ದೇವಸ್ಥಾನಕ್ಕೆ ಹೋದಾಗ ಯಾವ ನಿಯಮಗಳನ್ನು ಪಾಲಿಸಬೇಕು ಎಂಬುದು ತಿಳಿದಿದೆಯೇ ನಿಮಗೆ ದೇವರು ಎಂದರೆ ಕಣ್ಣಿಗೆ ಕಾಣದ ಅಮೋಘ ಶಕ್ತಿ. ಕಷ್ಟ ಬಂದಾಗ ಭಕ್ತರ ನೆರವಿಗೆ ಬರುವವನು ಭಗವಂತನು ಮಾತ್ರ. ಹಾಗಾಗಿ ಇಷ್ಟ-ಕಷ್ಟಗಳನ್ನು ಭಕ್ತರು ಬೇಡಿಕೊಳ್ಳುವುದು ಭಗವಂತನ ಎದುರಲ್ಲಿ. ಕಷ್ಟ ಬಂದಾಗ ಪ್ರತಿಯೊಬ್ಬರು ಮೊದಲು ನೆನಪಿಸಿಕೊಳ್ಳುವುದೇ ಭಗವಂತನನ್ನು ಹಾಗೂ ದೇವಸ್ಥಾನವನ್ನು. ಪ್ರತಿಯೊಬ್ಬರು ದೇವಸ್ಥಾನಕ್ಕೆ ಹೋಗುವುದು ಸುಖ-ಶಾಂತಿ-ನೆಮ್ಮದಿ ಬೇಕೆಂದು ಹೋಗುತ್ತಾರೆ. ಆದ್ದರಿಂದ ದೇವಸ್ಥಾನಕ್ಕೆ ಹೋದಾಗ ಪಾಲಿಸಬೇಕಾದ ನಿಯಮಗಳನ್ನು ತಿಳಿದುಕೊಳ್ಳೋಣ ಬನ್ನಿ.
ಶ್ರೀ ಶೃಂಗೇರಿ ಶಾರದಾಂಬ ಜ್ಯೋತಿಷ್ಯ ಪೀಠಂ ದಕ್ಷಿಣ ಭಾರತದ ಪ್ರಖ್ಯಾತ ವಂಶಪಾರಂಪರಿಕಜ್ಯೋತಿಷ್ಯರು ಹಾಗೂ ಪ್ರಧಾನ ಅರ್ಚಕರು ಶ್ರೀ ದ್ವಾರಕಾನಾಥ ಗುರೂಜಿ 99002 02707 ಇವರು ನಿಮ್ಮ ಜಾತಕ, ಹಸ್ತರೇಖೆ, ಫೋಟೋನೋಡಿ , ಅಷ್ಟಮಂಗಳ ಪ್ರಶ್ನೆ, ಅಂಜನಾ ಪ್ರಶ್ನೆ, ಆಧಾರದಿಂದ ಸ್ತ್ರೀ ಪುರುಷಾಪ್ರೇಮ ವಿಚಾರ, ಅತ್ತೆಸೊಸೆ ಜಗಳ, ಗಂಡಹೆಂಡತಿ ಹೊಂದಾಣಿಕೆ ಸಮಸ್ಯೆ, ಇಷ್ಟಪಟ್ಟವರುನಿಮ್ಮಂತೆ ಆಗಲು , ಮದುವೆ ವಿಳಂಬ, ವಿದ್ಯೆ, ಉದ್ಯೋಗ, ಇನ್ನು ಜೀವನದಲ್ಲಿನೀವು ಅನುಭವಿಸುತ್ತಿರುವ ಹತ್ತಾರುಸಮಸ್ಯೆಗಳಿಗೆ ಒಂದು ಫೋನ್ ಕರೆಯ ಮುಖಾಂತರ ಪರಿಹಾರ ತಿಳಿಯಿರಿ.
ನಿಮ್ಮ ಎಲ್ಲಾಸಮಸ್ಯೆ ಗಳು ಸಹ ಗುಪ್ತ ರೀತಿಯಲ್ಲಿ ಇಟ್ಟುಪುರಾತನ ಜ್ಯೋತಿಷ್ಯಶಾಸ್ತ್ರದ ವಿದ್ಯೆ ಮುಖಾಂತರ ಉತ್ತಮ ರೀತಿಯಲ್ಲಿ ಕೇವಲ 48 ಗಂಟೆಗಳಲ್ಲಿ ಪರಿಹಾರ ಮಾಡಿ ಕೊಡಲಾಗುವುದುಮತ್ತು ದೇವತಾವಿಶಿಷ್ಟ ಪೂಜೆಗಳು ಮತ್ತು ದೇವರಆರಾಧನೆ ಹಾಗೂ ಹಲವುರೀತಿಯ ಅನುಷ್ಟಾನಗಳಿಂದ, ಕೇರಳಕೊಳ್ಳೇಗಾಲದ ಚೌಡಿ ಉಪಾಸನಾ ಹಾಗೂ ಪೂಜಾಶಕ್ತಿಯಿಂದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶಾಸ್ತ್ರ ಮತ್ತು ಸಂಪ್ರದಾಯಪ್ರಕಾರ ಮಾಡಿಕೊಡಲಾಗುತ್ತದೆ.. ಈ ಕೂಡಲೇ ಕರೆಮಾಡಿ 99002 02707.
ಯಾರೇ ದೇವಸ್ಥಾನಕ್ಕೆ ಹೋದರು ಮೊದಲಿಗೆ ಕೈಕಾಲುಗಳನ್ನು ತೊಳೆದುಕೊಂಡು ನಂತರ ದೇವರ ದರ್ಶನಕ್ಕೆ ಹೋಗಬೇಕು. ಅದರಲ್ಲಿ ಕಾಲನ್ನು ತೊಳೆಯುವಾಗ ಹಿಮ್ಮಡಿಯನ್ನು ಸರಿಯಾಗಿ ತೊಳೆಯಿರಿ ಏಕೆಂದರೆ ದರಿದ್ರತನ ಎಂಬುದು ಹಿಮ್ಮಡಿಯಲ್ಲಿ ಕುಳಿತಿರುತ್ತದೆ. ಯಾರೇ ದೇವಸ್ಥಾನಕ್ಕೆ ಹೋದರೂ ಬರಿಗಾಲಲ್ಲಿ ದರ್ಶನವನ್ನು ಮಾಡಬೇಕು. ಒಂದು ವೇಳೆ ನೀವು ಶೂ ಧರಿಸಿದ್ದರೆ ಶೂವನ್ನು ತೆಗೆದು ನಂತರ ಸಾಕ್ಸ್ ಅನ್ನು ಕೂಡ ತೆಗೆದು ಕೈಕಾಲುಗಳನ್ನು ತೊಳೆದುಕೊಂಡು ನಂತರ ದೇವರ ದರ್ಶನ ಮಾಡುವುದು ಒಳ್ಳೆಯದು.
ದೇವಸ್ಥಾನಕ್ಕೆ ಹೋಗುವಾಗ ಧೂಮಪಾನ, ಮಧ್ಯಪಾನ ಅಥವಾ ಹಳೆಯದಾದ ಹಣ್ಣುಗಳನ್ನು ತೆಗೆದುಕೊಂಡು ಹೋಗಬೇಡಿ. ಇದರಿಂದ ದರಿದ್ರ ತನವನ್ನು ನಿಮಗೆ ನೀವೇ ತಂದುಕೊಂಡಂತೆ ಆಗುತ್ತದೆ. ದೇವರಿಗೆ ಪೂಜೆಯನ್ನು ಮಾಡಿಸುವುದಾದರೆ ಭಕ್ತಿಯಿಂದ ಪೂಜೆಯನ್ನು ಮಾಡಿಸಬೇಕು ಮತ್ತು ಕರ್ಪೂರವನ್ನು ದೇವರ ಎದುರು ಹಚ್ಚಬೇಕು ಅದನ್ನು ಬಿಟ್ಟು ಬೇರೆ ಕಡೆ ಹಚ್ಚಿದರೆ ಪ್ರಯೋಜನವಿಲ್ಲ.
ಒಬ್ಬ ಭಕ್ತರು ಪೂಜೆ ಮಾಡಿಸಿದ ವಸ್ತುವನ್ನು ತೆಗೆದುಕೊಂಡು ಇನ್ನೊಬ್ಬರು ಪೂಜೆ ಮಾಡಿದರೆ ಪೂಜೆಯ ಫಲ ಲಭಿಸುವುದಿಲ್ಲ. ದೇವರ ಹುಂಡಿಯ ಹಣವನ್ನು ವ್ಯರ್ಥವಾಗಿ ಖರ್ಚು ಮಾಡಿದರೆ ಮುಂದಿನ ದಿನಗಳಲ್ಲಿ ಕಷ್ಟವನ್ನು ಅನುಭವಿಸಬೇಕಾಗುತ್ತದೆ. ಇನ್ನು ಕೆಲವರು ದೇವಸ್ಥಾನಕ್ಕೆ ಹೋದರು ದೇವರ ಮುಂದೆ ಹೋಗುವುದಿಲ್ಲ, ಅಲ್ಲೇ ಹೊರಗಡೆ ನಿಂತು ಕೈ ಮುಗಿದು ಹೊರಟು ಹೋಗುತ್ತಾರೆ. ಇದರಿಂದ ಅವರು ಬೇಡಿಕೊಂಡ ಕೋರಿಕೆಗಳು ಈಡೇರುವುದಿಲ್ಲ.ಯಾವಾಗಲೂ ಭಗವಂತನ ಸಮ್ಮುಖದಲ್ಲಿ ನಿಂತು ಪ್ರದಕ್ಷಿಣೆಯನ್ನು ಹಾಕಬೇಕು ನಂತರ ನೆಲಕ್ಕೆ ತಲೆ ಇಟ್ಟು ನಮಸ್ಕರಿಸಬೇಕು. ಹೀಗೆ ಮಾಡಿದರೆ ಭಗವಂತನ ಪಾದಗಳಿಗೆ ಬಿದ್ದು ನಮಸ್ಕರಿಸಿದಂತೆ ಶ್ರೇಷ್ಠವಾಗಿರುತ್ತದೆ. ಭಗವಂತನ ಮುಂದೆ ಕುರ್ಚಿಯನ್ನು ಹಾಕಿಕೊಂಡು ಕಾಲಿನ ಮೇಲೆ ಕಾಲು ಹಾಕಿಕೊಂಡು ಕೂರಬೇಡಿ ಇದು ಭಗವಂತನಿಗೆ ಅವಮಾನ ಮಾಡಿದಂತಾಗುತ್ತದೆ. ದೇವಸ್ಥಾನಕ್ಕೆ ಹೋದಾಗ ದೇವರ ಮುಂದೆ ಯಾವುದೇ ಕಾರಣಕ್ಕೂ ಬೇರೆಯವರಿಗೆ ಕೆಟ್ಟದ್ದನ್ನು ಬಯಸಬೇಡಿ. ದೇವರಿಗೆ ಕಾಣಿಕೆಯನ್ನು ಹಾಕಬೇಕಾದಾಗ ನಿಮ್ಮ ಶಕ್ತಿಯ ಅನುಸಾರು ಭಕ್ತಿಯಿಂದ ಕಾಣಿಕೆಯನ್ನು ಹಾಕಬೇಕು.
ದೇವಸ್ಥಾನಕ್ಕೆ ಹೋದ ಮೇಲೆ ಯಾವುದೇ ಕಾರಣಕ್ಕೂ ಪ್ರಸಾದವನ್ನು ಸ್ವೀಕರಿಸದೇ ಬರಬೇಡಿ. ದೇವಸ್ಥಾನದಲ್ಲಿ ಯಾವುದೇ ಕಾರಣಕ್ಕೂ ಭಗವಂತನಿಗೆ ಬೆನ್ನು ತೋರಿಸಿ ಕುಳಿತುಕೊಳ್ಳಬೇಡಿ. ದೇವಸ್ಥಾನದಲ್ಲಿ ಯಾವುದೇ ಕಾರಣಕ್ಕೂ ಉಗುರು ಕಡಿಯುವುದು, ಕತ್ತರಿಸುವುದು ಇಂತಹ ಕೆಲಸವನ್ನು ಮಾಡಬೇಡಿ. ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿದ ನಂತರ ಪೂಜೆಮಾಡಿದ ಹಣ್ಣುಗಳನ್ನು ಅನ್ಯರಿಗೆ ಕೊಡಬೇಡಿ ಏಕೆಂದರೆ ಪೂಜೆಮಾಡಿದ ಫಲವು ಅನ್ಯರಿಗೆ ಲಭಿಸುತ್ತದೆ ಮತ್ತು ದೇವಸ್ಥಾನದ ಮುಂದೆ ಭಿಕ್ಷುಕರು ಏನಾದರೂ ಕೇಳಿದರೆ ನಿಮ್ಮ ಶಕ್ತಿಯನುಸಾರ ಹಣವನ್ನು ಕೊಡಿ ಏಕೆಂದರೆ ಕೆಲವೊಂದು ಸಲ ಭಗವಂತನು ಭಿಕ್ಷುಕನ ರೂಪದಲ್ಲಿ ಬಂದು ನಿಮ್ಮನ್ನು ಪರೀಕ್ಷಿಸುತ್ತಾನೆ. ಆದ್ದರಿಂದ ದೇವಸ್ಥಾನಕ್ಕೆ ಹೋದಂತಹ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ.