ಒಂದು ವೇಳೆ ಮನೆಯಲ್ಲಿ ಈ ವಸ್ತುವು ಹೆಚ್ಚಾಗಿದ್ದರೆ ನೀವು ಎಷ್ಟೇ ಕಷ್ಟಪಟ್ಟು ಹಣವನ್ನು ಸಂಪಾದನೆ ಮಾಡಿದರು ಅದು ನಿಮ್ಮ ಹತ್ತಿರ ನಿಲ್ಲುವುದಿಲ್ಲ ಹಾಗೂ ಲಕ್ಷ್ಮೀದೇವಿಯು ಮನೆಯಲ್ಲಿ ಸ್ಥಿರವಾಗಿ ಅಥವಾ ಶಾಶ್ವತವಾಗಿ ನೆಳೆಸುವುದಿಲ್ಲ ಹಾಗೂ ದರಿದ್ರತನ ಎಂಬುದು ಈ ಒಂದು ವಸ್ತು ನಿಂದ ನಿಮ್ಮ ಮನೆಗೆ ಬರುತ್ತದೆ. ಹಾಗಾದರೆ ಯಾವ ಆ ಒಂದು ವಸ್ತುವಿನಿಂದ ಮನೆಯಲ್ಲಿ ದರಿದ್ರತನ ಎಂಬುದು ಬರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.ಸಾಮಾನ್ಯವಾಗಿ ಎಷ್ಟೋ ಜನರ ಮನೆಯಲ್ಲಿ ಮಾನಸಿಕ ಕಿರಿ ಕಿರಿಗಳು, ಪತಿ-ಪತ್ನಿಯರ ನಡುವೆ ಕಲಹಗಳು, ಅತ್ತೆ-ಸೊಸೆ ಮಧ್ಯ ಜಗಳ, ಮಕ್ಕಳೊಂದಿಗೆ ಜಗಳ ಹೀಗೆ ಪ್ರತಿನಿತ್ಯವೂ ಕಲಹಗಳಲ್ಲಿ ದಿನವು ಮುಗಿದುಹೋಗುತ್ತದೆ. ಎಷ್ಟು ಸಂಪಾದನೆ ಮಾಡಿದರು ಸಾಲ ಮಾಡುವ ಪರಿಸ್ಥಿತಿಗೆ ಬರುತ್ತದೆ ಹಾಗೂ ಮನೆಯಲ್ಲಿ ಖರ್ಚು ಜಾಸ್ತಿಯಾಗುವುದು ಈ ಒಂದು ವಸ್ತುವಿನಿಂದ ಅದೇ ತಲೆ ಕೂದಲು. ಯಾರ ಮನೆಯಲ್ಲಿ ತಲೆ ಕೂದಲು ಹೆಚ್ಚಾಗಿ ಬಿದ್ದಿರುತ್ತದೆಯೋ ಅಥವಾ ಮನೆಯ ಎಲ್ಲ ಮೂಲೆಗಳಲ್ಲೂ ಕೂದಲು ಕಾಣಿಸಿಕೊಳ್ಳುತ್ತಿರುತ್ತದೆಯೋ ಅಂಥವರ ಮನೆಯಲ್ಲಿ ಲಕ್ಷ್ಮೀದೇವಿಯು ಸ್ಥಿರವಾಗಿ ನೆಳೆಸುವುದಿಲ್ಲ.ಮನೆಯಲ್ಲಿ ಹೆಣ್ಣು ಮಕ್ಕಳು ಅಥವಾ ಹೆಂಗಸರು ಇದ್ದರೆ ಕೂದಲು ಉದುರುವುದು ಸಹಜ, ಆದರೆ ಮನೆಯಲ್ಲಿ ಅತಿಯಾಗಿ ಕೂದಲು ಸಿಗುವುದು, ಊಟದಲ್ಲಿ ಕೂದಲು ಸಿಗುವುದು, ಪೊರಕೆಯಲ್ಲಿ ಕಸವನ್ನು ಗುಡಿಸುವಾಗ ಗಂಟು ಗಂಟಾಗಿ ಕೂದಲು ಸಿಗುತ್ತಿದ್ದರೆ ಆ ಮನೆಯಲ್ಲಿ ಲಕ್ಷ್ಮೀದೇವಿಯು ನೆಳೆಸುವುದಿಲ್ಲ. ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಯು ಹೆಚ್ಚಾಗುತ್ತದೆ , ಆದ್ದರಿಂದ ಮನೆಯಲ್ಲಿ ತಲೆಯನ್ನು ಬಾಚಿದ ಮೇಲೆ ಉದುರಿದ ಕೂದಲನ್ನು ಕಸದ ಡಬ್ಬಿಗೆ ಹಾಕುವುದಕ್ಕೂ ಮುಂಚೆ ಈ ಚಿಕ್ಕ ಕೆಲಸವನ್ನು ಮಾಡಬೇಕು.
ಮನೆಯಲ್ಲಿ ಉದುರಿದ ಕೂದಲನ್ನು ಒಟ್ಟಾಗಿ ಸೇರಿಸಿ ಗಂಟನ್ನು ಹಾಕಿ ಒಂದು ಖಾಲಿ ಹಾಳೆಯಲ್ಲಿ ಅದನ್ನು ಸುತ್ತಿ ನಂತರ ಕಸದ ಡಬ್ಬಿಗೆ ಅಥವಾ ಹೊರಗಡೆ ಎಲ್ಲಾದರೂ ಎಸೆಯಬೇಕು. ಒಂದು ವೇಳೆ ಯಾರಾದರೂ ಮನೆಗೆ ಬಂದು ಹೋದಾಗ ಅಥವಾ ಗಾಳಿ ಬಿಸಿ ಆಕಸ್ಮಿಕವಾಗಿ ಕೂದಲು ಮನೆಯೊಳಗೆ ಬರುತ್ತಿದ್ದಾಗ ಸ್ವಲ್ಪ ಎಚ್ಚರದಿಂದ ಇರಬೇಕು. ಇದರಿಂದ ಮನೆಯಲ್ಲಿ ಹಣಕಾಸಿನ ಖರ್ಚು ಹಾಗೂ ಕಷ್ಟಪಟ್ಟು ದುಡಿದ ಹಣವು ಖರ್ಚಾಗುವುದನ್ನು ತಪ್ಪಿಸಬಹುದು.