ಸಾಮಾನ್ಯವಾಗಿ ಪ್ರತಿಯೊಬ್ಬರೂ ಮನೆಯಲ್ಲಿ ಪ್ರತಿನಿತ್ಯವೂ ದೇವರಿಗೆ ಪೂಜೆಯನ್ನು ಮಾಡುತ್ತಾರೆ, ಅದರಲ್ಲೂ ಹಬ್ಬದ ದಿನದಂದು ವಿಶೇಷವಾಗಿ ಪೂಜೆಯನ್ನು ಮಾಡಲಾಗುತ್ತದೆ. ಶ್ರಾವಣ ಮಾಸದಲ್ಲಿ ಹೆಣ್ಣುಮಕ್ಕಳು ಮಂಗಳಗೌರಿ ಪೂಜೆಯನ್ನು ಮಂಗಳವಾರದ ದಿನ ಹಾಗೂ ಶುಕ್ರವಾರ ಮಾಡುತ್ತಾರೆ. ಹಿಂದೂ ಧರ್ಮದಲ್ಲಿ ಪ್ರತಿನಿತ್ಯವೂ ದೇವರಿಗೆ ಭಕ್ತಿಯಿಂದ ದೀಪವನ್ನು ಹಚ್ಚಿ ಪೂಜೆಯನ್ನು ಮಾಡಲಾಗುತ್ತದೆ.ಮೊದಲಿಗೆ ಮುಂಜಾನೆ ಎದ್ದ ತಕ್ಷಣ ಸ್ನಾನವನ್ನು ಮಾಡಿ ಮೊದಲು ದೀಪವನ್ನು ಹಚ್ಚಿ ನಂತರ ಹಳೆಯ ಹೂವನ್ನು ತೆಗೆದು ಹೊಸದಾದ ಹೂವನ್ನು ಮುಡುಸಿ ಪೂಜೆಯನ್ನು ಮಾಡಬೇಕು. ಪ್ರತಿನಿತ್ಯ ಮನೆಯಲ್ಲಿ ದೀಪಾರಾಧನೆಯನ್ನು ಮಾಡುವುದರಿಂದ ನಕಾರಾತ್ಮಕ ಶಕ್ತಿಯು ದೂರವಾಗುತ್ತದೆ ಹಾಗೂ ದಾರಿದ್ರತನ ದೂರವಾಗುತ್ತದೆ.
ಒಂದು ತಟ್ಟೆಯಲ್ಲಿ ಅರಿಶಿಣದ ಅಕ್ಕಿಕಾಳನ್ನು ತುಂಬಾ ಹಾಕಿ ನಂತರ ಎರಡು ಬೆಲ್ಲದ ಅಚ್ಚನ್ನು ತೆಗೆದುಕೊಂಡು ಅಕ್ಕಿಕಾಳಿನ ಮೇಲೆ ಇಡಬೇಕು. ಎರಡು ಸಣ್ಣದಾದ ಮಣ್ಣಿನ ದೀಪವನ್ನು ತೆಗೆದುಕೊಂಡು ಬೆಲ್ಲದಚ್ಚಿನ ಮೇಲೆ ಇಡಬೇಕು. 5 ಬತ್ತಿಯನ್ನು ತೆಗೆದುಕೊಂಡು ತುಪ್ಪದಿಂದ ನೆನಸಿ ಮಣ್ಣಿನ ದೀಪದ ಒಳಗೆ ತುಪ್ಪವನ್ನು ಹಾಕಿ ದೀಪವನ್ನು ಹಚ್ಚಬೇಕು. ಈ ರೀತಿಯಾಗಿ ದೀಪಾರಾಧನೆಯನ್ನು ಮಾಡುವುದರಿಂದ ಮನೆಯಲ್ಲಿ ಶಾಂತಿ ದೊರಕುತ್ತದೆ ಹಾಗೂ ಮನಸ್ಸಿನಲ್ಲಿ ಯಾವುದೇ ರೀತಿಯ ಗೊಂದಲಗಳಿದ್ದರೂ ನಿವಾರಣೆಯಾಗುತ್ತದೆ. ಈ ರೀತಿಯಾಗಿ ದೀಪವನ್ನು ಮುಂಜಾನೆ ಹಾಗೂ ಸಾಯಂಕಾಲ ಹಚ್ಚುವುದು ತುಂಬಾ ಒಳ್ಳೆಯದು.ಈ ದೀಪವನ್ನು ಶುಕ್ರವಾರದ ದಿನದಂದು ಹಚ್ಚುವುದರಿಂದ ಲಕ್ಷ್ಮೀದೇವಿ ಅನುಗ್ರಹ ಪ್ರಾಪ್ತಿಯಾಗುತ್ತದೆ ಹಾಗೂ ಮನೆಯಲ್ಲಿ ಸುಖ, ಶಾಂತಿ,ನೆಮ್ಮದಿ ನೆಲೆಸಿ ಸುಖಕರವಾದ ಜೀವನ ನಡೆಸಲು ಸಹಾಯಕವಾಗುತ್ತದೆ.