ಯಾವ ರೀತಿ ಪೂಜೆಯನ್ನು ಮಾಡಿದರೆ ಲಲಿತಾದೇವಿಯು ಪ್ರಾಪ್ತಿಯಾಗುತ್ತಾರೆ ತಿಳಿದಿದೆಯೇ ನಿಮಗೆ ?

ಜ್ಯೋತಿಷ್ಯ

ಲಲಿತಾ ದೇವಿಯನ್ನು ಒಲಿಸಿಕೊಳ್ಳಬೇಕು ಎಂದರೆ ಪೂಜೆ ಮಾಡಬೇಕಾದರೆ ಈ ಮಂತ್ರವನ್ನು ಪಠಿಸುವುದರಿಂದ ಲಲಿತಾ ದೇವಿಯು ಬಹಳ ಬೇಗ ಒಲಿಯುತ್ತಾಳೆ ಹಾಗೂ ಬಂಗಾರದ ಯೋಗವನ್ನು ಕರುಣಿಸುತ್ತಾಳೆ.ಒಂದು ವೇಳೆ ಯಾವುದೇ ಕೆಲಸ ಮಾಡಿದರೂ ಯಶಸ್ಸು ದೊರೆಯುತ್ತಿಲ್ಲ ಹಾಗೂ ಜೀವನದಲ್ಲಿ ಬರೀ ಅಶುಭ ಫಲವೇ ದೊರೆಯುತ್ತಿದೆ ಎಂಬುವವರು ಈ ಲಲಿತಾ ದೇವಿಯನ್ನು ಪೂಜಿಸುವುದರಿಂದ ಸಕಲ ಸಂಕಷ್ಟಗಳೂ ನಿವಾರಣೆಯಾಗುತ್ತದೆ.

ಸಾಮಾನ್ಯವಾಗಿ ಪ್ರತಿನಿತ್ಯ ಪೂಜೆ ಮಾಡುವ ಹಾಗೆ ದೇವರಕೋಣೆಯಲ್ಲಿ ಲಲಿತ ದೇವಿಯ ವಿಗ್ರಹ ಅಥವಾ ಚಿತ್ರಪಟವನ್ನು ಇಟ್ಟು ಭಕ್ತಿಯಿಂದ ಅದಕ್ಕೆ ಕುಂಕುಮಾರ್ಚನೆ ಅಥವಾ ಪುಷ್ಪಾರ್ಚನೆ ಮಾಡಬೇಕು. ಈ ಪೂಜೆಯನ್ನು ಬಹಳ ಶ್ರದ್ಧೆಯಿಂದ ಭಕ್ತಿಯಿಂದ 41 ದಿನಗಳ ಕಾಲ ಮಡಿಯಿಂದ ಮಾಡುವ ಪೂಜೆಯಾಗಿದೆ.

ಅಮ್ಮನವರಿಗೆ ಪ್ರಿಯವಾದಂತ ದಿನವಾದ ಶುಕ್ರವಾರದಂದು ಈ ಪೂಜೆಯನ್ನು ಶುರುಮಾಡಬೇಕು. ಮದುವೆ ವಯಸ್ಸಿಗೆ ಬಂದ ಹೆಣ್ಣು ಮಕ್ಕಳು ಇನ್ನು ವಿವಾಹವಾಗಿಲ್ಲವೆಂದರೆ ಅಥವಾ ವಿವಾಹದಲ್ಲಿ ವಿಳಂಬವಾಗುತ್ತಿದ್ದರೆ ಲಲಿತಾ ದೇವಿಗೆ ನೈವೇದ್ಯವನ್ನು ಇಟ್ಟು ಪೂಜೆಯನ್ನು ಮಾಡಿ ನಂತರ ನೈವೇದ್ಯವನ್ನು ತಾವು ಸೇವಿಸಿ ಮತ್ತು ಕುಟುಂಬದವರಿಗೂ ಕೊಡಬೇಕು. ಇದರಿಂದ ವಿವಾಹದ ಅಡೆತಡೆಗಳೆಲ್ಲ ದೂರವಾಗಿ ಕಂಕಣಭಾಗ್ಯ ಕೂಡಿ ಬರಲಿದೆ.

ಓಂ ಭದ್ರ ಪ್ರಿಯಾಯೇ ನಮಃ ಈ ಮೇಲಿನ ಮಂತ್ರವನ್ನು 108 ಬಾರಿ 41 ದಿನಗಳ ಕಾಲ ಲಲಿತಾ ದೇವಿಯ ಪೂಜೆಯನ್ನು ಮಾಡುವಾಗ ಜಪಿಸುವುದರಿಂದ ಲಲಿತದೇವಿಯು ನೀವು ಮಾಡಿದ ಪೂಜೆಗೆ ಸಂತುಷ್ಟರಾಗುತ್ತಾರೆ ಹಾಗೂ ಬಂಗಾರದ ಯೋಗವನ್ನು ಕರುಣಿಸುತ್ತಾರೆ ಮತ್ತು ಸಂಕಷ್ಟಗಳನ್ನು ನಿವಾರಿಸುತ್ತಾರೆ.