ಮನೆಯಲ್ಲಿರುವ ಪ್ರತಿಯೊಬ್ಬ ಸದಸ್ಯರು ಸಂತೋಷದಿಂದ ಬಾಳಬೇಕು, ಯಾರ ಕೆಟ್ಟದೃಷ್ಟಿಯು ಮನೆಗೆ ತಾಗಬಾರದು, ಮನೆ ಯಜಮಾನನು ಒಳ್ಳೆಯ ರೀತಿಯಿಂದ ಧನ ಸಂಪತ್ತನ್ನು ಪಡೆದುಕೊಳ್ಳಬೇಕು ಹಾಗೂ ಕುಟುಂಬದ ಸದಸ್ಯರೆಲ್ಲರೂ ಆರೋಗ್ಯವಂತರಾಗಿರಬೇಕು ಎಂದು ಆಶಿಸುವುದು ಸರ್ವೇ ಸಾಮಾನ್ಯ. ಮನೆ ಯಜಮಾನನು ಹಾಗೂ ಕುಟುಂಬದವರು ಸುಖವಾಗಿ ಇರಬೇಕೆಂದರೆ ಐಶ್ವರ್ಯ ಕಾಳಿಕಾ ದೇವಿ ಫೋಟೋವನ್ನು ಅಥವಾ ಚಿತ್ರಪಟವನ್ನು ಮನೆಯಲ್ಲಿ ಇಡಬೇಕು.
ಐಶ್ವರ್ಯ ಕಾಳಿಕಾ ದೇವಿ ಬಹಳ ಶಕ್ತಿವಂತಳು ಹಾಗೂ ಅವಳು ಮನೆ ಯಜಮಾನನಿಂದ ಹಿಡಿದು ಪುಟ್ಟ ಮಕ್ಕಳನ್ನು ಕಾಯುತ್ತಾಳೆ. ನರ ದೋಷ, ನರದೃಷ್ಟಿ, ಕೆಟ್ಟದೃಷ್ಟಿ ಹೀಗೆ ಹಲವಾರು ರೀತಿಯ ಸಮಸ್ಯೆಗಳಿಂದ ಮುಕ್ತಿ ಹೊಂದಬೇಕೆಂದರೆ ಮನೆಯಲ್ಲಿ ಐಶ್ವರ್ಯ ಕಾಳಿಕಾದೇವಿಯ ಚಿತ್ರಪಟವನ್ನು ಇಟ್ಟುಕೊಳ್ಳಬೇಕು.ಐಶ್ವರ್ಯ ಕಾಳಿಕಾದೇವಿಯ ಚಿತ್ರಪಟವನ್ನು ಮನೆಯ ಮುಖ್ಯ ದ್ವಾರದ ಮೇಲೆ ಹಾಕಬೇಕು. ಇದರಿಂದ ಯಾವುದೇ ದುಷ್ಟಶಕ್ತಿಗಳು ಮನೆಯೊಳಗೆ ಪ್ರವೇಶವನ್ನು ಮಾಡುವುದಿಲ್ಲ. ದೇವಿಯ ಮೇಲೆ ನಂಬಿಕೆಯನ್ನಿಟ್ಟು ಚಿತ್ರಪಟವನ್ನು ಮುಖ್ಯ ದ್ವಾರದ ಮೇಲ್ಭಾಗದಲ್ಲಿ ಹಾಕಿದರೆ ಶುಭಫಲವನ್ನು ನೀಡುತ್ತಾರೆ. ಒಳ್ಳೆಯ ಮನಸ್ಸಿನಿಂದ ಹಾಗೂ ಭಕ್ತಿಯಿಂದ ಭಗವಂತನನ್ನು ಬೇಡಿಕೊಂಡರೆ ಯಾವುದೇ ಸಮಯದಲ್ಲಾದರೂ ಸರಿ ಭಗವಂತನು ನಮ್ಮನ್ನು ಕೈಬಿಡುವುದಿಲ್ಲ.
ಐಶ್ವರ್ಯ ಕಾಳಿಕಾದೇವಿಯಿಂದ ಧನ ಸಂಪತ್ತು ಲಭಿಸುತ್ತದೆ. ದೇವಿಯ ಚಿತ್ರಪಟವನ್ನು ಶುಕ್ರವಾರದಂದು ಅಥವಾ ಅಮಾವಾಸ್ಯೆ ದಿನದಂದು ತಂದರೆ ತುಂಬಾ ಒಳ್ಳೆಯದು. ಐಶ್ವರ್ಯ ಕಾಳಿಕಾದೇವಿಯ ಮಂತ್ರವನ್ನು 108 ಬಾರಿ ಜಪಿಸಿದರೆ ತುಂಬಾ ಒಳ್ಳೆಯದು. ಒಂದು ವೇಳೆ 108 ಬಾರಿ ಹೇಳುವುದಕ್ಕೆ ಸಮಯವಿಲ್ಲವೆಂದರೆ ಕನಿಷ್ಠ 21 ಬಾರಿ ಜಪಿಸಬೇಕು.ಓಂ ಹಿಂ ರಿಂ ಕ್ಲೀಮ್ ಶ್ರೀ ಐಶ್ವರ್ಯ ಕಾಳಿಕಾಯೆ ನಮಃ
ಈ ಮೇಲಿನ ಮಂತ್ರವನ್ನು ಜಪಿಸುವುದರಿಂದ ಧನಸಂಪತ್ತು ವೃದ್ಧಿಯಾಗುತ್ತದೆ ಹಾಗೂ ವ್ಯಾಪಾರ-ವ್ಯವಹಾರಗಳಲ್ಲಿ ಅಭಿವೃದ್ಧಿಯನ್ನು ಕಾಣಬಹುದು ಮತ್ತು ಕೈಗೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸಬಹುದು. ಈ ಮಂತ್ರದಿಂದ ಮನೆಯಲ್ಲಿರುವ ವಾಸ್ತು ದೋಷ ನಿವಾರಣೆಯಾಗುತ್ತದೆ ಹಾಗೂ ಯಾವುದೇ ರೀತಿಯ ದುಷ್ಟ ಶಕ್ತಿಗಳ ಪ್ರಭಾವವು ಮನೆಯ ಮೇಲೆ ಬೀಳುವುದಿಲ್ಲ.