ಪೂಜೆ ಮಾಡಿದ ನಂತರ ಪಾಲಿಸಬೇಕಾದ ನಿಯಮಗಳು ಯಾವುವು ಎಂಬುದರ ಬಗ್ಗೆ ಅರಿವಿದೆಯೇ ?

ಜ್ಯೋತಿಷ್ಯ

ಹಿಂದೂ ಧರ್ಮದಲ್ಲಿ ದೇವರನ್ನು ಪೂಜೆಯನ್ನು ಮಾಡುವುದಕ್ಕೆ ವಿಶೇಷವಾದ ಪದ್ಧತಿಯಿದೆ. ಪೂಜೆ ಮಾಡಬೇಕಾದಾಗ ಹಾಗೂ ಪೂಜೆಮಾಡಿದ ನಂತರವೂ ಹಲವು ನಿಯಮಗಳಿವೆ. ಈ ಎಲ್ಲಾ ನಿಯಮಗಳನ್ನು ಪಾಲಿಸಿದ್ದೆ ಆದಲ್ಲಿ ನಾವು ಮಾಡಿದ ಪೂಜೆಯು ಸಾರ್ಥಕವಾಗುವುದು. ಹಾಗಾದರೆ ದೇವಾನುದೇವತೆಗಳು ಅನುಗ್ರಹ ನಮ್ಮ ಮೇಲೆ ಇರಬೇಕೆಂದರೆ ಯಾವ ರೀತಿಯ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿದುಕೊಳ್ಳೋಣ ಬನ್ನಿ.ಯಾವುದೇ ದೇವಸ್ಥಾನಕ್ಕೆ ಹೋದರು ಪೂಜೆಯನ್ನು ಮಾಡಿಸಿದ ನಂತರ ಯಾವುದೇ ಕಾರಣಕ್ಕೂ ಈ ಕೆಲವೊಂದು ತಪ್ಪುಗಳನ್ನು ಮಾಡಬೇಡಿ. ಮೊದಲಿಗೆ ದೇವರ ಪೂಜೆ ಮಾಡಿದ ನಂತರ ಶಂಖನಾದವನ್ನು ಮಾಡಿ ಆರತಿಯನ್ನು ಮಾಡಬೇಕು. ಆರತಿಯನ್ನು ಸ್ವೀಕರಿಸಿದ ಬಳಿಕ ವಿಭೂತಿಯನ್ನು ಹಚ್ಚಿಕೊಂಡು ಭಗವಂತನಲ್ಲಿ ಪ್ರಾರ್ಥನೆಯನ್ನು ಮಾಡಬೇಕು. ಪ್ರಾರ್ಥನೆಯನ್ನು ಮಾಡಬೇಕಾದರೆ ಶುದ್ಧ ಮನಸ್ಸಿನಿಂದ ನಿಸ್ವಾರ್ಥ ಭಾವನೆಯಿಂದ ಬೇಡಿಕೊಳ್ಳಬೇಕು. ದೇವಸ್ಥಾನದಲ್ಲಿ ತೀರ್ಥವನ್ನು ಮೂರು ಬಾರಿ ಕೊಡಲಾಗುತ್ತದೆ. ಬಲ ಕೈಯಿಯ ಮಧ್ಯಭಾಗದಲ್ಲಿ ತೀರ್ಥವನ್ನು ತೆಗೆದುಕೊಂಡು ಭಗವಂತನನ್ನು ಮನದಲ್ಲಿ ನೆನೆಯುತ್ತಾ ಸೇವಿಸಬೇಕು. ತೀರ್ಥವನ್ನು ಸೇವಿಸಿದ ನಂತರ ಬಲ ಕೈಯನ್ನು ಹಣೆಯ ಭಾಗದಿಂದ ತಲೆ ಮೇಲೆ ಸವರಿಕೊಳ್ಳಬೇಕು.

ಹಿಂದೂ ಶಾಸ್ತ್ರದ ಪ್ರಕಾರ ಮಾನವನ ಅಂಗೈಯಲ್ಲಿ 3 ತೀರ್ಥ ಸ್ಥಾನಗಳಿರುತ್ತವೆ. ಅಂಗೈಯ ಮಧ್ಯಭಾಗದಲ್ಲಿ ಬ್ರಹ್ಮ ತೀರ್ಥ, ಕಿರುಬೆರಳಿನ ಕೆಳಗಡೆ ಋಷಿ ತೀರ್ಥ, ಹೆಬ್ಬೆರಳಿನ ನಡುವೆ ಪಿತೃ ತೀರ್ಥವಿರುತ್ತದೆ. ದೇವಸ್ಥಾನದಲ್ಲಿ ಪ್ರಸಾದವನ್ನು ಸ್ವೀಕರಿಸುವ ಮುನ್ನ ಪ್ರದಕ್ಷಿಣೆ ಹಾಕುವುದನ್ನು ಮರೆಯಬೇಡಿ. 3,5 ಅಥವಾ 9 ಸುತ್ತು ಸುತ್ತಿ ದೇವರಿಗೆ ಪ್ರದಕ್ಷಿಣೆಯನ್ನು ಹಾಕಬೇಕು. ಪ್ರದಕ್ಷಿಣೆ ಹಾಕಿದ ನಂತರ ದೇವರ ಪ್ರಸಾದವನ್ನು ಎರಡು ಕಣ್ಣಿಗೆ ಒತ್ತಿಕೊಂಡು ಸೇವಿಸಬೇಕು. ಈ ರೀತಿಯಾಗಿ ಮಾಡುವುದರಿಂದ ನೀವು ಮಾಡುವಂತ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಯಶಸ್ಸು ಎಂಬುದು ಖಂಡಿತ ಸಿಗುತ್ತದೆ.ಯಾವುದೇ ಪುಣ್ಯ ಕ್ಷೇತ್ರಕ್ಕೆ ಹೋದಾಗ ಅಥವಾ ದೇವಸ್ಥಾನಕ್ಕೆ ಹೋದಾಗ ಪೂಜೆಯನ್ನು ಮಾಡಿಸಿದ ನಂತರ ಮತ್ತು ಪ್ರಸಾದವನ್ನು ಸೇವಿಸಿದ ನಂತರ ಒಂದೆರಡು ನಿಮಿಷ ಕುಳಿತುಕೊಂಡು ಅನಂತರ ತೆರಳಬಹುದು. ಕೆಲವರು ಪ್ರತಿದಿನ ದೇವರ ಪೂಜೆಯನ್ನು ಮಾಡಿದ ನಂತರ ಹಿರಿಯರ ಕಾಲಿಗೆ ನಮಸ್ಕಾರ ಮಾಡುವ ಪದ್ಧತಿಯನ್ನು ಇಟ್ಟುಕೊಂಡಿರುತ್ತಾರೆ. ಹಿರಿಯರಿಗೆ ನಮಸ್ಕಾರ ಮಾಡುವಾಗ ಮೊದಲಿಗೆ ಬಲ ಕಾಲನ್ನು ಬಲ ಕೈಯಿಂದ ಮುಟ್ಟಿ, ಹಾಗೆಯೇ ಎಡ ಕಾಲನ್ನು ಎಡ ಕೈಯಿಂದ ಮುಟ್ಟಿ ನಮಸ್ಕರಿಸಿ. ಹೀಗೆ ಮಾಡಿದರೆ ಮಾತ್ರ ಹಿರಿಯರ ಆಶೀರ್ವಾದ ಫಲಪ್ರದವಾಗುತ್ತದೆ.

Leave a Reply

Your email address will not be published. Required fields are marked *