ಹಿಂದೂ ಧರ್ಮದಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಪ್ರತಿನಿತ್ಯವೂ ದೀಪಾರಾಧನೆಯನ್ನು ಮಾಡಲಾಗುತ್ತದೆ. ಅದೇ ರೀತಿ ಸಾಯಂಕಾಲವೂ ದೇವರ ಮುಂದೆ ದೀಪವನ್ನು ಹಚ್ಚಲಾಗುತ್ತದೆ. ದೀಪಾರಾಧನೆಯನ್ನು ಪ್ರತಿನಿತ್ಯ ಏಕೆ ಮಾಡಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಪ್ರತಿನಿತ್ಯ ಮನೆಯಲ್ಲಿ ದೀಪವನ್ನು ಹಚ್ಚುವುದರಿಂದ ಮನಸ್ಸಿನಲ್ಲಿ, ಅಂತರಾತ್ಮದಲ್ಲಿ ಬೆಳಕು ಉಂಟಾಗುತ್ತದೆ. ದೀಪವನ್ನು ಬೆಳಗಿಸುವುದರಿಂದ ಜೀವನದ ಜ್ಯೋತಿಯು ಬೆಳಗುತ್ತದೆ ಎಂದು ಹೇಳಲಾಗುತ್ತದೆ. ಯಾವುದಾದರೂ ಸಮಸ್ಯೆಯು ಎದುರಾದಾಗ ದೀಪವನ್ನು ಹಚ್ಚುವುದರಿಂದ ಮನಸ್ಸಿಗೆ ಶಾಂತಿಯೂ ಸಹ ದೊರಕುತ್ತದೆ.
ದೀಪಾರಾಧನೆಯನ್ನು ಪ್ರತಿನಿತ್ಯ ಮಾಡುವುದರಿಂದ ಕುಂಡಲಿ ಶಕ್ತಿ ಜಾಗೃತವಾಗಿ ಅದರ ಮೂಲಕ ಅಗ್ನಿ ಪ್ರವೇಯ ಉಂಟಾಗಿ ಅದರಿಂದ ಜ್ಯೋತಿ ಪ್ರಭೆಯು ಉಂಟಾಗುತ್ತದೆ. ಜ್ಯೋತಿಯ ಇನ್ನೊಂದು ಸ್ವರೂಪ ವಾಗಿರುವವನೇ ಸುಬ್ರಮಣ್ಯಸ್ವಾಮಿ. ಆದ್ದರಿಂದ ದೀಪಾರಾಧನೆಯನ್ನು ಮಾಡಿದರೆ ಶಿವನ ಕುಟುಂಬಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ.ಹಸುವಿನ ತುಪ್ಪದಿಂದ ದೀಪವನ್ನು ಹಚ್ಚುವುದಕ್ಕೆ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ. ಆದರೆ ಕೆಲವರಿಗೆ ತುಪ್ಪದಿಂದ ದೀಪವನ್ನು ಹಚ್ಚಲು ಸಾಧ್ಯವಾಗುತ್ತಿರುವುದಿಲ್ಲ, ಆಗ ಎಳ್ಳೆಣ್ಣೆಯಿಂದ ದೀಪವನ್ನು ಹಚ್ಚಬಹುದು. ತುಪ್ಪದ ದೀಪವನ್ನು ಹಚ್ಚುವುದರಿಂದ ಧನ ಸಂಪತ್ತು ಕೂಡ ವೃದ್ಧಿಯಾಗುತ್ತದೆ. ಎಳ್ಳೆಣ್ಣೆಯಿಂದ ದೀಪವನ್ನು ಹಚ್ಚುವುದರಿಂದ ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ಹಾಗೂ ಆಯಸ್ಸು ವೃದ್ಧಿಯಾಗುತ್ತದೆ.
ಒಂದು ಬತ್ತಿಯಿಂದ ದೀಪವನ್ನು ಹಚ್ಚುವುದು ಮನೆಯಲ್ಲಿ ಯಾರಾದರೂ ಮರಣ ಹೊಂದಿದಾಗ. ಆದ್ದರಿಂದ ಒಂದು ಬತ್ತಿಯ ದೀಪವು ಸಾವಿನ ಸಂಕೇತವನ್ನು ಸೂಚಿಸುತ್ತದೆ.ಎರಡು ಬತ್ತಿಯಿಂದ ದೀಪವನ್ನು ಹಚ್ಚುವುದು ದೇಹ ಮತ್ತು ಆತ್ಮವು ಸಮ್ಮಿಲನವಾಗುವುದಕ್ಕೆ ಹಚ್ಚಲಾಗುತ್ತದೆ. ಮೂರು ಬತ್ತಿಯಿಂದ ದೀಪವನ್ನು ಹಚ್ಚುವುದರಿಂದ ದೇಹ ಆತ್ಮ ಮತ್ತು ಪರಮಾತ್ಮ ಈ 3 ಲೀನವಾಗುವುದಕ್ಕೆ ಸಹಾಯಕವಾಗುತ್ತದೆ.
ಹೀಗಾಗಿ ಪ್ರತಿನಿತ್ಯ ಮನೆಯಲ್ಲಿ ದೀಪವನ್ನು ಹಚ್ಚಿ ಪೂಜೆಯನ್ನು ಮಾಡುವುದರಿಂದ ಮನಸ್ಸಿಗೆ ಶಾಂತಿ ದೊರೆಯುವುದಲ್ಲದೆ ಭಗವಂತನ ಕೃಪೆಗೆ ಪಾತ್ರರಾಗಬಹುದು.