಟ್ಟರೆ ತುಂಬಾ ಒಳ್ಳೆಯದಾಗುತ್ತದೆ.

ಒಂದು ವೇಳೆ ನಿಮಗೆ ಮೇಲೆ ಹೇಳಿರುವ ಪದಾರ್ಥಗಳಿಂದ ಬ್ರಾಹ್ಮಣರಿಗೆ ದಾನವನ್ನು ಕೊಡುವುದಕ್ಕೆ ಸಾಧ್ಯವಾಗದಿದ್ದರೆ ಶನಿವಾರದಂದು ಕಪ್ಪು ಬಟ್ಟೆಯಲ್ಲಿ ಕಪ್ಪು ಎಳ್ಳನ್ನು ನಿಮ್ಮ ಕೈಯಿಂದ ತೆಗೆದುಕೊಂಡು ಹೋಗಿ ಹರಿಯುವ ನೀರಿಗೆ ಬಿಟ್ಟರೆ ಬಹಳ ಒಳ್ಳೆಯದಾಗುತ್ತದೆ. ಆದ್ದರಿಂದ ಶನಿ ದೋಷವಿದ್ದವರು ಮೇಲೆ ತಿಳಿಸಲಾಗಿರುವ ಯಾವುದಾದರೂ ಒಂದು ದಾನವನ್ನು ಮಾಡುವುದರಿಂದ ಶನಿ ದೋಷವು ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ.

Leave a Reply

Your email address will not be published. Required fields are marked *