ಮನೆಯಲ್ಲಿ ಲಕ್ಷ್ಮೀದೇವಿ ಸ್ಥಿರವಾಗಿ ವಾಸಿಸಬೇಕೆಂದರೆ ಈ ರೀತಿ ಮಾಡಿ.

ಜ್ಯೋತಿಷ್ಯ

ಮನೆಯಲ್ಲಿ ಲಕ್ಷ್ಮೀದೇವಿ ಸ್ಥಿರವಾಗಿ ವಾಸಿಸ ಬೇಕೆಂದರೆ ಮನೆಯಲ್ಲಿ ವಾಸ್ತು ದೋಷ, ಜಾತಕದಲ್ಲಿ ದೋಷ, ಸೂರ್ಯ ಗ್ರಹ, ಶುಕ್ರ ಗ್ರಹ, ಕುಜ ಗ್ರಹ, ಕೇತು, ಶನಿ ಪ್ರಭಾವ ಬಲಹೀನ ವಾಗಿದ್ದು ಮತ್ತು ಆರ್ಥಿಕ ಸಮಸ್ಯೆ ಇದ್ದರೆ ಮನಸ್ಸಿಗೆ ಶಾಂತಿ ಇರುವುದಿಲ್ಲ. ಈ ಪರಿಹಾರವನ್ನು ಮಾಡುವುದರಿಂದ ಅನವಶ್ಯಕ ಖರ್ಚುಗಳು ಕಡಿಮೆಯಾಗಿ ಧನ ಲಾಭವಾಗುತ್ತದೆ ಮತ್ತು ಲಕ್ಷ್ಮೀದೇವಿಯ ಸ್ಥಿರವಾಗಿ ವಾಸಿಸುತ್ತಾಳೆ.

ಈ ಪರಿಹಾರವನ್ನು ಮಂಗಳವಾರ ಹಾಗೂ ಭಾನುವಾರ ದಿನದಂದು ಮಾಡಬೇಕು. ಈ ಪರಿಹಾರವನ್ನು ಮಂಗಳವಾರ ಹಾಗೂ ಭಾನುವಾರ ಸಂಜೆ 5 ಗಂಟೆಯಿಂದ 6 ಗಂಟೆಯ ಒಳಗೆ ಮಾಡಬೇಕು. ಈ ಉಪಾಯವನ್ನು 7 ಮಂಗಳವಾರ ಅಥವಾ 7 ಭಾನುವಾರ ಮಾಡಬೇಕು.

ಮೊದಲಿಗೆ ಒಂದು ಹಿತ್ತಾಳೆಯ ತಟ್ಟೆಯ ಒಳಗೆ ಕಲ್ಲುಪ್ಪನ್ನು ಹಾಕಬೇಕು, ತದನಂತರ ಅದರ ಮೇಲೆ ಒಂದು ಮಣ್ಣಿನ ದೀಪವನ್ನು ಇಡಬೇಕು. ಮಣ್ಣಿನ ದೀಪಕ್ಕೆ ಸಣ್ಣದಾಗಿ ಹೆಚ್ಚಿದ 7 ಪೀಸ್ ಬೆಲ್ಲವನ್ನು , 7 ಲವಂಗವನ್ನು , 7 ಕರಿಮೆಣಸಿನ ಕಾಳು ಮತ್ತು 7 ಕರ್ಪೂರ ಹಾಕಬೇಕು. ತದ ನಂತರ ಮಣ್ಣಿನ ದೀಪಕ್ಕೆ 7 ಬಾರಿ ಸ್ವಲ್ಪ-ಸ್ವಲ್ಪ ಹಸುವಿನ ತುಪ್ಪವನ್ನು ಹಾಕಬೇಕು.ಹಸುವಿನ ತುಪ್ಪವನ್ನು ದೀಪಕ್ಕೆ ಹಾಕಿದ ನಂತರ ಇಷ್ಟ ದೇವತೆಯನ್ನು ಅಥವಾ ಕುಲದೇವರನ್ನು ಸ್ಮರಣೆ ಮಾಡಿಕೊಂಡು ಮತ್ತು ಕೋರಿಕೆಗಳು ಅಥವಾ ಸಮಸ್ಯೆಗಳು ಇದ್ದರೆ ಹೇಳಿಕೊಂಡು ದೀಪವನ್ನು ಹಚ್ಚಬೇಕು. ಈ ಕೆಲಸವನ್ನು ಮನೆಯ ಮುಖ್ಯದ್ವಾರದ ಬಳಿ ಮಾಡಬೇಕು ಹಾಗೂ ಸ್ತ್ರೀಯರು ಮುಟ್ಟಾದ ಸಮಯದಲ್ಲಿ ಈ ಉಪಾಯವನ್ನು ಮಾಡಬಾರದು.

ದೀಪವು ಸಂಪೂರ್ಣವಾಗಿ ಉರಿದ ನಂತರ ಒಂದು ಕವರಿನ ಒಳಗೆ ಕಲ್ಲುಪ್ಪನ್ನು ಹಾಕಿಕೊಂಡು ಹಾಗೂ ದೀಪ ಉರಿದ ನಂತರ ದೀಪದ ಒಳಗಿರುವ ಬೂದಿಯನ್ನು ಹಾಕಿಕೊಂಡು ಯಾರು ಓಡಾಡದೆ ಇರುವ ನಿರ್ಜನವಾದ ಪ್ರದೇಶದಲ್ಲಿ ಯಾರೂ ತುಳಿಯದ ಹಾಗೆ ಅದನ್ನು ಎಸೆದು ಬರಬೇಕು. ಒಂದು ವೇಳೆ ನಿರ್ಜನವಾದ ಪ್ರದೇಶ ಇಲ್ಲದಿದ್ದರೆ ಹರಿಯುವ ನೀರಿನಲ್ಲಿ ಬಿಟ್ಟು ಬರಬಹುದು.

ಈ ರೀತಿಯಾಗಿ ಮಾಡುವುದರಿಂದ ಲಕ್ಷ್ಮೀದೇವಿ ಸ್ಥಿರವಾಗಿ ಮನೆಯಲ್ಲಿ ನೆಲೆಸುತ್ತಾಳೆ ಹಾಗೂ ಮನೆಯಲ್ಲಿ ಶಾಂತಿಯ ವಾತಾವರಣ ಮೂಡುತ್ತದೆ ಹಾಗೂ ಕಷ್ಟಗಳೆಲ್ಲ ನಿವಾರಣೆಯಾಗಿ ಧನ ಸಂಪತ್ತು ಪ್ರಾಪ್ತಿಯಾಗಿ ಸುಖಕರವಾದ ಜೀವನವನ್ನು ನಡೆಸುವಂತೆ ಆಗುತ್ತದೆ.