ಲಕ್ಷ್ಮೀದೇವಿ ಶಾಶ್ವತವಾಗಿ ನೆಲೆಸಬೇಕೆಂದರೆ ಈ ವಸ್ತುಗಳನ್ನು ದಾನವಾಗಿ ನೀಡಬೇಡಿ.

ಜ್ಯೋತಿಷ್ಯ

ಲಕ್ಷ್ಮೀದೇವಿ ಚಂಚಲೆ, ಯಾರ ಮನೆಯಲ್ಲಿ ಅವಳನ್ನು ಯಾವ ರೀತಿ ನೋಡಿಕೊಳ್ಳುತ್ತಾರೋ ಆ ರೀತಿಯಾಗಿ ಲಕ್ಷ್ಮೀದೇವಿಯು ನೆಲೆಸಿರುತ್ತಾಳೆ. ಹಾಗಾಗಿ ಮನೆಯಲ್ಲಿ ಕಲಹಗಳನ್ನು ಮಾಡದೆ, ಗುರುಹಿರಿಯರನ್ನು ಗೌರವಿಸಿ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಒಳ್ಳೆಯ ರೀತಿಯಲ್ಲಿ ಕುಟುಂಬದ ಸದಸ್ಯರೆಲ್ಲ ಮನೆಯಲ್ಲಿ ಇದ್ದರೆ ಲಕ್ಷ್ಮೀದೇವಿಯು ಶಾಶ್ವತವಾಗಿ ನೆಲೆಸುತ್ತಾಳೆ. ಮತ್ತೊಂದು ಮುಖ್ಯವಾದ ವಿಷಯವೆಂದರೆ ಲಕ್ಷ್ಮೀದೇವಿಗೆ ಸ್ವಚ್ಛತೆ ಎಂದರೆ ಬಲು ಇಷ್ಟ ಆದ್ದರಿಂದ ಮನೆಯನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು. ಬಡವರಿಗೆ, ಕಷ್ಟದಲ್ಲಿದ್ದವರಿಗೆ ನಮ್ಮ ಕೈಯಲ್ಲಾದಷ್ಟು ದಾನವನ್ನು ಮಾಡುವುದರಿಂದ ಲಕ್ಷ್ಮೀದೇವಿ ಪ್ರಸನ್ನಳಾಗುತ್ತಾಳೆ. ಆದರೆ ಕೆಲವೊಂದು ವಸ್ತುಗಳನ್ನು ದಾನ ಮಾಡಬಾರದು. ಒಂದು ವೇಳೆ ಆ ವಸ್ತುಗಳನ್ನು ದಾನ ಮಾಡಿದರೆ ಸುಖ, ಶಾಂತಿ, ಸಮೃದ್ಧಿ ಎಂಬುದು ನಿಮ್ಮಿಂದ ದೂರ ಹೋಗುತ್ತದೆ. ಹಾಗಾದರೆ ಯಾವ ವಸ್ತುಗಳನ್ನು ದಾನ ಮಾಡಬಾರದು ಎಂದು ತಿಳಿದುಕೊಳ್ಳೋಣ ಬನ್ನಿ.

ದ್ವಾರಕನಾಥ್ ಶಾಸ್ರ್ತೀಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದುಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇಪೂಜೆ ಪ್ರಯತ್ನ ಮಾಡಿದರುನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮ ಯಾವುದೇ ಘೋರನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿಪರಿಹಾರ ಶತಸಿದ್ಧ 9900202707.

ಆಭರಣಗಳು ಲಕ್ಷ್ಮಿಗೆ ಬಹಳ ಇಷ್ಟವಾದದ್ದು, ಆದ್ದರಿಂದ ಆಭರಣಗಳನ್ನು ಯಾವುದೇ ಕಾರಣಕ್ಕೂ ದಾನವಾಗಿ ಅಥವಾ ಉಡುಗೊರೆಯಾಗಿ ಯಾರಿಗೂ ನೀಡಬಾರದು. ಒಂದು ವೇಳೆ ನೀವೇನಾದರೂ ಉಡುಗೊರೆಯಾಗಿ ಕೊಟ್ಟರೆ ನಿಮ್ಮ ಹತ್ತಿರ ಇದ್ದ ಸಂಪತ್ತು ನಿಮ್ಮಿಂದ ದೂರವಾಗುತ್ತದೆ. ಪೊರಕೆಯನ್ನು ಸಹ ಲಕ್ಷ್ಮಿ ಸ್ವರೂಪಕ್ಕೆ ಹೋಲಿಸಲಾಗುತ್ತದೆ. ನಮ್ಮ ಮನೆಯ ಪೂರಕೆಯನ್ನು ಇನ್ನೊಬ್ಬರಿಗೆ ಕೊಟ್ಟಾಗ ನಮ್ಮ ಮನೆಯ ಮಹಾಲಕ್ಷ್ಮಿ ಅವರ ಮನೆಗೆ ಹೋಗಿ ಸೇರುತ್ತಾಳೆ. ಹಾಗೆ ಪೊರಕೆಯನ್ನು ಬೇರವರ ಮನೆಯಿಂದ ನೀವು ಕೂಡ ದಾನವಾಗಿ ಪಡೆದು ಕೊಳ್ಳಬೇಡಿ ಏಕೆಂದರೆ ಅವರ ಮನೆಯಲ್ಲಿದ್ದ ನಕಾರಾತ್ಮಕ ಶಕ್ತಿಯು ನಿಮ್ಮ ಮನೆಯನ್ನು ಸೇರುತ್ತದೆ.

ಸೂರ್ಯಸ್ತದ ನಂತರ ಹಾಲು, ಮೊಸರು, ಉಪ್ಪು, ಗೋಧಿ, ಅರಿಶಿಣ, ಎಣ್ಣೆಯನ್ನು ದಾನವಾಗಿ ಅಥವಾ ಸಾಲವಾಗಿಯೂ ಯಾವುದೇ ಕಾರಣಕ್ಕೂ ಕೊಡಬಾರದು. ಮನೆಯಲ್ಲಿ ಶೇಖರಿಸಿಟ್ಟಿದ್ದ ಹಣವನ್ನು ಹಬ್ಬದ ದಿನಗಳಂದು, ಹುಣ್ಣಿಮೆಯ ದಿನದಂದು ಅಥವಾ ಏಕಾದಶಿ ದಿನದಂದು ಯಾವುದೇ ಕಾರಣಕ್ಕೂ ದಾನವಾಗಿ ಕೊಡಬಾರದು. ಏಕೆಂದರೆ ಲಕ್ಷ್ಮೀದೇವಿಯು ನಮ್ಮ ಮನೆಯನ್ನು ಬಿಟ್ಟು ಹೋಗುತ್ತಾಳೆ.
ಲಕ್ಷ್ಮೀದೇವಿ ಸಿರಿ ಸಂಪತ್ತನ್ನು ಕೊಡುವ ಜೊತೆಗೆ ಧಾನ್ಯವನ್ನು ಕರುಣಿಸುವ ಅನ್ನಪೂರ್ಣೇಶ್ವರಿಯಾಗಿ ಮನೆಯಲ್ಲಿ ನೆಲೆಸಿರುತ್ತಾಳೆ. ಆದ್ದರಿಂದ ಅಡುಗೆ ಕೋಣೆಯಲ್ಲಿರುವ ಲಟ್ಟಣಿಗೆ, ಚಪಾತಿ ಮಣೆ, ಕಬ್ಬಿಣದ ಹಂಚು ಇತ್ಯಾದಿ ವಸ್ತುಗಳನ್ನು ಮಂಗಳವಾರ ಹಾಗೂ ಶುಕ್ರವಾರದ ದಿನದಂದು ಯಾವುದೇ ಕಾರಣಕ್ಕೂ ದಾನವಾಗಿ ಕೊಡಬಾರದು. ಇದರಿಂದ ಆ ವಸ್ತುಗಳ ಜೊತೆಗೆ ಲಕ್ಷ್ಮೀದೇವಿಯು ನಮ್ಮ ಮನೆಯಿಂದ ಹೊರಟು ಹೋಗುತ್ತಾಳೆ. ಲಕ್ಷ್ಮೀದೇವಿ ಶಾಶ್ವತವಾಗಿ ನಿಮ್ಮ ಮನೆಯಲ್ಲಿ ನೆಲೆಸಬೇಕೆಂದರೆ ಯಾವುದೇ ಕಾರಣಕ್ಕೂ ಮನೆಯಲ್ಲಿರುವ ಈ ವಸ್ತುಗಳನ್ನು ದಾನವಾಗಿ ಕೊಡಬೇಡಿ.