ಕನ್ನಡದ ಮತ್ತೊಬ್ಬ ಪ್ರಖ್ಯಾತ ನಟಿಗೆ ಕೊರೊನ ಸೋಂಕು ಧೃಡ.

ಉಪಯುಕ್ತ ಮಾಹಿತಿ

ಕನ್ನಡದ ಮತ್ತೊಬ್ಬ ಹೆಸರಾಂತ ನಟಿಗೆ ಕೊರೊನ ಸೋಂಕು ಧೃಡ ಸ್ಯಾಂಡಲ್ ವುಡ್ ಹಿರಿಯ ನಟಿ ತಾರಾ ಅನುರಾಧ ಅವರಿಗೆ ಕೋವಿಡ್19ಪಾಸಿಟೀವ್ ವರದಿ ಬಂದಿದ್ದು, ಕೊರೋನ ವೈರಸ್ ಸೋಂಕು ತಗುಲಿರುವುದು ಧೃಡಪಟ್ಟಿದೆ. ಕನ್ನಡ ಚಿತ್ರರಂಗದ ಖ್ಯಾತ ನಟಿ ತಾರಾ 1984ರಲ್ಲಿ ಸ್ಯಾಂಡಲ್ ವುಡ್ ಪಾದಾರ್ಪಣೆ ಮಾಡಿದ್ದು,ಇದುವರೆಗೂ ಐನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಜನಪ್ರಿಯತೆಯ ಉತ್ತುಂಗದಲ್ಲಿದ್ದತಾರಾ ಅವರು 2009ರಲ್ಲಿ ಭಾರತೀಯ ಜನತಾ ಪಕ್ಷ ಸೇರಿ ಪ್ರಸ್ತುತ ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ದಿ ನಿಗಮದ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
<span;>ಅದಲ್ಲದೆ ಇವರಿಗೆ 2005ರಲ್ಲಿಗಿರೀಶ್ ಕಾಸರವಳ್ಳಿ ಅವರ ಹಸೀನ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಮತ್ತು ಹೆಬ್ಬೆಟ್ಟು ರಾಮಕ್ಕ ಚಿತ್ರದ ನಟನೆಗಾಗಿ ರಾಜ್ಯ ಪ್ರಶಸ್ತಿ ಕೂಡ ಲಭಿಸಿದೆ.

ನಟಿ ತಾರಾ ಕಳೆದ ಮೇ05 ರಂದು ತಮ್ಮ 49 ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡಿದ್ದರು. ಅನಾವಶ್ಯಕ ಮಾತಿಲ್ಲದ, ಗಂಭೀರತೆಸ್ವಭಾವದ ಜೊತೆಗೆ ಎಲ್ಲರೊಂದಿಗೆ ಬೆರೆತು ಸೌಮ್ಯ ಸ್ವಭಾವ ವ್ಯಕ್ತಿತ್ವವುಳ್ಳ ತಾರಾ ಅನುರಾಧ ಚಿತ್ರರಂಗದಅಜಾತ ಶತ್ರುವಾಗಿ ಜೀವನ ನಡೆಸುತ್ತಿದ್ದಾರೆ. ವೃತ್ತಿ ಬದುಕಲ್ಲಿಯಾಗಲೀ, ವೈಯಕ್ತಿಕ ಜೀವನದಲ್ಲಿಯೇ ಆಗಲೀ ಯಾವುದೇ ರೀತಿಯ ವಿವಾದ ಸೃಷ್ಠಿಗೆ ಎಡೆ ಮಾಡಿ ಕೊಡದೆ ಸಮಾಜದಲ್ಲಿ ತನ್ನದೇಯಾದ ಗೌರವ ಸ್ಥಾನ ಮಾನಗಳನ್ನು ಹೊಂದಿದ್ದು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇತ್ತೀಚಿನ ಕೆಲವು ದಿನಗಳಿಂದ ಅವರಿಗೆ ಜ್ವರಕಾಣಿಸಿಕೊಂಡಿದ್ದು, ನಾಲಿಗೆ ರುಚಿ, ವಾಸನೆ ರಹಿತ ಮತ್ತು ಭೇದಿಯಂತಹ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು. ಇದೀಗ ವರದಿ ಬಂದ ಬಳಿಕ ಅವರಿಗೆ ಕೊರೋನ ಸೋಂಕು ತಗುಲಿರುವುದು ಧೃಡಪಟ್ಟಿದೆ.

ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು, ಚಿತ್ರರಂಗದ ಆಪ್ತರು, ರಾಜಕೀಯ ಗಣ್ಯ ವ್ಯಕ್ತಿಗಳು ಅವರಿಗೆ ಕರೆಮಾಡಿ ಆರೋಗ್ಯದ ಬಗ್ಗೆ ವಿಚಾರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಆದಷ್ಟು ಬೇಗಗುಣಮುಖರಾಗಿ ಬನ್ನಿ ಎಂದು ಪ್ರಾರ್ಥಿಸಿದ್ದಾರೆ. ಇವರೆಲ್ಲಾ ಪ್ರೀತಿ, ಪ್ರಾರ್ಥನೆಗೆಪ್ರತಿಕ್ರಿಯಿಸಿ ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ ನಿಮಗೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ ಧನ್ಯವಾದಗಳು. ಕೊರೋನವೈರಸ್ ಬಗ್ಗೆ ಎದರಿಕೆ ಬೇಡ ಸ್ನೇಹಿತರೇ ಖಂಡಿತವಾಗಿಯೂ ನಾವು ಗೆಲ್ಲುತ್ತೇವೆ, ಕತ್ತಲು ಕಳೆದ ಬಳಿಕ ಬೆಳಕು ಬರಲೇಬೇಕು. ಕೋವಿಡ್ ಮಾರಿಯನ್ನು ನಾವೆಲ್ಲಾ ಮೆಟ್ಟಿ ನಿಲ್ಲೋಣ ಎಂದು ತಿಳಿಸಿದ್ದಾರೆ. ಅಷ್ಟೇಅಲ್ಲದೆ ಕೊರೋನ ವೈರಸ್ ತಗುಲಿರುವ ವ್ಯಕ್ತಿಗಳು ಧೃತಿಗೆಡಬೇಡಿ ವೈದ್ಯರು ಹೇಳಿದ ಸಲಹೆ ಸೂಚನೆಗಳನ್ನು ಅನುಸರಿಸಿ. 14ದಿನಗಳ ಕಾಲ ಪ್ರತ್ಯೇಕವಾಗಿ ಹೋಮ್ ಐಸೋಲೇಷನ್ ಆಗಿರಿ ಎಂದು ಮನವಿ ಮಾಡಿದ್ದಾರೆ.