ಹುಟ್ಟು ಎಂಬುದು ನಮ್ಮ ಕೈಯಲ್ಲಿ ಇರುವುದಿಲ್ಲ ಹಾಗೆಯೇ ಯಾರ ಮನೆಯಲ್ಲಿ ಹುಟ್ಟುತ್ತೇವೆ ಹಾಗೂ ಯಾರ ಮಕ್ಕಳಾಗಿ ಹುಟ್ಟುತ್ತೇವೆ ಎಂಬುದು ತಿಳಿದಿರುವುದಿಲ್ಲ, ಆದರೆ ಹಿಂದಿನ ಜನ್ಮದಲ್ಲಿ ಮಾಡಿದ ಪುಣ್ಯದ ಕೆಲಸಗಳಿಂದ ಒಳ್ಳೆಯ ಮನೆತನದಲ್ಲಿ ಹುಟ್ಟುತ್ತೇವೆ ಎಂದರೆ ತಪ್ಪಾಗಲಾರದು. ಸ್ನೇಹಿತರು ಸಿಗುವುದು,ಬಂಧುಮಿತ್ರರು ದೊರಕುವುದೆಲ್ಲ ಹಿಂದಿನ ಜನ್ಮದಲ್ಲಿ ನಮಗೆ ಅವರೊಂದಿಗಿರುವ ಒಡನಾಟದಿಂದಾಗಿ ಈ ಜನ್ಮದಲ್ಲಿ ಅದು ಲಭ್ಯವಾಗುತ್ತದೆ.ಹಿಂದಿನ ಜನ್ಮದಲ್ಲಿ ನಾವು ಮಾಡಿದ ಪಾಪ ಕರ್ಮಗಳ ಅನುಸಾರವಾಗಿ ಈ ಜನ್ಮದಲ್ಲಿ ಮಕ್ಕಳು ಹುಟ್ಟುತ್ತವೆ. ಒಂದು ವೇಳೆ ಹಿಂದಿನ ಜನ್ಮದಲ್ಲಿ ನಿಮ್ಮ ಸ್ನೇಹಿತರಿಗೆ ಅಥವಾ ಬಂಧುಮಿತ್ರರಿಗೆ ಧನ ಹಾನಿ ಅಥವಾ ಆರ್ಥಿಕ ಪರಿಸ್ಥಿತಿಗೆ ಧಕ್ಕೆ ಬರುವಂತೆ, ತೊಂದರೆಯಾಗುವಂತೆ ಮಾಡಿದ್ದರೆ ಹಾಗೂ ತೊಂದರೆಯಿಂದ ಸ್ನೇಹಿತರ ಅಥವಾ ಬಂಧುಮಿತ್ರರು ಸಾಕಷ್ಟು ನೋವನ್ನು ಅನುಭವಿಸಿದ್ದರೆ, ಈ ಜನ್ಮದಲ್ಲಿ ಅವರು ಕಾಯಿಲೆಯನ್ನು ಹೊತ್ತುಕೊಂಡು ಬರುವ ಪುತ್ರರಾಗಿ ಜನಿಸುತ್ತಾರೆ. ಈ ಪುತ್ರ ಜನನದಿಂದ ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಹಾಗೂ ಆರ್ಥಿಕ ಪರಿಸ್ಥಿತಿಯು ಹದಗೆಡುತ್ತದೆ.
ಒಂದು ವೇಳೆ ಹಿಂದಿನ ಜನ್ಮದಲ್ಲಿ ನೀವು ಯಾರಿಗಾದರೂ ಶತ್ರುಗಳ ರೀತಿ ಕಾಟ ಕೊಟ್ಟಿದ್ದರೆ, ಈ ಜನ್ಮದಲ್ಲಿ ಅವರು ನಿಮ್ಮ ಮಕ್ಕಳಾಗಿ ಜನಿಸಿ ನೀವು ಹಿಂದಿನ ಜನ್ಮದಲ್ಲಿ ಅವರ ಮೇಲೆ ಸಾಧಿಸಿದ ದ್ವೇಷವನ್ನು ಈ ಜನ್ಮದಲ್ಲಿ ಅವರು ತೀರಿಸಿಕೊಳ್ಳುತ್ತಾರೆ. ಈ ರೀತಿಯ ಮಕ್ಕಳು ಜೀವನಪರ್ಯಂತ ಒಂದಲ್ಲ ಒಂದು ಕಷ್ಟವನ್ನು ಕೊಡುತ್ತಿರುತ್ತಾರೆ.ಒಂದು ವೇಳೆ ಹಿಂದಿನ ಜನ್ಮದಲ್ಲಿ ತಂದೆ-ತಾಯಿಯರನ್ನು ಚೆನ್ನಾಗಿ ನೋಡಿಕೊಂಡಿಲ್ಲವೆಂದರೆ, ಈ ಜನ್ಮದಲ್ಲಿ ಹುಟ್ಟುವ ಪುತ್ರರು ಕೂಡ ಸೋಂಬೇರಿಯಾಗಿ ಹುಟ್ಟುತ್ತಾರೆ ಹಾಗೂ ಪುತ್ರರು ವಿವಾಹವಾದ ನಂತರ ತಂದೆ ತಾಯಿಯನ್ನು ದೂರ ಮಾಡುತ್ತಾರೆ.
ಒಂದು ವೇಳೆ ಹಿಂದಿನ ಜನ್ಮದಲ್ಲಿ ನೀವು ಗುರುಹಿರಿಯರನ್ನು ಗೌರವಿಸಿ, ತಂದೆ-ತಾಯಿಯರನ್ನು ಪ್ರೀತಿಯಿಂದ ನೋಡಿಕೊಂಡಿದ್ದರೆ ಹಾಗೂ ಜನರಿಗೆ ಅನುಕೂಲವಾಗುವಂತಹ ಕೆಲಸವನ್ನು ಮಾಡಿದ್ದರೆ, ಈ ಜನ್ಮದಲ್ಲಿ ಒಳ್ಳೆಯ ಪುತ್ರರಾಗಿ ಜನಿಸುತ್ತಾರೆ ಹಾಗೂ ಅವರಿಂದ ಸಾಕಷ್ಟು ಪ್ರಖ್ಯಾತಿಯನ್ನು ಪಡೆದುಕೊಳ್ಳುವಂತೆ ಆಗುತ್ತದೆ. ಈ ಪುತ್ರರು ಜೀವನಪರ್ಯಂತ ತಂದೆ-ತಾಯಿಯನ್ನು ಗೌರವದಿಂದ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ ಎಂದರೆ ತಪ್ಪಾಗಲಾರದು.