ದ್ವಾಪರ ಯುಗದಲ್ಲಿಅ ರ್ಜುನನು ಪ್ರತಿಷ್ಠಾಪಿಸಿದ ಮುಕ್ತೀಶ್ವರ ಶಿವಲಿಂಗದ ಬಗ್ಗೆ ಕಿರು ಪರಿಚಯ.

ಜ್ಯೋತಿಷ್ಯ

ಮುಕ್ತಿ ಎಂದರೆ ವಿಮೋಚನೆ ಎಂದರ್ಥ, ದ್ವಾಪರ ಯುಗದಲ್ಲಿ ಅರ್ಜುನನು ಬ್ರಹ್ಮಹತ್ಯಾ ದೋಷದ ನಿವಾರಣೆಗಾಗಿ ಅನೇಕ ಸ್ಥಳಗಳನ್ನು ಸಂಚರಿಸುತ್ತ ಸಾಕಷ್ಟು ಶಿವಲಿಂಗಗಳನ್ನು ಪ್ರತಿಷ್ಠಾಪನೆ ಮಾಡುತ್ತಾರೆ. ಆ ಶಿವಲಿಂಗಗಳಲ್ಲಿ ಮುರುಗಮಲೆಯ ಮುಕ್ತೀಶ್ವರ ಶಿವಲಿಂಗ ಪ್ರಮುಖವಾದದ್ದು ಆಗಿದೆ. ಅರ್ಜುನನ ಬ್ರಹ್ಮಹತ್ಯ ದೋಷವನ್ನು ನಿವಾರಣೆ ಮಾಡಿದ ಕಾರಣದಿಂದಾಗಿ ಮುಕ್ತೀಶ್ವರ ಎಂಬ ಹೆಸರು ಬಂದಿದೆ.ಅರ್ಜುನನ್ನು ಪ್ರತಿಷ್ಠಾಪಿಸಿದ ಈ ಶಿವಲಿಂಗಕ್ಕೆ ಸಾವಿರಾರು ವರ್ಷಗಳ ಹಿಂದೆ ಭಾರದ್ವಾಜ ಮುನಿಗಳು ಪೂಜಿಸಿದ್ದಾರೆ. ಆದ್ದರಿಂದ ಈ ಕ್ಷೇತ್ರಕ್ಕೆ ಭಾರದ್ವಾಜ ಕ್ಷೇತ್ರ ಎಂದು ಕರೆಯಲಾಗುತ್ತದೆ. ದೇವಾಲಯದ ಕೆಳಗಡೆ ಒಂದು ಗುಹೆಯಿದೆ ಹಾಗೂ ಆ ಗುಹೆಯಲ್ಲಿ ಬಹಳಷ್ಟು ಮಂದಿ ಋಷಿಗಳು ತಪಸ್ಸನ್ನು ಮಾಡಿ ಮುಕ್ತಿಯನ್ನು ಪಡೆದುಕೊಂಡಿದ್ದಾರೆ. ಒಮ್ಮೆ ಭಾರದ್ವಾಜ ಮುನಿಗಳ ಹೆತ್ತವರು ಅನಾರೋಗ್ಯಕ್ಕೆ ಪೀಡಿತರಾದಾಗ ಕಾಶಿಗೆ ಹೋಗಲು ಸಾಧ್ಯವಾಗಲಿಲ್ಲ, ಆಗ ಅವರ ಕಷ್ಟವನ್ನು ಅರಿತ ಗಂಗಾಮಾತೆಯು ಭಾರದ್ವಾಜ ಮುನಿಗಳು ತಪಸ್ಸು ಮಾಡುತ್ತಿದ್ದ ಜಾಗದಲ್ಲಿ ಉದ್ಭವಿಸುತ್ತಾರೆ. ಬಳಿಕ ಈ ನೀರನ್ನು ತಮ್ಮ ಸ್ನಾನ, ಸಂಧ್ಯಾವಂದನೆಗೆ ಉಪಯೋಗಿಸಲು ಪ್ರಾರಂಭ ಮಾಡುತ್ತಾರೆ. ಇಂದಿಗೂ ಆ ನೀರು ಕಾಶಿಯಿಂದ ಹರಿದು ಬರುತ್ತದೆ ಎಂಬುದು ಜನರ ನಂಬಿಕೆ. ಈ ನೀರನ್ನು ಸರ್ವ ರೋಗ ನಿವಾರಣೆ ಎಂದು ಕೂಡ ಕರೆಯಲಾಗುತ್ತದೆ.

ಈ ಕುಂಡಿಕೆಯಲ್ಲಿ ಇರುವ ನೀರು ಯಾವ ಕಾಲದಲ್ಲೂ ಬತ್ತಿ ಹೋಗುವುದಿಲ್ಲ, ಸಾವಿರಾರು ವರ್ಷಗಳಿಂದ ಈ ನೀರನ್ನು ಸೇವಿಸಿದವರು ಅನಾರೋಗ್ಯದಿಂದ ಗುಣಮುಖರಾಗಿದ್ದಾರೆ. ಭಾರದ್ವಾಜ ಮುನಿಗಳು ಇದ್ದಾಗ ಈ ದೇವಾಲಯದಲ್ಲಿ ಸಪ್ತಮಾತೃಕೆಯರನ್ನು ಸಹ ಪ್ರತಿಷ್ಠಾಪನೆ ಮಾಡಿದ್ದರು ಹಾಗೂ ಭಕ್ತಾದಿಗಳು ಇಂದಿಗೂ ಸಪ್ತಮಾತೃಕೆಯರ ಪೂಜೆಯನ್ನು ಮಾಡುತ್ತಾರೆ. ಮಾಟ ಮಂತ್ರ ಪ್ರಯೋಗಕ್ಕೆ ಒಳಗಾಗಿದ್ದವರು ಸಪ್ತಮಾತೃಕೆಯರ ಮುಂದೆ ಸಣ್ಣದಾದ ಕಪ್ಪು ಬಳೆಯನ್ನು ಇಟ್ಟು ಪೂಜೆ ಮಾಡಿದರೆ ಮಾಟಮಂತ್ರದ ಪ್ರಯೋಗವು ನಿವಾರಣೆಯಾಗುತ್ತದೆ ಎಂಬ ಅಚಲವಾದ ನಂಬಿಕೆ ಇದೆ.ಅರ್ಜುನನು ಶಿವಲಿಂಗದ ಜೊತೆಗೆ ಪಾರ್ವತಿ, ಗಣೇಶ ಹಾಗೂ ಸುಬ್ರಮಣ್ಯ ಸ್ವಾಮಿಯ ಪ್ರಾಣಪ್ರತಿಷ್ಠಾಪನೆಯನ್ನು ಕೂಡ ಮಾಡಿದ್ದಾರೆ. ಎಲ್ಲಾ ಶಿವನ ದೇವಾಲಯದಲ್ಲಿ 1 ನಂದಿ ಇದ್ದರೆ, ಮುಕ್ತೀಶ್ವರ ದೇವಾಲಯದಲ್ಲಿ ಎರಡು ನಂದಿ ಇದೆ. ಇಲ್ಲಿರುವ ಹತ್ತಿ ಮರಕ್ಕೆ ಭಕ್ತಾದಿಗಳು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ಬಟ್ಟೆಯನ್ನು ಕಟ್ಟುತ್ತಾರೆ. ಇದಕ್ಕಾಗಿ ಮುಕ್ತೀಶ್ವರ ಸ್ವಾಮಿಯ ಆಲಯದಲ್ಲಿ ಕೆಂಪು ಬಣ್ಣದ ಹರಕೆಯ ಬಟ್ಟೆಯನ್ನು ಪಡೆದು 11 ರೂಪಾಯಿ ಕಾಣಿಕೆಯನ್ನು ಹರಕೆಯ ಬಟ್ಟೆಯೊಳಗೆ ಇಟ್ಟು ಮುಕ್ತೀಶ್ವರ ಸ್ವಾಮಿಯನ್ನು ಸ್ಮರಿಸಿಕೊಂಡು ಹತ್ತಿ ಮರಕ್ಕೆ ಮೂರು ಪ್ರದಕ್ಷಿಣೆಯನ್ನು ಹಾಕಿ ನಂತರ ಕಟ್ಟಲಾಗುತ್ತದೆ. ಸಂತಾನ ಪ್ರಾಪ್ತಿಗಾಗಿ,ಕಂಕಣ ಭಾಗ್ಯಕ್ಕಾಗಿ,ಉದ್ಯೋಗ ಸಮಸ್ಯೆಗಾಗಿ ಹಾಗೂ ಇತರೆ ಕಾರಣಗಳಿಗೆ ಹರಕೆಯನ್ನು ಕಟ್ಟುವುದರಿಂದ ಫಲವು ದೊರೆಯುತ್ತದೆ.ಈ ಮುರುಗಮಲೆ ಕ್ಷೇತ್ರವು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಿಂದ 9 ಕಿಲೋಮೀಟರ್ ದೂರದಲ್ಲಿದೆ.

Leave a Reply

Your email address will not be published. Required fields are marked *