ಒಂದು ರೂಪಾಯಿಯ ನಾಣ್ಯಕ್ಕೆ ನಿಮ್ಮ ಜೀವನವನ್ನು ಬದಲಾಯಿಸುವ ಶಕ್ತಿ ಇದೆ ಎಂದರೆ ತಪ್ಪಾಗಲಾರದು. ಒಂದು ರೂಪಾಯಿ ನಾಣ್ಯದಿಂದ ಹಲವಾರು ರೀತಿಯ ಲಾಭಗಳಿವೆ ಎಂದು ವಾಸ್ತು ಶಾಸ್ತ್ರವು ಸಹ ಹೇಳುತ್ತದೆ. ಇಷ್ಟೇ ಅಲ್ಲದೆ ನಮ್ಮ ದೇಹದ ಮಾನಸಿಕ ಶಾರೀರಿಕ ಸಮಸ್ಯೆಗಳನ್ನು ಕೂಡ ಬಗೆಹರಿಸುತ್ತದೆ. ಹಾಗಾದರೆ ಒಂದು ರೂಪಾಯಿಯ ನಾಣ್ಯದಿಂದ ಏನೆಲ್ಲ ಲಾಭಗಳು ದೊರೆಯುತ್ತವೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಒಂದು ವೇಳೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಿದ್ದರೆ ಮತ್ತು ದುಷ್ಟಶಕ್ತಿಯ ಕಾಟ ಹೆಚ್ಚಾಗಿ ನಿಮಗೆ ತೊಂದರೆಯನ್ನುಂಟು ಮಾಡುತ್ತಿದ್ದರೆ, ದುಷ್ಟಶಕ್ತಿಗಳ ಕಾಟದಿಂದ ನಿಮ್ಮ ಮನಸ್ಸು ಯಾವಾಗಲೂ ಕೆಟ್ಟ ಅಲೋಚನೆಯನ್ನು ಮಾಡುತ್ತಿದ್ದರೆ ಈ ಸಮಸ್ಯೆಯನ್ನು ಕೇವಲ ಒಂದೇ ಒಂದು ರೂಪಾಯಿ ನಾಣ್ಯದಿಂದ ಬಗೆಹರಿಸಿಕೊಳ್ಳಬಹುದು.
ಒಂದು ವೇಳೆ ನಿಮಗೆ ಯಾರದ್ದಾದರೂ ಕೆಟ್ಟ ದೃಷ್ಟಿ, ನರದೃಷ್ಟಿ ಅಥವಾ ಆರೋಗ್ಯದಲ್ಲಿ ಸಮಸ್ಯೆ ಕಂಡರೆ ಒಂದು ರೂಪಾಯಿ ನಾಣ್ಯವನ್ನು ತೆಗೆದುಕೊಂಡು ಕಾಲಿನಿಂದ ತಲೆಯವರೆಗೆ ಕೆಳಗಿನಿಂದ ಮೇಲಿನ ತನಕ, ಮೇಲಿನಿಂದ ಕೆಳಗಿನ ತನಕ ಏಳು ಬಾರಿ ನಿವಾಳಿಸಿ ದೃಷ್ಟಿಯನ್ನು ತೆಗೆಯಬೇಕು. ಇದಾದ ನಂತರ ಯಾರೂ ಕೂಡ ನೋಡದ ಹಾಗೆ ಒಂದು ರೂಪಾಯಿಯ ನಾಣ್ಯವನ್ನು ಬಚ್ಚಿಡಬೇಕು. ಈ ಚಿಕ್ಕ ಕೆಲಸವನ್ನು ಮಾಡಬೇಕಾದರೆ ಇದನ್ನು ಯಾರೂ ಕೂಡ ನೋಡಬಾರದು.
ಮರುದಿನ ಈ ಒಂದು ರೂಪಾಯಿ ನಾಣ್ಯವನ್ನು ಹರಿಯುವ ನದಿಯಲ್ಲಿ ತೇಲಿ ಬಿಡಬೇಕು ಹಾಗೂ ಇದನ್ನು ಸಹ ಯಾರೂ ಕೂಡ ನೋಡಬಾರದು. ಈ ರೀತಿ ಮಾಡುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ, ದುಷ್ಟಶಕ್ತಿ, ಕೆಟ್ಟದೃಷ್ಟಿ, ನರದೃಷ್ಟಿ ಸಮಸ್ಯೆಗಳು ನಿವಾರಣೆ ಆಗುತ್ತದೆ. ಒಂದು ವೇಳೆ ಹರಿಯುವ ನದಿಯಲ್ಲಿ ನಾಣ್ಯವನ್ನು ಎಸೆಯಲು ಸಾಧ್ಯವಾಗದಿದ್ದರೆ ಯಾರು ಓಡಾಡದೆ ಇರುವ ಜಾಗದಲ್ಲಿ ನಾಣ್ಯವನ್ನು ಎಸೆಯಬೇಕು.