ಶ್ರೀ ಶಕ್ತಿ ಆಂಜನೇಯ ಸ್ವಾಮಿಯ ಆಶೀರ್ವಾದ ಆಷಾಢದಿಂದ ರಾಜಯೋಗ ಪ್ರಾರಂಭ ದಿನಭವಿಷ್ಯ..

ಜ್ಯೋತಿಷ್ಯ

ಮೇಷ:- ನಿಮ್ಮಲ್ಲಿನ ಆತ್ಮವಿಶ್ವಾಸ ಮತ್ತು ನಿಮ್ಮ ಬಗೆಗಿನ ನಂಬಿಕೆ ಸ್ಥೈರ್ಯ ಧೈರ್ಯಗಳು ನಿಮಗೆ ಅನುಕೂಲವಾಗುವವು. ನೀವು ನಡೆಯುವ ದಾರಿಯಲ್ಲಿ ಯಾವುದೇ ಅಡೆತಡೆಗಳು ಕಂಡುಬರುವುದಿಲ್ಲ. ನಿಮ್ಮ ಸಹಾಯಕ್ಕೆ ಸ್ನೇಹಿತರು ನಿಮ್ಮೊಂದಿಗೆ ಹೆಜ್ಜೆ ಹಾಕುವರು.

ವೃಷಭ:- ನಿಮ್ಮ ಮನಸ್ಸಿಗೆ ಸಂತೋಷ ಎನಿಸುವ ಕಾರ್ಯವು ಪೂರ್ಣಗೊಳ್ಳುವುದು. ಮಕ್ಕಳು ವಿದ್ಯಾಕಲಿಕೆಯಲ್ಲಿ ಪ್ರಗತಿ ತೋರಿ ನಿಮಗೆ ಹರ್ಷವನ್ನುಂಟು ಮಾಡುವರು. ಹಿರಿಯರ ಆಶೀರ್ವಾದವು ಬೇಗನೆ ದೊರೆಯುವುದು.

ಮಿಥುನ:- ಬಹು ನಿರೀಕ್ಷಿತವಾದ ದೂರ ಪ್ರವಾಸ ಕುರಿತು ಮಾಹಿತಿ ಲಭ್ಯವಾಗುವುದು. ಆ ಮೂಲಕ ನಿಮ್ಮ ಬಹುದಿನದ ಕನಸು ನನಸಾಗುವುದು. ಹಣಕಾಸಿನ ಪರಿಸ್ಥಿತಿಯು ಅದಕ್ಕೆ ಪೂರಕವಾಗಿ ಲಭ್ಯವಾಗುವುದರಿಂದ ಹೆಚ್ಚು ಚಿಂತೆ ಪಡುವ ಅಗತ್ಯವಿಲ್ಲ.

ಕಟಕ:- ಪರೋಪಕಾರಾರ್ಥಂ ಇದಂ ಶರೀರಂ ಎಂದು ಭಾವಿಸಿರುವ ನೀವು ಅನೇಕ ಜನರಿಗೆ ಸಹಾಯ ಹಸ್ತ ನೀಡುವಿರಿ. ಈ ನಿಮ್ಮ ಮನೋಭಾವನೆಯು ಸರ್ವ ಜನರಿಂದ ಮೆಚ್ಚುಗೆಗೆ ಪಾತ್ರವಾಗುವುದು. ಆದರೆ ಮಾತಿನಲ್ಲಿ ನಯ, ವಿನಯ ಇರಲಿ.

ಸಿಂಹ:- ದೈಹಿಕ ಬಲದ ಜೊತೆಗೆ ಬುದ್ಧಿಯ ತೇಜಸ್ಸು ಹರಿತವಾದ್ದರಿಂದ ನಿಮ್ಮ ಊಹೆ ತರ್ಕಗಳು ಸರಿ ಎನಿಸುವುದು. ಇದರಿಂದ ನಿಮ್ಮ ಆಪ್ತರಿಂದ ಮೆಚ್ಚುಗೆಯನ್ನು ಪಡೆಯುವಿರಿ. ಆದರೆ ಕುಟುಂಬದ ಸದಸ್ಯರಿಂದ ಮೂದಲಿಕೆಗೆ ಗುರಿ ಆಗುವಿರಿ.

ಕನ್ಯಾ:- ಎಷ್ಟೇ ಬುದ್ಧಿಶಾಲಿಯಾದರೂ ಎಲ್ಲಾ ವಿಷಯಗಳಲ್ಲೂ ಅಥವಾ ಎಲ್ಲಾ ರಂಗದಲ್ಲೂ ನೀವೇನು ಸರ್ವಜ್ಞರಲ್ಲ. ಹಾಗಾಗಿ ಅನ್ಯರ ಅನುಭವ ಮತ್ತು ಹಿತವಚನಗಳನ್ನು ಆಲಿಸಿದಲ್ಲಿ ನಿಮಗೆ ಒಳಿತಾಗುವುದು. ಆದಾಗ್ಯೂ ಜನರಲ್ಲಿ ನಿಮ್ಮ ಬಗ್ಗೆ ಗೌರವವಿರುತ್ತದೆ.

ತುಲಾ:- ಹೊಸ ಜನರ ಪರಿಚಯದೊಂದಿಗೆ ಹೊಸದಾದ ಜವಾಬ್ದಾರಿ ನಿಮ್ಮ ಹೆಗಲೇರುವ ಸಾಧ್ಯತೆ ಇದೆ. ರಾಜಕೀಯ ಇಲ್ಲವೆ ಸಮಾಜದಲ್ಲಿನ ಪ್ರಭಾವಿ ವ್ಯಕ್ತಿಗಳ ಸಂಪರ್ಕ ದೊರೆತು ಅದರಿಂದ ನಿಮ್ಮ ವ್ಯಾಪಾರ, ವ್ಯವಹಾರಗಳಿಗೆ ಹೆಚ್ಚಿನ ಅನುಕೂಲವಾಗುವವು.

ವೃಶ್ಚಿಕ:- ನಿಮ್ಮ ಮಕ್ಕಳು ನಿಮಗೆ ಇಷ್ಟವಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದರೆ ಅದರ ಹಿಂದೆ ಯಾವುದೋ ಮಹತ್ತರ ಬಯಕೆ ಈಡೇರಿಸಿಕೊಳ್ಳುವ ಇರಾದೆ ಇರುತ್ತದೆ. ಈ ಬಗ್ಗೆ ಸೂಕ್ಷ್ಮವಾಗಿ ಗಮನಿಸಿ ಅವರಿಗೆ ಸಹಾಯ ಮಾಡಿ. ಅವರೂ ಖುಷಿ ಪಡುವರು.

ಧನುಸ್ಸು:- ನಿಮ್ಮ ಸಮಸ್ಯೆಗಳೇ ಸಾಕಷ್ಟು ಇರುವಾಗ ಪರರ ಸಂಕಷ್ಟಗಳಿಗೆ ಮರುಗಿ ಸಹಾಯ ಮಾಡಲು ಹೋಗಿ ನೀವೇ ಸಿಕ್ಕಿಹಾಕಿಕೊಳ್ಳುವಿರಿ. ಈ ಬಗ್ಗೆ ಎರಡು ಬಾರಿ ಚಿಂತಿಸಿ ಕಾರ್ಯ ಪ್ರವೃತ್ತರಾಗಿ. ಹಣಕಾಸಿನ ಪರಿಸ್ಥಿತಿ ಸಾಧಾರಣವಾಗಿರುತ್ತದೆ.

ಮಕರ:- ಸರಿದಾರಿಯಲ್ಲಿದ್ದರೂ ಆಪ್ತರಿಂದ ಸಲಹೆ ಸೂಚನೆ ಪಡೆಯಿರಿ. ನಿಮ್ಮ ಆಂತರಿಕ ತುಮುಲಗಳ ನಿವಾರಣೆಗಾಗಿ ಮನೋನಿಯಾಮಕ ರುದ್ರದೇವರಲ್ಲಿ ಪ್ರಾರ್ಥಿಸಿಕೊಳ್ಳಿ. ನಿರುದ್ಯೋಗಿಗಳಿಗೆ ಸಣ್ಣಪುಟ್ಟ ನೌಕರಿ ದೊರೆಯುವ ಸಂಭವವಿರುತ್ತದೆ.

ಮೀನ:- ನಿಮಗೆ ನೀವೇ ಗುರುವಾಗಿ ನಿಮ್ಮ ಇತಿಮಿತಿಯ ಬಗ್ಗೆ ತಿಳಿಯಿರಿ. ಇದರಿಂದ ಸಮಾಜದಲ್ಲಿ ನಿಮಗೆ ಗೌರವ ದೊರೆಯುವುದು. ಹಣಕಾಸಿನ ಪರಿಸ್ಥಿತಿ ಅಷ್ಟೇನೂ ಆಶಾದಾಯಕವಾಗಿರುವುದಿಲ್ಲ. ಹಾಗಾಗಿ ಹಣ ಖರ್ಚಿನ ಬಗ್ಗೆ ಕೈಬಿಗಿ ಹಿಡಿತವಿರಲಿ.