ಧನಲಕ್ಷ್ಮಿ ಪೂಜೆಯನ್ನು ಮಾಡುವುದರಿಂದ ಸಿಗುವ ಲಾಭಗಳು ಏನೇನು ಎಂದು ತಿಳಿದಿದೆಯೇ ನಿಮಗೆ ?

ಜ್ಯೋತಿಷ್ಯ

ಧನಲಕ್ಷ್ಮಿ ಪೂಜೆಯನ್ನು ಮಾಡುವುದರಿಂದ ಸಿಗುವ ಲಾಭಗಳು ಏನೇನು ಎಂದು ತಿಳಿದಿದೆಯೇ ನಿಮಗೆ..ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಲಕ್ಷ್ಮಿ ದೇವಿಯ ಅನುಗ್ರಹ ಪ್ರಾಪ್ತಿಯಾಗಿ ಧನಸಂಪತ್ತನ್ನು ಗಳಿಸಬೇಕೆಂಬ ಆಸೆ ಇದ್ದೇ ಇರುತ್ತದೆ. ಈ ರೀತಿಯ ಆಸೆ ಇದ್ದವರು ಆಸೆಯನ್ನು ಅಥವಾ ಕನಸನ್ನು ಈಡೇರಿಸಿಕೊಳ್ಳಲು ಲಕ್ಷ್ಮಿಯ ಪೂಜೆಯನ್ನು ಯಾವ ರೀತಿ ಮಾಡಿದರೆ ಲಕ್ಷ್ಮಿ ಕೃಪಾಕಟಾಕ್ಷವೂ ಒಲಿಯಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

https://youtu.be/zNradaUZRlw

ಬೆಳ್ಳಿ ಮತ್ತು ತಾಮ್ರದಿಂದ ಮಾಡಿರುವ ಧನಲಕ್ಷ್ಮಿ ಸೇರನ್ನು ತೆಗೆದುಕೊಂಡು ಬರಬೇಕು. ಈ ಸೇರನ್ನು ಧನಲಕ್ಷ್ಮಿ ಕುಂಚ ಅಥವಾ ಧನಲಕ್ಷ್ಮಿ ಸೇರು ಎಂದು ಕೂಡ ಕರೆಯಲಾಗುತ್ತದೆ. ಧನಲಕ್ಷ್ಮಿ ಸೇರಿನೊಳಗೆ ಯಾವ ಯಾವ ಪದಾರ್ಥಗಳನ್ನು ಹಾಕಿ ಪೂಜೆ ಮಾಡಬೇಕು ಎಂದು ತಿಳಿದುಕೊಳ್ಳೋಣ ಬನ್ನಿ.ಮೊದಲಿಗೆ ಧನಲಕ್ಷ್ಮಿ ಸೇರನ್ನು ತೆಗೆದುಕೊಂಡು ಬಂದ ನಂತರ ಶುದ್ಧವಾದ ನೀರಿನಿಂದ ತೊಳೆದು ನಂತರ ಒರೆಸಿ ಇಡಬೇಕು. ಧನಲಕ್ಷ್ಮಿ ಸೇರನ್ನು ಒರೆಸಿದ ನಂತರ ಅರಿಶಿನ-ಕುಂಕುಮವನ್ನು ಹಚ್ಚಿ ಸ್ವಸ್ತಿಕ್ ಚಿಹ್ನೆಯನ್ನು ಬರೆಯಬೇಕು. ಧನಲಕ್ಷ್ಮಿ ಸೇರಿನೊಳಗೆ ಅಕ್ಕಿ, ಉಪಯೋಗಿಸದ ಬಂಗಾರ, ಬೆಳ್ಳಿಯ ನಾಣ್ಯ, 5 ಗುಲಗಂಜಿ, 5 ಗೋಮತಿ ಚಕ್ರ, 5 ಕಮಲದ ಬೀಜಗಳು, ತಾಮ್ರದಲ್ಲಿ ಮಾಡಿರುವಂತಹ ಕುಬೇರ ಲಕ್ಷ್ಮಿ ಯಂತ್ರವನ್ನು ಸೇರಿನ ಒಳಗೆ ಹಾಕಬೇಕು.

ಸೇರನ್ನು ಇಡುವುದಕ್ಕೂ ಮೊದಲು ತಾಮ್ರದ,ಹಿತ್ತಾಳೆಯ ಅಥವಾ ಬೆಳ್ಳಿಯ ತಟ್ಟೆಯ ಮೇಲೆ ಪದ್ಮಕಾರದಲ್ಲಿ ನಾಣ್ಯಗಳನ್ನು ಹರಡಿ ಅದರ ಮೇಲೆ ಸೇರನ್ನು ಇಡಬೇಕು. ಸೇರಿನ ಒಳಗೆ ಮೇಲೆ ಹೇಳಿರುವ ವಸ್ತುಗಳನ್ನು ಹಾಕಬೇಕಾದರೆ ಮನಸ್ಸಿನಲ್ಲಿ ಸಂಕಲ್ಪವನ್ನು ಮಾಡಿಕೊಂಡು ಕಷ್ಟಗಳೆಲ್ಲ ಕರಗಿ ಹೋಗಿ ಅಷ್ಟೈಶ್ವರ್ಯಗಳು ತುಂಬಿ ತುಳುಕಲಿ ಎಂದು ಹೇಳಿಕೊಂಡು ಒಂದೊಂದು ಪಧಾರ್ಥವನ್ನು ಹಾಕಬೇಕು.

ಧನಲಕ್ಷ್ಮಿ ಸೆರನ್ನು ಲಕ್ಷ್ಮಿದೇವಿ ಆಶೀರ್ವಾದ ಮಾಡುತ್ತಿರುವ ಫೋಟೋದ ಕೆಳಭಾಗದಲ್ಲಿ ಇಡಬೇಕು. ಈ ರೀತಿಯಾಗಿ ಭಕ್ತಿಯಿಂದ ಪೂಜೆಯನ್ನು ಮಾಡಿದರೆ ಸಕಲ ಸಂಕಷ್ಟಗಳೂ ದೂರವಾಗಿ ಧನಸಂಪತ್ತು ಪ್ರಾಪ್ತಿಯಾಗುವುದರಲ್ಲಿ ಸಂಶಯವಿಲ್ಲ. ಧನಲಕ್ಷ್ಮಿ ಪೂಜೆಯನ್ನು ಶುಕ್ರವಾರದ ದಿನದಂದು ಮಾಡಬೇಕು.

ಸೇರಿನಲ್ಲಿರುವ ಅಕ್ಕಿಯನ್ನು ಮೂರು ತಿಂಗಳಿಗೊಮ್ಮೆ ಅಥವಾ ತಿಂಗಳಿಗೊಮ್ಮೆ ಗುರುವಾರದ ದಿನ ಬದಲಾಯಿಸಿ ಮತ್ತೆ ಶುಕ್ರವಾರ ಹೊಸದಾದ ಅಕ್ಕಿಯನ್ನು ಹಾಕಿ ದೇವರ ಚಿತ್ರಪಟದ ಮುಂದೆ ಇಟ್ಟು ಪೂಜೆಯನ್ನು ಭಕ್ತಿಯಿಂದ ಮಾಡಬೇಕು.