ಆಷಾಢ ಮಾಸದಲ್ಲಿ ಏನು ಮಾಡಬೇಕು ಹಾಗೂ ಏನನ್ನು ಮಾಡಬಾರದು ಎಂಬುದು ತಿಳಿದಿದೆಯೇ ನಿಮಗೆ ?

ಜ್ಯೋತಿಷ್ಯ

ಆಷಾಢ ಮಾಸವೆಂದರೆ ಕೆಲವರ ಮನಸ್ಸಿನಲ್ಲಿ ಅಶುಭ ಮಾಸ ಎಂದು ಬಿಂಬಿತವಾಗಿರುತ್ತದೆ. ಆದರೆ ಆಷಾಢ ಮಾಸ ಅಶುಭವೆಂದು ಯಾವುದೇ ಶಾಸ್ತ್ರಗಳಲ್ಲಿ ಉಲ್ಲೇಖವಾಗಿಲ್ಲ. ಹಾಗೆ ನೋಡಿದರೆ ಆಷಾಢ ಮಾಸವು ತುಂಬಾ ಪವಿತ್ರತೆಯನ್ನು ಹೊಂದಿರುವ ಮಾಸವಾಗಿದೆ. ಆಷಾಢ ಮಾಸದಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯದೆ ಇದ್ದರೂ ಈ ಮಾಸದಲ್ಲಿ ಮಾಡುವ ಪೂಜೆಗಳಿಂದ ವಿಶೇಷವಾದ ಫಲಗಳು ಲಭಿಸುತ್ತದೆ. ಹಾಗಾದರೆ ಆಷಾಢ ಮಾಸದಲ್ಲಿ ಯಾವ ತಪ್ಪುಗಳನ್ನು ಮಾಡಬಾರದು ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.ಆಷಾಢ ಮಾಸದಲ್ಲಿ ವಿಪರೀತವಾದ ಗಾಳಿ ಹಾಗೂ ಮಳೆ ಬರುವುದರಿಂದ ಶೀತವಾಗುವ ಪದಾರ್ಥಗಳನ್ನು ನಿಯಮಿತವಾಗಿ ಸೇವಿಸಬೇಕು. ಆಷಾಢ ಮಾಸದಲ್ಲಿ ಎಲ್ಲರಿಗೂ ತಿಳಿದಿರುವ ಹಾಗೆ ನಾಮಕರಣ, ಮದುವೆ, ಮುಂಜಿ, ನಿಶ್ಚಿತಾರ್ಥದ ಮಾತುಕತೆ ಹೀಗೆ ಯಾವುದೇ ಶುಭಕಾರ್ಯವನ್ನು ಮಾಡುವುದಿಲ್ಲ. ಆಷಾಢ ಮಾಸದಲ್ಲಿ ದೇವರಿಗೆ ವ್ರತವನ್ನು, ಪೂಜೆಯನ್ನು ಭಕ್ತಿಯಿಂದ ಮಾಡುವುದರಿಂದ ಭಗವಂತನನ್ನು ಬಹಳ ಬೇಗ ಒಲಿಸಿಕೊಳ್ಳಬಹುದು. ಆಷಾಢ ಮಾಸವು ದೇವ ಪಾರಾಯಣವನ್ನು ಮಾಡಲು ಸೂಕ್ತವಾದ ಸಮಯವಾಗಿದೆ.

ಆಷಾಢ ಮಾಸದಲ್ಲಿ ಹೊಸದಾಗಿ ಮದುವೆಯಾಗಿರುವ ನವದಂಪತಿಗಳು ಒಟ್ಟಿಗೆ ಸೇರಬಾರದು ಎಂದು ಕೂಡ ಹೇಳಲಾಗುತ್ತದೆ, ಏಕೆಂದರೆ ಒಂದು ವೇಳೆ ಈ ಸಮಯದಲ್ಲಿ ಹೆಣ್ಣು ಮಗು ಗರ್ಭವತಿಯಾದರೆ ಆ ಮಗುವಿನ ಮೇಲೆ ಈ ವಾತಾವರಣದ ಪ್ರಭಾವವು ಬೀಳುವುದರಿಂದ ಮಗುವಿನ ಆರೋಗ್ಯದ ಮೇಲೆ ಏರುಪೇರು ಆಗುತ್ತದೆ. ಆದ್ದರಿಂದ ಆಷಾಢ ಮಾಸದಲ್ಲಿ ಹೆಣ್ಣುಮಕ್ಕಳನ್ನು ತವರಿಗೆ ಕಳಿಸುವ ಪದ್ಧತಿಯು ರೂಢಿಯಲ್ಲಿದೆ.ಆಷಾಢ ಮಾಸದಲ್ಲಿ ಶಿವನ ವ್ರತವನ್ನು ಮಾಡುವುದು , ಲಕ್ಷ್ಮೀದೇವಿಯ ವ್ರತವನ್ನು ಸಹ ಮಾಡಬಹುದು. ಆಶಾಡ ಮಾಸದಲ್ಲಿ ದೀಪದ ಪೂಜೆಯನ್ನು ಮಾಡುವುದು ಬಹಳ ಶ್ರೇಷ್ಠಕರವಾಗಿರುತ್ತದೆ. ಆಷಾಢ ಮಾಸದಲ್ಲಿ ದಾನ ಮಾಡುವುದರಿಂದ ತುಂಬಾ ವಿಶೇಷವಾದ ಫಲಗಳು ಲಭಿಸುತ್ತವೆ. ಆಷಾಢ ಮಾಸದಲ್ಲಿ ಉಪ್ಪು, ನಲ್ಲಿಕಾಯಿ, ಚಪ್ಪಲಿ, ಛತ್ರಿ ಈ ರೀತಿ ವಸ್ತುಗಳನ್ನು ದಾನ ಮಾಡುವುದು ತುಂಬ ಶ್ರೇಷ್ಠವಾಗಿರುತ್ತದೆ.

ಆಷಾಢ ಮಾಸದಲ್ಲಿ ಹೆಣ್ಣು ದೇವರಿಗೆ ತುಂಬಾ ಪ್ರಾಮುಖ್ಯತೆ ಇರುವುದರಿಂದ ಶುಕ್ರವಾರದ ದಿನದಂದು ಅಮ್ಮನವರ ದರ್ಶನವನ್ನು ಮಾಡುವುದು ತುಂಬಾ ಒಳ್ಳೆಯದು.

Leave a Reply

Your email address will not be published. Required fields are marked *