ಈ ಗುರುವಾರ ಬರುವ ಜೇಷ್ಠ ಮಾಸದ ಹುಣ್ಣಿಮೆ ತುಂಬಾ ವಿಶೇಷವಾಗಿದೆ. ಮನೆಯಲ್ಲಿ ಲಕ್ಷ್ಮಿ, ಪಾರ್ವತಿ, ಮಹಾಕಾಳಿಯು ಹೆಣ್ಣುಮಕ್ಕಳೇ ಆಗಿರುವುದರಿಂದ ಹೆಣ್ಣುಮಕ್ಕಳಿಗೆ ವಿಶೇಷವಾಗಿದೆ ಈ ಹುಣ್ಣಿಮೆ. ಹಾಗಾದರೆ ಜೇಷ್ಠ ಮಾಸದ ಹುಣ್ಣಿಮೆಯ ವಿಶೇಷತೆಯನ್ನು ತಿಳಿದುಕೊಳ್ಳೋಣ ಬನ್ನಿ.
ವಟಸಾವಿತ್ರಿ ವ್ರತವನ್ನು ಮಾಡುವ ಹೆಣ್ಣು ಮಕ್ಕಳಿಗೆ ತುಂಬಾ ಶ್ರೇಷ್ಠವಾದ ಹುಣ್ಣಿಮೆ ಇದಾಗಿದೆ. ಜೇಷ್ಠ ಮಾಸದ ಹುಣ್ಣಿಮೆಯ ಪ್ರಾಮುಖ್ಯತೆಯನ್ನು ಪಡೆದುಕೊಂಡಿರುವುದೇ ಹೆಣ್ಣುಮಕ್ಕಳಿಂದಾಗಿ. ಹುಣ್ಣಿಮೆಯ ದಿನ ನಿಮ್ಮ ಪತಿಯ ಆಯಸ್ಸು, ಆರೋಗ್ಯ ಹಾಗೂ ಪತ್ನಿಯ ಮಾಂಗಲ್ಯವು ವೃದ್ಧಿಯಾಗುವ ವಿಶೇಷವಾದ ಹುಣ್ಣಿಮೆ. ನಿಮ್ಮ ಮನೆಯ ದೇವರ ಕೋಣೆಯನ್ನು ಬಹಳ ಶುದ್ದಿಯಿಂದ ಇಟ್ಟುಕೊಳ್ಳಿ ಹಾಗೂ ನಿಮ್ಮ ಕುಲದೇವರಿಗೆ ಭಕ್ತಿಯಿಂದ, ಶ್ರದ್ಧೆಯಿಂದ ಪೂಜೆಯನ್ನು ಮಾಡಬೇಕು. ವಿಶೇಷವಾಗಿ ಹುಣ್ಣಿಮೆಯ ದಿನ ಕೆಂಪು ಮತ್ತು ಬಿಳಿ ಬಣ್ಣದ ಹೂವಿನಿಂದ ಪೂಜೆಯನ್ನು ಮಾಡಬೇಕು. ಒಂದು ತಾಮ್ರದ ಬಟ್ಟಲಿಗೆ 9 ಧನ್ಯವನ್ನು ಹಾಕಿ ದೇವಿಯ ಮುಂದೆ ಇಡಬೇಕು. 5 ಬಗ್ಗೆ ಹೂವು ಹಾಗೂ 5 ಬಗ್ಗೆ ಹಣ್ಣುಗಳನ್ನು ದೇವರ ಮುಂದೆ ಇಡಬೇಕು. ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಯಾವುದಾದರೂ ಶ್ಲೋಕಗಳು ಗೊತ್ತಿದ್ದರೆ ಅದನ್ನು ಹೇಳಬಹುದು. ಈ ವಿಧಾನವನ್ನು ಹುಣ್ಣಿಮೆಯ ಒಂದು ದಿನ ಮುಂಚೆ ಮಾಡಿಕೊಳ್ಳಬೇಕು.
ಹುಣ್ಣಿಮೆ ದಿನ ಮುಂಜಾನೆ ಬೇಗ ಎದ್ದು ಕುಟುಂಬದ ಸದಸ್ಯರೆಲ್ಲರೂ ಒಂದು ಹಳದಿ ದಾರದ ಉಂಡೆಯನ್ನು ತೆಗೆದುಕೊಂಡು ಅಶ್ವಥ್ ಕಟ್ಟೆ ಅಥವಾ ಬನ್ನಿಗಿಡಕ್ಕೆ ಹಳದಿ ಬಣ್ಣದ ದಾರದ ಉಂಡೆಯಿಂದ ಕಟ್ಟಬೇಕು. ಹೀಗೆ ದಾರವನ್ನು ಕಟ್ಟಿದ ಮೇಲೆ ಮೊದಲಿಗೆ ಗೃಹಿಣಿ ನಂತರ ಆಕೆಯ ಪತಿ ತದನಂತರ ಮಕ್ಕಳು 12 ಬಾರಿ ದಾರದ ಸುತ್ತ ಸುತ್ತಬೇಕು. ಪ್ರದಕ್ಷಿಣೆಯನ್ನು ಹಾಕಿದ ನಂತರ ಫಲ ಪುಷ್ಪಗಳಿಂದ ಪೂಜೆಯನ್ನು ಮಾಡಬೇಕು. ವೃಕ್ಷಕ್ಕೆ ಪೂಜೆಯನ್ನು ಮಾಡಬೇಕಾದರೆ ಸಾವಿತ್ರಿ ದೇವಿಯನ್ನು, ಯಮ ದೇವರನ್ನು, ಬ್ರಹ್ಮ ದೇವರನ್ನು ಸ್ಮರಿಸಿಕೊಂಡು ಪೂಜೆಯನ್ನು ಮಾಡಬೇಕು.ಪೂಜೆ ಮಾಡಿದ ಬಳಿಕ ಸಮಯವಿದ್ದರೆ ವಿಷ್ಣುಸಹಸ್ರನಾಮ, ಶಿವ ಸ್ತೋತ್ರ ಪಠಿಸುವುದರಿಂದ ಸಕಲ ಸಂಕಷ್ಟಗಳು, ಕಂಟಕಗಳು ದೂರವಾಗುತ್ತದೆ. ಇದರ ಜೊತೆಗೆ ಮನೆ ಯಜಮಾನನ ಆಯಸ್ಸು, ಆರೋಗ್ಯ ವೃದ್ಧಿಯಾಗುತ್ತದೆ. ಹುಣ್ಣಿಮೆಯ ದಿನ ಗಂಡು ಮಕ್ಕಳು ಯಾವುದೇ ರೀತಿಯ ದುಶ್ಚಟಗಳಿಗೆ ಹೋಗಬಾರದು. ಹುಣ್ಣಿಮೆ ದಿನ ಕುಟುಂಬದ ಸದಸ್ಯರ ಜೊತೆ ಇದ್ದು ಪೂಜೆಯನ್ನು ಮಾಡುವುದರಿಂದ ಸಕಲ ಇಷ್ಟಾರ್ಥಗಳನ್ನು ನೆರವೇರುತ್ತದೆ.