ದೇಹದ ಯಾವ ಭಾಗಕ್ಕೆ ಹಲ್ಲಿ ಬಿದ್ದರೆ ಶುಭ ಎಂದು ನಿಮಗೆ ತಿಳಿದಿದೆಯೆ

ಜ್ಯೋತಿಷ್ಯ

ದೇಹದ ಯಾವ ಭಾಗಕ್ಕೆ ಹಲ್ಲಿ ಬಿದ್ದರೆ ಶುಭ ಎಂದು ನಿಮಗೆ ತಿಳಿದಿದೆಯೆ

ನಮ್ಮ ಜೀವನದಲ್ಲಿ ಕಷ್ಟಗಳು ಬರುವ ಮುನ್ನ ಭಗವಂತನು ಕೆಲವೊಂದು ಮುನ್ಸೂಚನೆಯನ್ನು ನೀಡಿರುತ್ತಾನೆ ಆದರೆ ಸಾಮಾನ್ಯ ಮನುಷ್ಯರಾದ ನಮಗೆ ಅದನ್ನು ತಿಳಿದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಕೆಲವೊಂದು ಕಷ್ಟಕರವಾದ ಸಮಯದಲ್ಲಿ ಹಲ್ಲಿಗಳು ಕೆಲವೊಂದು ಶುಭಸೂಚನೆಯನ್ನು ಹಾಗು ಕೆಲವೊಂದು ಸಲ ಅಶುಭ ಸೂಚನೆಯನ್ನು ನೀಡುತ್ತದೆ.

ನಮ್ಮ ಭವಿಷ್ಯದ ಘಟನೆಗೆ ಹಲ್ಲಿಗಳು ಸಂಕೇತವನ್ನು ನೀಡುತ್ತವೆ. ಹಲ್ಲಿಗಳು ಯಾವ ರೀತಿಯಲ್ಲಿ ಮುನ್ಸೂಚನೆಯನ್ನು ಮನುಷ್ಯನಿಗೆ ನೀಡುತ್ತವೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ

ಜೋಡಿ ಹಲ್ಲಿಯು ಸಂಭೋಗದಲ್ಲಿರುವುದನ್ನು ವ್ಯಕ್ತಿ ನೋಡಿದರೆ ಶೀಘ್ರದಲ್ಲಿ ತಮ್ಮ ಹಳೆಯ ಸ್ನೇಹಿತನನ್ನು ಭೇಟಿಯಾಗಲಿದ್ದಾರೆ ಎಂದರ್ಥ. ಎರಡು ಹಳ್ಳಿಗಳು ಜಗಳ ಆಡುತ್ತಿರುವುದನ್ನು ನೋಡಿದರೆ ನಿಮಗೆ ತುಂಬಾ ಆತ್ಮೀಯರಾದ ವ್ಯಕ್ತಿಯೊಡನೆ ಕಲಹವುಂಟಾಗುತ್ತದೆ ಅಥವಾ ನಿಮ್ಮ ಪ್ರೇಯಸಿಯೊಂದಿಗೆ ಜಗಳವಾಡುವ ಮುನ್ಸೂಚನೆಯನ್ನು ನೀಡುತ್ತದೆ.

ಊಟ ಮಾಡುವಾಗ ನೀವು ಹಲ್ಲಿಯನ್ನು ನೋಡಿದರೆ ಅದು ಕೂಡ ಶುಭ ಸೂಚನೆಯಾಗಿದೆ. ಒಂದು ವೇಳೆ ನೀವು ಹೊಸ ಮನೆಯನ್ನು ಖರೀದಿ ಮಾಡಿ ಹೊಸಮನೆಗೆ ಕಾಲಿಡುವಾಗ ಅಲ್ಲಿ ಸತ್ತಿರುವ ಹಲ್ಲಿಯನ್ನು ನೋಡಿದರೆ ನಿಮಗೆ ಇದು ಅಶುಭವನ್ನು ಸೂಚಿಸುತ್ತದೆ. ಎಡ ಭುಜದ ಮೇಲೆ ಹಲ್ಲಿ ಬಿದ್ದರೆ ಸಮಾಜದಲ್ಲಿ ಅಪಾರವಾದ ಗೌರವ ಸಿಗುತ್ತದೆ. ಆದರೆ ಅದೇ ಹಲ್ಲಿಯು ಬಲ ಬುಜದ ಮೇಲೆ ಬಿದ್ದರೆ ನೀವು ಆರ್ಥಿಕ ಸಂಕಷ್ಟವನ್ನು ಎದುರಿಸುಬೇಕಾಗುತ್ತದೆ ಎಂದರ್ಥ. ಮೇಲಿನಿಂದ ಹಲ್ಲಿಯು ನಿಮ್ಮ ಹೊಟ್ಟೆ ಮೇಲೆ ಬಿದ್ದರೆ ಮುಂದಿನ ದಿನಗಳಲ್ಲಿ ನೀವು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ತಿಳಿಸುತ್ತದೆ. ಇದೇ ಹಲ್ಲಿಯು ಎದೆಯ ಭಾಗದ ಮೇಲೆ ಬಿದ್ದರೆ ರುಚಿಯಾದ ಊಟ ದೊರೆಯುತ್ತದೆ ಎಂಬುದನ್ನು ತಿಳಿಸುತ್ತದೆ. ಹಲ್ಲಿ ನಮ್ಮಮೋಣಕಾಲನ್ನು ಮುಟ್ಟಿ ಕೆಳಗೆ ಬಿದ್ದರೆ ಮುಂಬರುವ ದಿನಗಳು ನೀವು ಸಂತೋಷದಿಂದಿರುವುದು ಎಂದರ್ಥ. ಹಲ್ಲಿಯು ಬಲ ಕೆನ್ನೆ ಮೇಲೆ ಬಿದ್ದರೆ ಅತಿ ಶೀಘ್ರದಲ್ಲಿ ವೈಭವಿ ತವಾದ ಜೀವನ ದೊರೆಯಲಿದೆ ಎಂದರ್ಥ. ಆದರೆ ಅದೇ ಹಲ್ಲಿ ಎಡ ಕೆನ್ನೆ ಮೇಲೆ ಬಿದ್ದರೆ ಮುಂದಿನ ದಿನಗಳಲ್ಲಿ ಅಪಗಾಥವಾಗುತ್ತದೆ ಎಂಬುದನ್ನು ತಿಳಿಸುತ್ತದೆ. ಹಲ್ಲಿ ಯಾವುದೇ ಮಹಿಳೆಯ ದೇಹದ ಎಡಬಾಗದ ಮೇಲೆ ಬಿದ್ದರೆ ಅವರಿಗೆ ತುಂಬಾ ಧನಲಾಭವಾಗುತ್ತದೆ. ಮಹಿಳೆಯ ಬಲಭಾಗದ ಮೇಲೆ ಹಲ್ಲಿ ಬಿದ್ದರೆ ಕುಟುಂಬದಲ್ಲಿ ಹಣಕಾಸಿನ ತೊಂದರೆ ಎದುರಿಸಬೇಕಾಗುತ್ತದೆ ಎಂಬರ್ಥವನ್ನು ಸೂಚಿಸುತ್ತದೆ.

Leave a Reply

Your email address will not be published. Required fields are marked *