ಮಾಂಗಲ್ಯ ಹಾಗೂ ಕರಿಮಣಿಯ ಮಹತ್ವ ತಿಳಿದಿದೆಯೇ.

ಜ್ಯೋತಿಷ್ಯ

ಮಾಂಗಲ್ಯವನ್ನು ಧರಿಸುವುದು ಕೇವಲ ಪ್ರದರ್ಶನಕಲ್ಲ, ಇದಕ್ಕೊಂದು ವಿಶೇಷವಾದ ಹಿನ್ನೆಲೆ ಇದೆ. ವರನು ಮದುವೆಯ ಸಮಯದಲ್ಲಿ ಕಟ್ಟುವ ಕರಿಮಣಿ ಸರಕ್ಕೆ ವಿಶೇಷವಾದ ಮಹತ್ವವಿದೆ. ಮಂಗಳಸೂತ್ರ, ತಾಳಿ, ಕರಿಮಣಿ ಗೃಹಿಣಿಯರಿಗೆ ವಿಶೇಷವಾದದ್ದು. ಮಾಂಗಲ್ಯ ಹಾಗೂ ಕರಿಮಣಿ ಸರದ ವಿಶೇಷತೆಯನ್ನು ತಿಳಿದುಕೊಳ್ಳೋಣ ಬನ್ನಿ. ಜ್ಯೋತಿಷಿಗಳ ಮುಖಾಂತರ ಉತ್ತಮವಾದ ಮೂಹೂರ್ತವನ್ನು ತಿಳಿದುಕೊಂಡು ಮಂತ್ರಘೋಷಗಳೊಂದಿಗೆ ಮಂಗಳವಾದ್ಯದಿಂದ ಶಾಸ್ತ್ರಬದ್ಧವಾಗಿ ಜರುಗುವ ವಿವಾಹದಲ್ಲಿ ಮಾಂಗಲ್ಯಧಾರಣೆಯೇ ಅಂತಿಮ ದೈವಿಕ ಸಂಸ್ಕಾರ. ಮಾಂಗಲ್ಯಧಾರಣೆಯು ಅತ್ಯಂತ ಪ್ರಮುಖವಾದದ್ದು. ಪತಿ-ಪತ್ನಿಯ ದೀರ್ಘಾಯುಷ್ಯಕ್ಕಾಗಿ ಮಾಂಗಲ್ಯವನ್ನು ಕಟ್ಟಲಾಗುತ್ತದೆ. ಶಿವ ಪಾರ್ವತಿಯ ಕಲ್ಯಾಣದ ನಂತರ ಜಗತ್ತಿಗೆ ಮಾಂಗಲ್ಯಧಾರಣೆ ಸಂಪ್ರದಾಯ ಬಂದಿತು.

ಓಂ ಶ್ರೀ ಜಗನ್ಮಾತೆ ಕಟೀಲು ದುರ್ಗ ಪರಮೇಶ್ವರಿ ದೇವಿ ಆರಾಧಕರು ಜ್ಯೋತಿಷ್ಯರು ದೈವಜ್ಞ ಶ್ರೀಪ್ರಧಾನ ತಾಂತ್ರಿಕ್ ವಿಧ್ಯಾಧರ್ ನಕ್ಷತ್ರಿವಿಮರ್ಶಕರು ಕರೆ ಅಥವಾ ವಾಟ್ಸಪ್ ಮಾಡಿ 90365 27301. ನಿಮ್ಮಧ್ವನಿಯ ಮೂಲಕ ನಿಮ್ಮಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆಸಾಲಬಾದೆ ಸತಿಪತಿ ಕಲಹ, ಪ್ರೇಮವಿಚಾರ, ಅತ್ತೆ-ಸೊಸೆ ಕಲಹ ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನದೋಷ, ಗಂಡನ ಪರಸ್ತ್ರೀ ಸಹವಾಸಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮವೈಫಲ್ಯ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆಪ್ರಶ್ನೆ ಹಾಕಿ ನಿಮ್ಮಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 90365 27301.

ಈ ಮಾಂಗಲ್ಯದಲ್ಲಿ ಕರಿಮಣಿ ಸೇರಿಸುವುದು ವಿವಾಹಿತ ಹೆಂಗಸಿನ ಮೇಲೆ ಕೆಟ್ಟ ದೃಷ್ಟಿ ಬೀಳಬಾರದೆಂದು. ಕೆಟ್ಟ ದೃಷ್ಟಿಯೆಂದರೆ ಬರೀ ಮನುಷ್ಯನ ದೃಷ್ಟಿಯಲ್ಲ. ಭೂತ,ಪ್ರೇತ ಹಾಗೂ ದುಷ್ಟಶಕ್ತಿಯ ಪ್ರಭಾವ ಗೃಹಿಣಿಯ ಮೇಲೆ ಬೀಳಬಾರದು ಎಂದು ಕರಿಮಣಿಯನ್ನು ಹಾಕುತ್ತಾರೆ. ಕಪ್ಪು ಕರಿಮಣಿಗೆ ಋಣಾತ್ಮಕ ದೃಷ್ಟಿಗಳನ್ನೆಲ್ಲಾ ಹೀರಿಕೊಂಡು ಗೃಹಿಣಿಯನ್ನು ಹಾಗೂ ಕುಟುಂಬವನ್ನು ರಕ್ಷಣೆ ಮಾಡುವ ಶಕ್ತಿ ಇರುತ್ತದೆ. ಕರಿಮಣಿಯ ಮತ್ತೊಂದು ವಿಶೇಷತೆಯೆಂದರೆ ಗೃಹಿಣಿಯ ಎದೆ ಭಾಗದಲ್ಲಿ ಉಂಟಾಗುವ ಉಷ್ಣತೆಯನ್ನು ಹೀರಿಕೊಳ್ಳುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿಯವರು ಎಷ್ಟು ಕರಿಮಣಿಯನ್ನು ಸರದಲ್ಲಿ ಹಾಕಿಕೊಳ್ಳಬೇಕು ಎಂಬುದನ್ನು ಉಲ್ಲೇಖಿಸಲಾಗಿದೆ. ಮೇಷ ರಾಶಿಯವರಿಗೆ 21 ಕರಿಮಣಿಗಳು, ವೃಷಭ ರಾಶಿಯವರಿಗೆ 40 ಕರಿಮಣಿಗಳು, ಮಿಥುನ ರಾಶಿಯವರಿಗೆ 34 ಕರಿಮಣಿಗಳು, ಕಟಕ ರಾಶಿಯವರಿಗೆ 20 ಕರಿಮಣಿಗಳು, ಸಿಂಹ ರಾಶಿಯವರಿಗೆ 18 ಕರಿಮಣಿಗಳು, ಕನ್ಯಾ ರಾಶಿಯವರಿಗೆ 34 ಕರಿಮಣಿಗಳು, ತುಲಾ ರಾಶಿಯವರಿಗೆ 40 ಕರಿಮಣಿಗಳು, ವೃಶ್ಚಿಕ ರಾಶಿಯವರಿಗೆ 21 ಕರಿಮಣಿಗಳು, ಧನಸ್ಸು ರಾಶಿಯವರಿಗೆ 32 ಕರಿಮಣಿಗಳು, ಮಕರ ರಾಶಿಯವರಿಗೆ 38 ಕರಿಮಣಿಗಳು, ಕುಂಭ ರಾಶಿಯವರಿಗೆ 38 ಕರಿಮಣಿಗಳು, ಮೀನ ರಾಶಿಯವರಿಗೆ 32 ಕರಿಮಣಿಗಳು ಉತ್ತಮ ಎಂದು ಉಲ್ಲೇಖಿಸಲಾಗಿದೆ.ಮುತ್ತು ಹಾಗೂ ಪಗಡ ಸೂರ್ಯನಿಂದ ಬರುವ ಕಿರಣಗಳನ್ನು,ಕೆಂಪು ಅಂದರೆ ಕುಜನ ಪ್ರಭಾವ ಬಿಳಿ ಎಂದರೆ ಚಂದ್ರನ ಪ್ರಭಾವದಿಂದ ಮಹಿಳೆಯರ ಎಲ್ಲಾ ನಾಡಿಗಳನ್ನು ಉತ್ತೇಜನಿಸುತ್ತಿತ್ತು. ಪಗಡ ಹಾಗೂ ಮುತ್ತನ್ನು ಧರಿಸಿಕೊಂಡ ಮಹಿಳೆಗೆ ಅತ್ಯಂತ ಶುಭ ಫಲಿತಾಂಶಗಳು ಸಿಗಲಿವೆ. ಮಂಗಳಸೂತ್ರದಲ್ಲಿ ಮತ್ತೊಂದು ಅತ್ಯಂತ ಶಕ್ತಿಶಾಲಿ ವಸ್ತುವಾಗಿರುವುದು ಹವಳ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಹವಳ ಕುಜನ ಗ್ರಹವನ್ನು ಸೂಚಿಸುತ್ತದೆ. ಶರೀರದಲ್ಲಿ ಶಕ್ತಿಯನ್ನು ವೃದ್ಧಿಸುವವನೆ ಕುಜ. ಸ್ತ್ರೀಯರಿಗೆ ಪ್ರತಿ ಮಾಸದ ಋತುಚಕ್ರದ ಸಮಯದಲ್ಲಿ ಸಮಸ್ಯೆ ಉಂಟಾಗಬಾರದು ಹಾಗೂ ಉತ್ತಮ ಶಕ್ತಿ ಸಂಚಲನವಾಗಬೇಕು ಎಂಬ ಕಾರಣಗಳಿಂದ ಮಂಗಳಸೂತ್ರದಲ್ಲಿ ಹವಳವನ್ನು ಹಾಕಲಾಗುತ್ತದೆ. ಪತಿ-ಪತ್ನಿಯ ನಡುವೆ ಉತ್ತಮ ಬಾಂಧವ್ಯಕ್ಕಾಗಿಯೂ ಕೂಡ ಮಂಗಳಸೂತ್ರದಲ್ಲಿ ಹವಳವನ್ನು ಹಾಕಲಾಗುತ್ತದೆ.