ಮನುಷ್ಯನಿಗೆ ಕೆಟ್ಟ ಸಮಯ ಶುರುವಾಗಿದೆ ಎಂದು ಈ 7 ಸಂಕೇತಗಳು ಸೂಚಿಸುತ್ತವೆ..ಶ್ರೀ ಕೃಷ್ಣ ಪರಮಾತ್ಮ ಹೇಳಿದ್ದಾರೆ ಮನುಷ್ಯನಿಗೆ ಕಷ್ಟದ ದಿನಗಳು ಪ್ರಾರಂಭವಾಗುವ ಮುನ್ನ ಕೆಲವು ಸಂಕೇತಗಳು ದೊರೆಯುತ್ತದೆ. ಈ ರೀತಿಯಾಗಿ ಸೂಚನೆಗಳು ಸಿಕ್ಕಾಗ ಮನುಷ್ಯನು ತುಂಬಾ ಜಾಗರೂಕತೆಯಿಂದ ಹೆಜ್ಜೆ ಇಡಬೇಕಾಗುತ್ತದೆ. ಮನುಷ್ಯನ ಕರ್ಮಗಳ ಅನುಸಾರವಾಗಿ ಒಳ್ಳೆಯ t ಹಾಗೂ ಕೆಟ್ಟ ಫಲಗಳು ಲಭಿಸುತ್ತದೆ. ಆದ್ದರಿಂದ ಭಗವಂತ ನಮ್ಮ ಕರ್ಮಗಳ ಅನುಸಾರವಾಗಿ ಫಲಗಳನ್ನು ನೀಡುತ್ತಾನೆ ಎಂದು ಭಾವಿಸಬೇಕು. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿರುವ ಕೆಲವು ವಸ್ತುಗಳು ನಮಗೆ ಕೆಟ್ಟ ಸಮಯ ಶುರುವಾಗುತ್ತಿದೆ ಎಂಬುದನ್ನು ಸೂಚಿಸುತ್ತದೆ.
ತುಳಸಿ ಗಿಡವು ದೈವಿಕ ಶಕ್ತಿಯನ್ನು ಹೊಂದಿದೆ. ಯಾರ ಮನೆಯಲ್ಲಿ ತುಳಸಿ ಗಿಡ ಒಣಗಲು ಪ್ರಾರಂಭವಾಗುತ್ತದೆಯೋ ಆ ಮನೆಯಲ್ಲಿ ಕಷ್ಟದ ದಿನಗಳು ಪ್ರಾರಂಭವಾಗುತ್ತದೆ ಎಂಬುದನ್ನು ಸೂಚಿಸುತ್ತದೆ.ತುಳಸಿ ಗಿಡ ಒಣಗಲು ಪ್ರಾರಂಭವಾದರೆ ನಕಾರಾತ್ಮಕ ಶಕ್ತಿ ಮನೆಯನ್ನು ಪ್ರವೇಶ ಮಾಡಿದೆ ಎಂಬುದನ್ನು ಸೂಚಿಸುತ್ತದೆ. ಆದ್ದರಿಂದ ತುಳಸಿ ಗಿಡ ಒಣಗಿದ ಮೇಲೆ ಪ್ರತಿಯೊಬ್ಬರ ಮನೆಯಲ್ಲೂ ಗಿಡವನ್ನು ಬದಲಾಯಿಸಬೇಕು.
ಯಾರ ಮನೆಯಲ್ಲಿ ನಕಾರಾತ್ಮಕ ಶಕ್ತಿ ,ದುಷ್ಟ ಶಕ್ತಿಗಳ ಪ್ರಭಾವ ಹೆಚ್ಚಿರುತ್ತದೆಯೋ ಆ ಮನೆಯವರು ನೀಡಿದ ಆಹಾರವನ್ನು ಗೋಮಾತೆಯು ತಿನ್ನುವುದಿಲ್ಲ. ಇದರಿಂದ ನಕಾರಾತ್ಮಕ ಶಕ್ತಿಯು ಮನೆಯನ್ನು ಪ್ರವೇಶ ಮಾಡಿದೆ ಎಂಬುದನ್ನು ಸೂಚಿಸುತ್ತದೆ. ಮನೆಯಲ್ಲಿರುವ ಹಾಲು ಪದೇಪದೇ ಕೈಜಾರಿ ಚೆಲ್ಲುತ್ತಿದ್ದರು ಕಷ್ಟದ ಸಮಯಗಳು ಸಮೀಪ ಬಂದಿದೆ ಎಂಬುದನ್ನು ಸೂಚಿಸುತ್ತದೆ.
ಮನೆಯ ಮೇಲ್ಚಾವಣಿಯ ಮೇಲೆ ಪದೇ ಪದೇ ಪಕ್ಷಿಗಳು ಸಾವನ್ನಪ್ಪುತ್ತಿದ್ದಾರೆ ಅಪಶಕುನ ಎಂದು ಭಾವಿಸಲಾಗುತ್ತದೆ. ದೇವರಿಗೆ ಪೂಜೆ ಮಾಡಬೇಕಾದರೆ ಆರತಿ ತಟ್ಟೆಯು ಪದೇಪದೇ ಕೈಜಾರಿ ಬೀಳುತ್ತಿದ್ದರೆ ಪೂಜೆಯಲ್ಲಿ ಏನೋ ದೋಷವಾಗಿದೆ ಅಥವಾ ಮುಂದಿನ ದಿನಗಳು ಕಷ್ಟಕರವಾಗಲಿದೆ ಜಾಗರೂಕತೆಯಿಂದ ನಡೆಯಬೇಕು ಎಂಬುದನ್ನು ಸೂಚಿಸುತ್ತದೆ.
ಮನೆಯಲ್ಲಿ ಪ್ರತಿನಿತ್ಯ ಅತ್ತೆ ಸೊಸೆಯ ನಡುವೆ, ತಂದೆ ಮಕ್ಕಳ ನಡುವೆ ಕಲಹಗಳು ನಡೆಯುತ್ತಿದ್ದರೆ ಕೆಟ್ಟ ಸಮಯ ಹತ್ತಿರ ಬರುತ್ತಿದೆ ಎಂಬುದನ್ನು ಸೂಚಿಸುತ್ತದೆ. ಹೆಂಗಸರು ಕುಂಕುಮವನ್ನು ಇಟ್ಟುಕೊಳ್ಳುವಾಗ ಪದೇಪದೇ ಸಿಂಧೂರ ಕೈಜಾರಿ ಬೀಳುತ್ತಿದ್ದರೆ ಗಂಡನಿಗೆ ಉದ್ಯೋಗದಲ್ಲಿ ಹಾಗೂ ವ್ಯಾಪಾರದಲ್ಲಿ ತುಂಬಾ ನಷ್ಟವೂ ಆಗುತ್ತದೆ ಎಂಬುದನ್ನು ಸೂಚಿಸುತ್ತದೆ. ಈ ರೀತಿಯ ಸೂಚನೆಗಳು ದೊರೆತಾಗ ಮನೆ ಹತ್ತಿರ ಇರುವ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನವನ್ನು ಪಡೆದು ಕೊಳ್ಳಬೇಕು. ಮನೆಯಲ್ಲಿ ವಿಷ್ಣುಸಹಸ್ರನಾಮವನ್ನು ಕೇಳಬೇಕು. ಕುಲದೇವರು ಅಥವಾ ಮನೆ ದೇವರ ದರ್ಶನವನ್ನು ಪಡೆದು ಕೊಳ್ಳಬೇಕು. ಈ ರೀತಿ ಮಾಡುವುದರಿಂದ ನಿಮಗೆ ಎದುರಾಗುವ ಕಷ್ಟಗಳು ಕಡಿಮೆಯಾಗುತ್ತದೆ.