ಸಾಮಾನ್ಯವಾಗಿ ಅಮಾವಾಸ್ಯೆ ಎಂಬುದು ಪ್ರತಿ ತಿಂಗಳಲ್ಲಿ ಒಂದು ಬಾರಿ ಬರುತ್ತದೆ. ಹಿಂದೂ ಧರ್ಮದಲ್ಲಿ ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನಕ್ಕೆ ವಿಶೇಷವಾದ ಪ್ರಾಮುಖ್ಯತೆಯನ್ನು ಕೊಡಲಾಗಿದೆ. ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಅಮಾವಾಸ್ಯೆ ದಿನ ಯಾವ ಕೆಲಸಗಳನ್ನು ಮಾಡಬಾರದು ಹಾಗೂ ಮಾಡಿದರೆ ಯಾವ ರೀತಿಯ ಪರಿಣಾಮ ಉಂಟಾಗುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಅಮಾವಾಸ್ಯೆ ದಿನ ಮುಂಜಾನೆ ಬೇಗ ಎದ್ದು ತಲೆಯಿಂದ ಸ್ನಾನವನ್ನು ಮಾಡಬೇಕು. ತಲೆಯಿಂದ ಸ್ನಾನ ಮಾಡಬೇಕಾದರೆ ಯಾವುದೇ ರೀತಿಯ ಶ್ಯಾಂಪೂ ಅಥವಾ ಸೀಗೆಕಾಯಿ ಅಥವಾ ಎಣ್ಣೆಯನ್ನು ಹಚ್ಚಿಕೊಂಡು ತಲೆಗೆ ಸ್ನಾನ ಮಾಡಬಾರದು. ಬರಿ ನೀರಿನಿಂದ ತಲೆಗೆ ಸ್ನಾನವನ್ನು ಸೂರ್ಯ ಉದಯಿಸುವದಕ್ಕಿಂತ ಮುಂಚೆ ಮಾಡಬೇಕು. ಅಮಾವಾಸ್ಯೆ ದಿನ ಮಧ್ಯಾಹ್ನದ ವೇಳೆಯಲ್ಲಿ ಭೋಜನವನ್ನು ಮಾಡಬೇಕು ಹಾಗೂ ರಾತ್ರಿ ವೇಳೆ ಲಘು ಉಪಹಾರವನ್ನು ಮಾಡಬೇಕು. ಈ ರೀತಿ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಅಮಾವಾಸ್ಯೆ ದಿನ ಶೇವಿಂಗ್ ಮಾಡುವುದು, ಹೇರ್ ಕಟ್ ಮಾಡಿಸಿಕೊಳ್ಳುವುದು, ಉಗುರನ್ನು ಕತ್ತರಿಸುವುದು ನಿಷಿದ್ಧ. ಈ ರೀತಿಯ ತಪ್ಪನ್ನು ಮಾಡಿದರೆ ದರಿದ್ರ ದೇವತೆಯು ಮನೆಗೆ ಆವರಿಸಿಕೊಳ್ಳುತ್ತಾಳೆ ಎಂಬುದನ್ನು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಅಮಾವಾಸ್ಯೆ ದಿನ ಮಧ್ಯಾಹ್ನದ ಸಮಯದಲ್ಲಿ ಹಾಗೂ ಮುಂಜಾನೆ 5 ರಿಂದ 6 ಗಂಟೆಯ ಸಮಯದಲ್ಲಿ ಹಾಗೂ ಸಾಯಂಕಾಲ 5 ರಿಂದ 6 ಗಂಟೆಯ ಸಮಯದಲ್ಲಿ ನಿದ್ದೆ ಮಾಡಬಾರದು. ಅಮಾವಾಸ್ಯೆ ದಿನ ಯಾವುದೇ ರೀತಿಯ ಹೊಸ ಕೆಲಸಗಳನ್ನು ಪ್ರಾರಂಭ ಮಾಡಬಾರದು ಹಾಗೂ ಇದರ ಜೊತೆಗೆ ಹಿಂದಿನ ಕೆಲಸವನ್ನು ಅಮಾವಾಸ್ಯೆ ದಿನ ಮುಗಿಸಬಾರದು.ಅಮಾವಾಸ್ಯೆ ದಿನ ಮನೆಯನ್ನು ಒರೆಸುವಾಗ ನೀರಿಗೆ ಸ್ವಲ್ಪ ಕಲ್ಲುಪ್ಪನ್ನು ಹಾಕಿ ಮನೆಯನ್ನು ಒರೆಸಬೇಕು.ಅಮಾವಾಸ್ಯೆ ದಿನ ಬಡವರಿಗೆ ಅನ್ನದಾನ, ವಸ್ತ್ರದಾನ ಮಾಡುವುದರಿಂದ ಹಿರಿಯರ ಆಶೀರ್ವಾದ ಲಭಿಸಲಿದೆ ಹಾಗೂ ದೇವತೆಗಳ ಅನುಗ್ರಹ ಪ್ರಾಪ್ತಿಯಾಗಲಿದೆ. ಪಿತೃದೇವತೆಗಳಿಗೆ ದಕ್ಷಿಣ ದಿಕ್ಕಿನ ಕಡೆ ಮುಖವನ್ನು ಮಾಡಿಕೊಂಡು ಕಪ್ಪು ಎಳ್ಳನ್ನು ಕೈಯಲ್ಲಿ ಹಿಡಿದುಕೊಂಡು ತಾಮ್ರದ ಚೊಂಬಿನಿಂದ ನೀರನ್ನು ಹಾಕುತ್ತಾ ಪಿತೃಗಳಿಗೆ ಅರ್ಗ್ಯ ಬಿಡಬೇಕು. ಈ ರೀತಿ ಮಾಡುವುದರಿಂದ ಪಿತೃದೇವತೆಗಳ ಆಶೀರ್ವಾದದಿಂದ ಮನೆಯಲ್ಲಿ ಎಲ್ಲರ ಆರೋಗ್ಯವು ಚೆನ್ನಾಗಿರುತ್ತದೆ ಹಾಗೂ ಸುಖ-ಶಾಂತಿ-ನೆಮ್ಮದಿ ನೇಳೆಸುತ್ತದೆ. ಅಮಾವಾಸ್ಯೆ ದಿನ ಲಕ್ಷ್ಮೀದೇವಿಯ ಪೂಜೆಯನ್ನು ಮಾಡಬೇಕು ಇದರಿಂದ ಲಕ್ಷ್ಮೀದೇವಿ ಅನುಗ್ರಹ ಪ್ರಾಪ್ತಿಯಾಗಿ ಎಲ್ಲಾ ರೀತಿಯ ಕೆಲಸ ಕಾರ್ಯಗಳು ಸರಾಗವಾಗಿ ನಡೆಯುತ್ತದೆ. ಲಕ್ಷ್ಮಿ ದೇವಿಗೆ ತುಪ್ಪದ ದೀಪವನ್ನು ಹಚ್ಚಿ ನೈವೇದ್ಯವನ್ನು ಮಾಡಿ ಕುಂಕುಮಾರ್ಚನೆ ಅಷ್ಟೋತ್ತರ ಹೇಳುವುದರಿಂದ ಮನೆಯಲ್ಲಿರುವ ಸಂಪತ್ತು ದುಪ್ಪಟ್ಟಾಗುತ್ತದೆ ಹಾಗೂ ಮಾಡುವಂತ ಕೆಲಸಕಾರ್ಯಗಳಲ್ಲಿ ಯಶಸ್ಸನ್ನು ಕಾಣಬಹುದು.