ಅಂಗೈಯಲ್ಲಿರುವ ಚಿಹ್ನೆಗಳು ಏನನ್ನು ಸೂಚಿಸುತ್ತದೆ ಎಂಬುದರ ಬಗ್ಗೆ ಅರಿವಿದೆಯೇ ನಿಮಗೆ ?

ಜ್ಯೋತಿಷ್ಯ

ಒಮ್ಮೆ ಸೂಕ್ಷ್ಮವಾಗಿ ಎರಡು ಅಂಗೈಯನ್ನು ನೋಡಿದರೆ ನಿಮಗೆ ನಿಮ್ಮ ಅಂಗೈಯಲ್ಲಿರುವ ರೇಖೆಗಳು ಕಾಣುತ್ತದೆ. ದೊಡ್ಡ ದೊಡ್ಡ ರೇಖೆಗಳ ಜೊತೆ ಸಣ್ಣದಾದ ರೇಖೆಗಳು ಸಹ ನೋಡಲು ಸಿಗುತ್ತವೆ. ಅಂಗೈಯಲ್ಲಿರುವ ಕೆಲವು ಚಿಹ್ನೆಗಳು ನಮಗೆ ಶುಭವಾಗಿರುತ್ತದೆ ಆದರೆ ಕೆಲವು ಚಿಹ್ನೆಗಳು ಅಶುಭವಾಗಿರುತ್ತದೆ. ಹಾಗಾದರೆ ಅಂಗೈಯಲ್ಲಿರುವ ಚಿಹ್ನೆಗಳು ಯಾವ ರೀತಿಯ ಶುಭ ಸೂಚನೆಯನ್ನು ಕೊಡುತ್ತದೆ ಎಂದು ತಿಳಿದುಕೊಳ್ಳೋಣ ಬನ್ನಿ.

ಒಂದು ವೇಳೆ ಅಂಗೈಯಲ್ಲಿ ಯಾವುದಾದರೂ ಒಂದು ಮೂಲೆಯಲ್ಲಿ ಶಂಕಾಕೃತಿ ಚಿಹ್ನೆ ಇದ್ದರೆ ಅಂಥವರ ಭಾಗ್ಯ ತುಂಬಾ ಶುಭವಾಗಿರುತ್ತದೆ. ಶಂಕವು ತಾಯಿ ಲಕ್ಷ್ಮೀದೇವಿ ಹಾಗೂ ವಿಷ್ಣುವಿಗೆ ತುಂಬಾ ಪ್ರಿಯವಾದದ್ದು. ಆದ್ದರಿಂದ ಯಾರ ಅಂಗೈಯಲ್ಲಿ ಶಂಕದ ಚಿಹ್ನೆ ಇರುತ್ತದೆಯೋ ಅವರ ಜೀವನ ಧನ ಸಂಪತ್ತಿನಿಂದ ಹಾಗೂ ಸುಖ-ಶಾಂತಿ ಮತ್ತು ನೆಮ್ಮದಿಯಿಂದ ಕೂಡಿರುತ್ತದೆ.ಒಂದು ವೇಳೆ ಅಂಗೈಯಲ್ಲಿ ಮೀನಿನ ಆಕೃತಿ ಚಿಹ್ನೆ ಕಂಡು ಬಂದರೆ ಸಕಾರಾತ್ಮಕ ಶುಭಫಲಗಳು ಲಭ್ಯವಾಗುತ್ತದೆ. ಇಂತಹ ವ್ಯಕ್ತಿಗಳು ನೋಡಲು ಸುಂದರವಾಗಿರುತ್ತಾರೆ , ಆಕರ್ಷಿತರಾಗಿರುತ್ತಾರೆ ಮತ್ತು ಧಾರ್ಮಿಕ ಜ್ಞಾನವನ್ನು ಉಳ್ಳವರಾಗಿರುತ್ತಾರೆ. ಒಂದು ವೇಳೆ ಅಂಗೈಯಲ್ಲಿ ತ್ರಿಶೂಲದ ಆಕೃತಿ ಕಂಡುಬಂದರೆ ಅದು ಕೂಡ ಶುಭದಾಯಕವಾಗಿರುತ್ತದೆ. ತ್ರಿಶೂಲವು ಭಗವಂತನಾದ ಶಿವನ ಅಸ್ತ್ರವಾಗಿದೆ. ಇಂತಹ ವ್ಯಕ್ತಿಗಳಿಗೆ ಎಂದಿಗೂ ಹಣದ ಸಮಸ್ಯೆ ಎದುರಾಗುವುದಿಲ್ಲ. ಇಂಥ ವ್ಯಕ್ತಿಗಳು ತಮ್ಮ ಬುದ್ಧಿಶಕ್ತಿಯಿಂದ ಬಹಳಷ್ಟು ಹಣವನ್ನು ಗಳಿಕೆ ಮಾಡುತ್ತಾರೆ.

ಒಂದು ವೇಳೆ ಯಾರ ಎರಡು ಅಂಗೈಯಲ್ಲಿ ಎಕ್ಸ್ ಆಕಾರದ ಚಿಹ್ನೆ ಕಂಡು ಬಂದರೆ ತುಂಬಾ ಶುಭ ಪರಿಣಾಮಗಳು ನೋಡಲು ಸಿಗುತ್ತದೆ. ಇಂತಹ ವ್ಯಕ್ತಿಗಳು ತುಂಬಾ ಸಾಹಸಿಗಳಾಗಿರುತ್ತಾರೆ. ಇಂತಹ ವ್ಯಕ್ತಿಗಳು ಯಾವ ರೀತಿ ಕೆಲಸ ಮಾಡುತ್ತಾರೆ ಎಂದರೆ ಅದು ಜನರಲ್ಲಿ ಅಳಿಸು ಹೋಗದೆ ಉಳಿಯುವಂತಹ ಕೆಲಸವನ್ನು ಮಾಡುತ್ತಾರೆ.

ಇಂತಹ ವ್ಯಕ್ತಿಗಳು ಸತ್ತಮೇಲೂ ಅಮರರಾಗಿ ಇರುತ್ತಾರೆ.ಯಾರಿಗಾದರೂ ಒಂದು ವೇಳೆ ಹೃದಯ ರೇಖೆ ಮತ್ತು ಮಸ್ತಕ ರೇಖೆಯ ಮದ್ಯೆ ಕ್ರಾಸ್ ಚಿಹ್ನೆ ಇದ್ದರೆ ಇಂತಹ ವ್ಯಕ್ತಿಗಳು ಎಂದೆಂದಿಗೂ ತಮ್ಮ ಶಕ್ತಿಯಾನುಸಾರ ಇನ್ನೊಬ್ಬರಿಗೆ ಸಹಾಯ ಮಾಡುತ್ತಿರುತ್ತಾರೆ. ಒಂದು ವೇಳೆ ಹೃದಯ ರೇಖೆ ಮತ್ತು ಆಯುಷ್ಯ ರೇಖೆ ಸನಿಹದಲ್ಲಿ ಎಕ್ಸ್ ಚಿಹ್ನೆ ಇದ್ದರೆ ಪರೋಪಕಾರಿ ಗುಣದಿಂದ ಕೂಡಿರುತ್ತಾರೆ. ಇಂತ ವ್ಯಕ್ತಿಗಳಿಗೆ ಮುಂದೆ ಆಗುವ ಕೆಲವು ಘಟನೆಗಳ ಬಗ್ಗೆ ಅರಿವಿರುತ್ತದೆ ಹಾಗೂ ಅವರ ಸುತ್ತಮುತ್ತ ಯಾವಾಗಲೂ ಸಕಾರಾತ್ಮಕ ಶಕ್ತಿಯ ಸಂಚಲನ ಆಗುತ್ತಿರುತ್ತದೆ.

Leave a Reply

Your email address will not be published. Required fields are marked *