ಕಪ್ಪುದಾರವನ್ನು ಕಟ್ಟಿಕೊಳ್ಳುವ ಹಿಂದಿನ ರಹಸ್ಯದ ಬಗ್ಗೆ ತಿಳಿದಿದೆಯೇ ನಿಮಗೆ ?

ಜ್ಯೋತಿಷ್ಯ

ಕೆಲವರು ಕಾಲಿಗೆ ಹಾಗೂ ಮತ್ತೆ ಕೆಲವರು ಕೈಯಿಗೆ ಕಪ್ಪು ದಾರ ಕಟ್ಟುವುದನ್ನು ನೋಡಿರುತ್ತೇವೆ ಹಾಗೂ ಕತ್ತಿಗೆ ಕಪ್ಪು ದಾರವನ್ನು ಕಟ್ಟಿಕೊಂಡು ಅದರ ಜೊತೆ ಅವರಿಗೆ ಇಷ್ಟವಾಗುವಂತಹ ದೇವರ ಡಾಲರನ್ನು ಕೂಡ ಹಾಕಿಕೊಂಡಿರುತ್ತಾರೆ ಮತ್ತು ಚಿಕ್ಕ ಮಕ್ಕಳಿಗೆ ಕೆನ್ನೆಯ ಮೇಲೆ ಅಥವಾ ಹಣೆ ಮೇಲೆ ಕಪ್ಪು ಬೊಟ್ಟು ಇಟ್ಟಿರುತ್ತಾರೆ. ಹಾಗಾದರೆ ಕಪ್ಪು ದಾರವನ್ನು ಕಟ್ಟುವುದು ಏಕೆ ಹಾಗೂ ಮಕ್ಕಳಿಗೆ ಕಪ್ಪು ಬೊಟ್ಟು ಇಡುವುದು ಏಕೆ ಎಂದು ತಿಳಿದುಕೊಳ್ಳೋಣ ಬನ್ನಿ.ಈಗಿನ ಕಾಲದಲ್ಲಿ ಕಪ್ಪು ದಾರವನ್ನು ಯಾವ ಕಾರಣಕ್ಕೆ ಕಟ್ಟುತ್ತಾರೆ ಎಂಬುದನ್ನು ತಿಳಿದುಕೊಳ್ಳದೆ ಫ್ಯಾಷನ್ ಗಾಗಿ ಕಟ್ಟಿಕೊಳ್ಳುತ್ತಾರೆ. ಮಕ್ಕಳಿಗೆ ಇಡುವ ಕಪ್ಪು ಬೊಟ್ಟನ್ನು ದೃಷ್ಟಿ ಬೊಟ್ಟು ಎಂದು ಕೂಡ ಕರೆಯಲಾಗುತ್ತದೆ. ಶಾಸ್ತ್ರಗಳ ಪ್ರಕಾರ ಕಪ್ಪುಬಣ್ಣಕ್ಕೆ ಶನಿದೇವ ಹಾಗೂ ರಾಹುವಿನ ಜೊತೆ ಸಂಬಂಧವನ್ನು ಕಲ್ಪಿಸಲಾಗುತ್ತದೆ. ಶಿವನ ಸೇನಾಧ್ಯಕ್ಷ ಕಾಲಭೈರವನಿಗೆ ಕಪ್ಪು ಬಣ್ಣದ ಸಂಬಂಧವಿದೆ. ಶಿವ ವಿಷ್ಣುವಿನ ಅಂಶವೇ ಕಾಲಭೈರವೇಶ್ವರ ಎಂದು ಹೇಳಲಾಗಿದೆ. ಕಾಲಭೈರವೇಶ್ವರ ಸ್ವಾಮಿಯ ಸ್ಮರಣೆಯಿಂದ ಮಾನಸಿಕ, ದೈವಿಕ, ದೈಹಿಕ ಸಮಸ್ಯೆಗಳು ದೂರವಾಗಲಿದೆ. ಕಾಲಭೈರವೇಶ್ವರ ಸ್ವಾಮಿಯು ಶಿವನ ಅಷ್ಟೇ ಭಕ್ತರ ಮೇಲೆ ಪ್ರೀತಿ ಇಟ್ಟಿದ್ದಾರೆ. ಈ ರೀತಿಯ ಕಾಲಭೈರವೇಶ್ವರನ ಕಪ್ಪು ಬಣ್ಣ ಎಲ್ಲಾ ರೀತಿಯ ದುಷ್ಟಶಕ್ತಿ ಗಳಿಂದ ನಮ್ಮನ್ನು ರಕ್ಷಣೆ ಮಾಡುತ್ತದೆ.

ಯಾರ ಕೆಟ್ಟ ದೃಷ್ಟಿಯು ಮಕ್ಕಳ ಮೇಲೆ ಬೀಳಬಾರದೆಂದು ಕಪ್ಪು ಬೊಟ್ಟನ್ನು ಮಕ್ಕಳಿಗೆ ಇಡಲಾಗುತ್ತದೆ ಹಾಗೆಯೇ ದೊಡ್ಡವರು ಕೈಯಿಗೆ-ಕಾಲಿಗೆ, ಕುತ್ತಿಗೆಗೆ ಕಪ್ಪು ದಾರವನ್ನು ಕಟ್ಟಿಕೊಳ್ಳುವುದು ದುಷ್ಟ ಶಕ್ತಿಯ ಪ್ರಭಾವ ಬೀಳಬಾರದೆಂದು. ಮನುಷ್ಯನ ದೇಹವು ಪಂಚಭೂತಗಳಿಂದ ಕೂಡಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಕೆಟ್ಟ ದೃಷ್ಟಿಗಳು ಪಂಚಭೂತಗಳ ಮೇಲೆ ಬಿದ್ದಾಗ ಪ್ರಭಾವ ಬೀರಲು ಪ್ರಾರಂಭಿಸುತ್ತದೆ. ಆಗ ಕಪ್ಪು ಬಣ್ಣದ ದಾರವನ್ನು ಕಟ್ಟಿಕೊಳ್ಳುವುದು ಅಥವಾ ಕಪ್ಪು ಬಣ್ಣದ ವಸ್ತುವನ್ನು ಉಪಯೋಗಿಸುವುದರಿಂದ ದುಷ್ಟ ಶಕ್ತಿಯ ಪ್ರಭಾವ ಕಮ್ಮಿಯಾಗಲಿದೆ ಹಾಗೂ ವೈಜ್ಞಾನಿಕವಾಗಿ ಕಪ್ಪುಬಣ್ಣವು ಶಾಖವನ್ನು ಹೀರಿಕೊಳ್ಳುವುದರಲ್ಲಿ ಅತ್ಯಂತ ಪರಿಣಾಮಕಾರಿ ಎಂದಿದೆ ವಿಜ್ಞಾನ. ಆದ್ದರಿಂದ ಕಪ್ಪು ದಾರವನ್ನು ಕಟ್ಟಿಕೊಳ್ಳುವುದರಿಂದ ಯಾವುದೇ ಕೆಟ್ಟ ದಷ್ಟಿಯು ನೇರವಾಗಿ ಪರಿಣಾಮ ಬೀರುವುದಿಲ್ಲ.

ಯಾರಿಗೆ ಹಣದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುತ್ತದೆಯೋ ಅಂತವರು ಮಂಗಳವಾರ ಆಂಜನೇಯ ಸ್ವಾಮಿಯ ದೇವಸ್ಥಾನಕ್ಕೆ ಹೋಗಿ ಹನುಮಂತನ ಪಾದಕ್ಕೆ ಕಪ್ಪು ದಾರವನ್ನು ಅರ್ಪಿಸಿ ಅಲ್ಲಿರುವ ಕುಂಕುಮವನ್ನು ಕಪ್ಪುದಾರಕ್ಕೆ ಹಚ್ಚಿಕೊಂಡು ಮನಸ್ಸಾರೆ ಪ್ರಾರ್ಥನೆ ಮಾಡಿಕೊಂಡು ಮನೆಗೆ ಬಂದು ಹಣ ಇಡುವ ಜಾಗದಲ್ಲಿ ಕಪ್ಪು ದಾರವನ್ನು ಇಟ್ಟರೆ ಹಣದ ಸಮಸ್ಯೆಗೆ ಮುಕ್ತಿ ದೊರಕುತ್ತದೆ. ಈ ಕಪ್ಪು ದಾರವನ್ನು ಗಂಡುಮಕ್ಕಳು ಬಲ ಕೈಯಿಗೆ ಅಥವಾ ಬಲ ಕಾಲಿಗೆ ಕಟ್ಟಿಕೊಳ್ಳಬೇಕು. ಹೆಣ್ಣುಮಕ್ಕಳು ಎಡ ಕೈಯಿಗೆ ಅಥವಾ ಎಡ ಕಾಲಿಗೆ ಕಪ್ಪು ದಾರವನ್ನು ಕಟ್ಟಿ ಕೊಳ್ಳಬೇಕು.