ಮುಂಜಾನೆ ಎದ್ದ ತಕ್ಷಣ ಮನೆಯಲ್ಲಿ ಗೃಹಣಿಯೂ ಮಕ್ಕಳು, ಗಂಡ ಎಂದು ಸಾಕಷ್ಟು ಕೆಲಸಗಳಲ್ಲಿ ನಿರತರಾಗಿರುತ್ತಾರೆ ಮತ್ತು 10 ಗಂಟೆಯ ತನಕ ಬಿಡುವೇ ಇರುವುದಿಲ್ಲ ಎಂದು ಅಂದುಕೊಂಡಿರುತ್ತಾರೆ. ತದ ನಂತರ 10 ಗಂಟೆಯ ಮೇಲೆ ಪ್ರತಿನಿತ್ಯ ಸ್ನಾನ ಮಾಡಿಕೊಂಡು ಭಗವಂತನ ಪೂಜೆಯನ್ನು ಮಾಡುವುದು ಬಹಳ ತಪ್ಪು. ಎರಡನೆಯದಾಗಿ ಮನೆಯಲ್ಲಿ 10 ಗಂಟೆಯ ಮೇಲೆ 12 ಗಂಟೆಯ ಆಸುಪಾಸಿನಲ್ಲಿ ಪೂಜೆಯನ್ನು ಮಾಡಬೇಕಾದರೆ ಕಣ್ಣೀರು ಹಾಕಿದರೆ ದರಿದ್ರ ತನವನ್ನು ತರುತ್ತದೆ. ಇದರಿಂದ ನಿಮ್ಮ ಮನೆಗೆ ದರಿದ್ರತನವನ್ನು ನೀವೇ ತಂದುಕೊಂಡಂತೆ ಆಗುತ್ತದೆ.
ಮನೆಯಲ್ಲಿ ಈ ರೀತಿಯಾಗಿ ಮಾಡುವುದರಿಂದ ಮನೆಯ ಅದೃಷ್ಟವು ನಾಶವಾಗುತ್ತದೆ. ಇದರ ಜೊತೆಗೆ ಮನೆಯಲ್ಲಿರುವ ಧನಾತ್ಮಕ ಶಕ್ತಿಯು ಹೊರಹೋಗುತ್ತದೆ ಹಾಗೂ ನಕಾರಾತ್ಮಕ ಶಕ್ತಿ ಯು ಮನೆಗೆ ಪ್ರವೇಶವನ್ನು ಪಡೆದುಕೊಳ್ಳುತ್ತದೆ. ಇದರಿಂದ ಗಂಡ-ಹೆಂಡತಿ, ಮಕ್ಕಳು ಮನೆಯನ್ನು ದರಿದ್ರ ಕೂಪಕ್ಕೆ ದೂಡಿದಂತಾಗುತ್ತದೆ. ಆದ್ದರಿಂದ ಭಗವಂತನನ್ನು ಪೂಜೆ ಮಾಡಬೇಕಾದರೆ ಶ್ರದ್ಧಾಭಕ್ತಿಯಿಂದ ಪೂಜೆ ಮಾಡಬೇಕು.
ಯಾವಾಗಲೂ ಭಗವಂತನಲ್ಲಿ ಕರ್ಮವನ್ನು ಕಳೆದುಕೊಳ್ಳುವುದಕ್ಕೆ ಬೇಡಿಕೊಳ್ಳಬೇಕು ಅದರ ಹೊರತಾಗಿ ಭಗವಂತನ ಎದುರು ಕಣ್ಣೀರು ಹಾಕಬಾರದು. ಒಂದು ವೇಳೆ ಕಣ್ಣೀರು ಹಾಕಿ ಮನೆಯಲ್ಲಿ ಕಳಶವನ್ನು ಪ್ರತಿಷ್ಠಾಪಿಸಿದ್ದರೆ ಅಲ್ಲಿಂದ ಲಕ್ಷ್ಮೀದೇವಿಯು ಹೊರಟು ಹೋಗುತ್ತಾಳೆ ಮತ್ತು ಇದರಿಂದ ಕುಲದೇವರ ಶಾಪವು ಕೂಡ ತಗಲುತ್ತದೆ. ಆದ್ದರಿಂದ ದೇವರಕೋಣೆಯಲ್ಲಿ ಕುಳಿತುಕೊಂಡು ದೇವರ ಪೂಜೆಯನ್ನು ಮಾಡಬೇಕಾದರೆ ಯಾವುದೇ ಕಾರಣಕ್ಕೂ ಈ ಮೇಲೆ ಹೇಳಿದ ಯಾವ ತಪ್ಪುಗಳನ್ನು ಮಾಡಬೇಡಿ. ಅದೇ ರೀತಿ ಗೋಧೂಳಿ ಸಮಯದಲ್ಲಿ ಪೂಜೆ ಮಾಡಬೇಕಾದರೆ ವಿಷ್ಣುಸಹಸ್ರನಾಮವನ್ನು ಹಾಕಿಕೊಂಡು ಕೇಳುವುದು ತುಂಬಾ ಒಳ್ಳೆಯದು.