ಬಹಳಷ್ಟು ಸಂಕಷ್ಟಗಳ ನಿವಾರಣೆ ಮಾಡುವ ತೆಂಗಿನಕಾಯಿಯ ಬಗ್ಗೆ ತಿಳಿದಿದೆಯೇ ನಿಮಗೆ ? ಸಾಮಾನ್ಯವಾಗಿ ಧಾರ್ಮಿಕ ಕಾರ್ಯಗಳನ್ನು ನಡೆಸಬೇಕಾದರೆ ಮುಖ್ಯವಾಗಿ ಬೇಕಾಗಿರುವ ವಸ್ತುಗಳು ಅರಿಶಿನ, ಕುಂಕುಮ ಹಾಗೂ ತೆಂಗಿನಕಾಯಿ. ಯಾವುದೇ ಧಾರ್ಮಿಕ ಕಾರ್ಯವಾಗಲಿ ಅಥವಾ ಪೂಜೆಯಾಗಲಿ ನಾವು ಭಗವಂತನಲ್ಲಿ ಸಮರ್ಪಿಸಿ ಕೊಳ್ಳಬೇಕಾದರೆ ಈ ವಸ್ತುಗಳು ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ತೆಂಗಿನಕಾಯಿ ಬರೀ ಪೂಜೆಗೆ ಮಾತ್ರವಲ್ಲದೆ ನಕಾರಾತ್ಮಕ ಶಕ್ತಿಯನ್ನು ಹೊರಹಾಕುವ ಶಕ್ತಿಯನ್ನು ಹೊಂದಿದೆ. ಜೀವನದಲ್ಲಿ ಇರುವಂತಹ ವಿವಿಧ ರೀತಿಯ ಸಂಕಷ್ಟಗಳನ್ನು ತೆಂಗಿನಕಾಯಿಯ ಮುಖಾಂತರ ಬಗೆಹರಿಸಿಕೊಳ್ಳಬಹುದು. ಹಾಗಾದರೆ ತೆಂಗಿನಕಾಯಿ ಇಂದ ಯಾವ ರೀತಿಯ ಸಂಕಷ್ಟಗಳನ್ನು ದೂರ ಮಾಡಿಕೊಳ್ಳಬಹುದು ಎಂಬುದರ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ತೆಂಗಿನಕಾಯಿ ಮೇಲೆ ಕುಂಕುಮದಿಂದ ಸ್ವಸ್ತಿಕ್ ಚಿಹ್ನೆಯನ್ನು ಬರೆದು ಆಂಜನೇಯ ಸ್ವಾಮಿಯ ದೇವಸ್ಥಾನದಲ್ಲಿ ಇಟ್ಟು ಬಂದರೆ ಬಹಳ ಬೇಗ ಫಲಗಳು ಪ್ರಾಪ್ತಿಯಾಗುತ್ತದೆ. ಒಂದು ವೇಳೆ ಜಾತಕದಲ್ಲಿ ಶನಿ, ರಾಹು ಹಾಗೂ ಕೇತು ದೋಷಗಳು ನಿಮ್ಮನ್ನು ಕಾಡುತ್ತಿದ್ದರೆ ಒಣಗಿದ ತೆಂಗಿನಕಾಯಿಯನ್ನು ತೆಗೆದುಕೊಂಡು ಬಾಯಿಯ ಆಕಾರದಲ್ಲಿ ಕಟ್ ಮಾಡಿ, ಅದರ ಒಳಗೆ ಒಣಗಿದ ಐದು ಬಗೆಯ ಹಣ್ಣುಗಳನ್ನು ಹಾಗೂ 5 ಸಕ್ಕರೆ ಅಚ್ಚನ್ನು ಹಾಕಿ ತೆಂಗಿನಕಾಯಿಯ ಬಾಯನ್ನು ಮುಚ್ಚಿಟ್ಟು ಅಶ್ವತ್ ಕಟ್ಟೆಗೆ ಹೋಗಿ ಅಲ್ಲಿ ಮಣ್ಣನ್ನು ಅಗೆದು ಆ ಜಾಗದಲ್ಲಿ ತೆಂಗಿನಕಾಯಿಯನ್ನು ಮುಚ್ಚಿಟ್ಟು ಬನ್ನಿ. ತೆಂಗಿನಕಾಯಿಯನ್ನು ಮುಚ್ಚಿಟ್ಟ ನಂತರ ಹಿಂದೆ ತಿರುಗಿ ನೋಡದೆ ಅಶ್ವಥ್ ಕಟ್ಟೆಯಿಂದ ಮನೆಗೆ ಬನ್ನಿ.
ಶುಕ್ರವಾರವೂ ಮಹಾಲಕ್ಷ್ಮಿಯ ದಿನವಾಗಿದ್ದು, ಒಂದು ವೇಳೆ ಕುಟುಂಬದಲ್ಲಿ ಆರ್ಥಿಕ ಸಮಸ್ಯೆಗಳು ಕಾಡುತ್ತಿದ್ದರೆ ಶುಕ್ರವಾರದ ದಿನ ಲಕ್ಷ್ಮಿಯ ದೇವಸ್ಥಾನಕ್ಕೆ ಹೋಗಿ ಜುಟ್ಟು ಇರುವ ತೆಂಗಿನಕಾಯಿಯನ್ನು ತೆಗೆದುಕೊಂಡು ಗುಲಾಬಿ ಕಮಲದ ಹೂವು, ಬಿಳಿಬಟ್ಟೆ ಹಾಗೂ ಮೊಸರನ್ನು ನೈವೇದ್ಯವಾಗಿ ಸಮರ್ಪಿಸಿ ದೇವರಿಗೆ ಕರ್ಪೂರದ ಆರತಿಯನ್ನು ಮಾಡಬೇಕು. ಈ ರೀತಿ ಶುಕ್ರವಾರದ ದಿನದಂದು ಮಾಡುವುದರಿಂದ ಆರ್ಥಿಕ ಸಮಸ್ಯೆಗಳು ದೂರವಾಗುತ್ತದೆ.
ಯಾವುದೇ ಕೆಲಸವನ್ನು ಮಾಡಬೇಕಾದರೆ ಶ್ರದ್ಧೆ, ಭಕ್ತಿ ಮುಖ್ಯವಾಗಿರುತ್ತದೆ. ಆದ್ದರಿಂದ ಯಾವುದೇ ಪೂಜೆಯನ್ನು ಮಾಡಬೇಕಾದರೂ ನಂಬಿಕೆಯಿಂದ, ಶ್ರದ್ಧೆ , ಭಕ್ತಿಯಿಂದ ಪೂಜೆ ಮಾಡಿದರೆ ಜೀವನದಲ್ಲಿ ಅಡೆತಡೆಗಳು ದೂರವಾಗಿ ಯಶಸ್ಸನ್ನು ಕಾಣಬಹುದು.