ಗೋಣಿಬೀಡು ಆದಿ ಸುಬ್ರಮಣ್ಯ ಸ್ವಾಮಿಯ ದೇವಸ್ಥಾನದ ಬಗ್ಗೆ ಕಿರು ಪರಿಚಯ.

ಜ್ಯೋತಿಷ್ಯ

ನಾಗದೋಷ ಗಳಿಂದ ಉಂಟಾಗುವ ಸಂತಾನಹೀನತೆ, ಚರ್ಮರೋಗ, ವಿವಾಹ ವಿಳಂಬದ ಸಮಸ್ಯೆಗೆ ಪರಿಹಾರ ಬೇಕೆಂದರೆ ಸುಬ್ರಹ್ಮಣ್ಯಸ್ವಾಮಿಯು ನೆಲೆಸಿರುವ ಕ್ಷೇತ್ರಗಳಲ್ಲಿ ನಾಗಪ್ರತಿಷ್ಠೆ ,ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಮುಂತಾದ ಕಾರ್ಯಗಳನ್ನು ನಡೆಸಬೇಕೆಂದು ನಮ್ಮ ಶಾಸ್ತ್ರಗಳು ತಿಳಿಸುತ್ತದೆ. ಕರ್ನಾಟಕದಲ್ಲಿ ಕುಕ್ಕೆ ಸುಬ್ರಮಣ್ಯ, ಘಾಟಿ ಸುಬ್ರಮಣ್ಯ, ನಾಗಲಮಡಿಕೆ ಸೇರಿದಂತೆ ಹಲವಾರು ಸುಬ್ರಮಣ್ಯ ಸ್ವಾಮಿಯ ಪುಣ್ಯ ಕ್ಷೇತ್ರಗಳಿವೆ.ಚಿಕ್ಕಮಗಳೂರಿನ ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಹೇಮಾವತಿ ನದಿಯ ತೀರದಲ್ಲಿ ಗೋಣಿಬೀಡು ಎಂಬ ಸುಂದರ ತಾಣವಿದೆ. ಗೋಣಿಬೀಡು ತೀರದಿಂದ ಎರಡು ಕಿಲೋಮೀಟರ್ ದೂರದಲ್ಲಿ ಜಿ ಅಗ್ರಹಾರ ಎಂಬ ಗ್ರಾಮವಿದೆ. ಈ ಗ್ರಾಮ ನಮ್ಮ ಕರ್ನಾಟಕ ರಾಜ್ಯದಲ್ಲಿ ಪುರಾತನ ಸುಬ್ರಹ್ಮಣ್ಯ ಸ್ವಾಮಿಯ ಪುಣ್ಯ ಕ್ಷೇತ್ರದಿಂದ ಪ್ರಖ್ಯಾತಿಯನ್ನು ಪಡೆದು ಕೊಂಡಿದೆ. ಈ ಸುಬ್ರಮಣ್ಯ ಸ್ವಾಮಿಯ ದೇವಸ್ಥಾನವನ್ನು ಆದಿ ಸುಬ್ರಹ್ಮಣ್ಯ ಸ್ವಾಮಿಯ ದೇವಾಲಯ ,ಮಲೆನಾಡಿನ ಕುಕ್ಕೆ ಸುಬ್ರಮಣ್ಯ ದೇವಾಲಯ ಎಂದು ಕೂಡ ಕರೆಯಲಾಗುತ್ತದೆ.

ಮಾಘಶುದ್ಧ ಷಷ್ಠಿಯನ್ನು ಕುಮಾರ ಷಷ್ಠಿ ಎಂದು ಕರೆಯಲಾಗುತ್ತದೆ. ಆ ದಿನ ಶ್ರೀ ಆದಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ರಥೋತ್ಸವ ಜರುಗುತ್ತದೆ. ರಥೋತ್ಸವದ ಸಂದರ್ಭದಲ್ಲಿ ಒಂದು ವಿಸ್ಮಯ ನಡೆಯುತ್ತದೆ. ರಥೋತ್ಸವ ಜರುಗುವ ಸಂದರ್ಭದಲ್ಲಿ ಗರುಡ ಪಕ್ಷಿಯು ಬಂದು ರಥವನ್ನು ಮೂರು ಸುತ್ತು ಹಾಕುತ್ತದೆ. ಈ ರೀತಿ ಗರುಡಪಕ್ಷಿ ಮೂರು ಸುತ್ತು ಹಾಕಿದ ನಂತರ ರಥೋತ್ಸವವನ್ನು ಮಾಡಲಾಗುತ್ತದೆ.

ಹರಿಹರ ರಾಜನು ಮುಂಜಾನೆ ಹೇಮಾವತಿ ತಟದಲ್ಲಿ ಸ್ನಾನ ಮಾಡುತ್ತಿರುವಾಗ ನಾಗರ ವಿಗ್ರಹವು ದೊರೆಯುತ್ತದೆ. ಅದನ್ನು ಹೇಮಾವತಿಯ ದಂಡೆಯಮೇಲೆ ಪ್ರತಿಷ್ಠಾಪಿಸಿ ದೇವಾಲಯವನ್ನು ನಿರ್ಮಿಸು ಎಂದು ಬ್ರಾಹ್ಮಣನು ರಾಜನಿಗೆ ಆಜ್ಞೆಯನ್ನು ಇಟ್ಟು ಅದೃಶ್ಯರಾಗುತ್ತಾರೆ. ರಾಜನು ವೃದ್ಧ ಬ್ರಾಹ್ಮಣನನ್ನು ತಿಳಿಸಿದ ಪ್ರಕಾರದಲ್ಲಿ ಹರಿಹರನು ಮರುದಿನ ಸ್ನಾನಕ್ಕೆ ಇಳಿದಾಗ ಏಳು ಹೆಡೆಯ ಸರ್ಪದ ವಿಗ್ರಹವು ದೊರೆಯುತ್ತದೆ. ನಂತರ ಪುರೋಹಿತರನ್ನು ಕರೆಸಿ ದೇವಾಲಯವನ್ನು ಕಟ್ಟಿಸಿ ವಿಗ್ರಹವನ್ನು ಪ್ರತಿಷ್ಠಾಪಿಸುತ್ತಾರೆ. ಈ ಕ್ಷೇತ್ರದಲ್ಲಿ ಸುಬ್ರಹ್ಮಣ್ಯ ಸ್ವಾಮಿಯು ಆದಿಶೇಷನ ರೂಪದಲ್ಲಿರುವುದರಿಂದ ಈ ಕ್ಷೇತ್ರವನ್ನು ಆದಿ ಸುಬ್ರಮಣ್ಯ ಸ್ವಾಮಿಯ ಕ್ಷೇತ್ರ ಎಂದು ಹೇಳಲಾಗುತ್ತದೆ.ಚರ್ಮರೋಗದ ಸಮಸ್ಯೆ ಇದ್ದವರು ಈ ಕ್ಷೇತ್ರಕ್ಕೆ ಬಂದು ಹರಕೆಯನ್ನು ಹೊತ್ತುಕೊಂಡರೆ ಚರ್ಮರೋಗದ ಸಮಸ್ಯೆ ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿದೆ. ಹರಕೆಯು ಮುಗಿದ ನಂತರ ದೇವಾಲಯದಲ್ಲಿ ಸಿಗುವ ಬೆಳ್ಳಿಯ ನಾಗರ ವಿಗ್ರಹವನ್ನು ದೇವರಿಗೆ ಅರ್ಪಿಸಲಾಗುತ್ತದೆ. ಮಕ್ಕಳಿಲ್ಲದ ದಂಪತಿಯರು ಈ ಕ್ಷೇತ್ರಕ್ಕೆ ಆಗಮಿಸಿ ನಾಗಪ್ರತಿಷ್ಠೆ ,ಸರ್ಪಸಂಸ್ಕಾರ ,ಆಶ್ಲೇಷ ಬಲಿ ಮುಂತಾದ ಕಾರ್ಯಕ್ರಮಗಳನ್ನು ಇಲ್ಲಿ ಜರುಗಿಸುತ್ತಾರೆ. ಇದರಿಂದ ಸಂತಾನಭಾಗ್ಯ ಕೂಡಿಬರಲಿದೆ ಎಂಬ ನಂಬಿಕೆ ಭಕ್ತರಲ್ಲಿದೆ.