ಹಿಂದೂ ಧರ್ಮದಲ್ಲಿ ಪೂಜೆಗೆ ಎಷ್ಟು ಮಹತ್ವವನ್ನು ಕೊಟ್ಟಿದ್ದಾರೋ ಅಷ್ಟೇ ಮಹತ್ವವನ್ನು ಸಾಂಬ್ರಾಣಿ ಧೂಪಕ್ಕು ಸಹ ನೀಡಲಾಗಿದೆ. ಹಿಂದಿನ ಕಾಲದಲ್ಲಿ ಪ್ರತಿಯೊಬ್ಬರೂ ತಲೆಗೆ ಸ್ನಾನ ಮಾಡಿದಾಗ ನಂತರ ಸಾಂಬ್ರಾಣಿ ಧೂಪವನ್ನು ಕೊಡುತ್ತಿದ್ದರು. ಈಗಿನ ಕಾಲದಲ್ಲಿ ಬಾಣಂತಿಯರಿಗೆ, ಪುಟ್ಟ ಮಕ್ಕಳಿಗೆ ತಲೆಗೆ ಸ್ನಾನವನ್ನು ಮಾಡಿಸಿದ ನಂತರ ಸಾಂಬ್ರಾಣಿ ಧೂಪವನ್ನು ಕೊಡುವುದು ಸರ್ವೇಸಾಮಾನ್ಯವಾಗಿದೆ. ವೈಜ್ಞಾನಿಕವಾಗಿಯೂ ಸಾಂಬ್ರಾಣಿ ಧೂಪವನ್ನು ಮನೆಯ ಒಳಗಡೆ ಹಚ್ಚುವುದರಿಂದ ಯಾವುದೇ ಕ್ರಿಮಿಕೀಟಗಳು ಬರುವುದಿಲ್ಲ ಎಂದು ಸಾಬೀತಾಗಿದೆ.ಸಾಂಬ್ರಾಣಿ ಧೂಪವನ್ನು ಅಮಾವಾಸ್ಯೆ ದಿನ, ಹುಣ್ಣಿಮೆಯ ದಿನ, ಮಂಗಳವಾರ, ಶುಕ್ರವಾರದ ದಿನದಂದು ಹಚ್ಚಬೇಕು. ಮುಂಜಾನೆ ಸಾಂಬ್ರಾಣಿ ಧೂಪವನ್ನು ಹಚ್ಚುವುದರಿಂದ ಲಕ್ಷ್ಮಿ ದೇವಿಯು ಶಾಶ್ವತವಾಗಿ ನೆಲೆಸುತ್ತಾಳೆ ಹಾಗೂ ದುಷ್ಟಶಕ್ತಿಗಳು ಮನೆಗೆ ಪ್ರವೇಶವನ್ನು ಮಾಡುವುದಿಲ್ಲ.
ಸಾಂಬ್ರಾಣಿ ಧೂಪವನ್ನು ಹಾಕಬೇಕಾದರೆ ಮೊದಲಿಗೆ ಇಜ್ಜಲು ಬೇಕು, ಒಂದು ಹಿತ್ತಾಳೆಯ ಬಟ್ಟಲು ಅಥವಾ ಮಣ್ಣಿನ ಬಟ್ಟಲು, ಸಾಂಬ್ರಾಣಿ, ಪಚ್ಚಕರ್ಪೂರ, ಜವಾದ್ ಪೌಡರ್ ತೆಗೆದುಕೊಳ್ಳಬೇಕು. ಎರಡು ಪೀಸ್ ಇಜ್ಜಳನ್ನು ಬೆಂಕಿ ಮಾಡಿಕೊಂಡು ನಂತರ ಅದರ ಮೇಲೆ ಸಾಂಬ್ರಾಣಿಯನ್ನು ಹಾಕಬೇಕು ತದನಂತರ ಪಚ್ಚ ಕರ್ಪೂರವನ್ನು ಹಾಕಬೇಕು ಕೊನೆಯದಾಗಿ ಸ್ವಲ್ಪ ಜಾವದ್ ಪೌಡರನ್ನು ಹಾಕಬೇಕು. ನಂತರದಲ್ಲಿ ಕೈಯಲ್ಲಿ ಹಿತ್ತಾಳೆ ಬಟ್ಟಲು ಇಟ್ಟುಕೊಂಡು ಮನೆಯ ಮೂಲೆ ಮೂಲೆಗೂ ಸಾಂಬ್ರಾಣಿಯ ಹೊಗೆಯನ್ನು ಹಾಕಬೇಕು. ಇದರಿಂದ ಮನೆಯಲ್ಲಿ ದೈವಿಕ ಶಕ್ತಿ ಹೆಚ್ಚಾಗುತ್ತದೆ.ಸಾಂಬ್ರಾಣಿ ಧೂಪವನ್ನು ಮನೆಯಲ್ಲಿ ಹಾಕುವುದರಿಂದ ಲಕ್ಷ್ಮೀದೇವಿಯು ಬಹಳ ಬೇಗ ಆಕರ್ಷಿತಳಾಗುತ್ತಾಳೆ ಹಾಗೂ ಮನೆಯಲ್ಲಿರುವ ಕುಟುಂಬದ ಸದಸ್ಯರಿಗೆ ಆರೋಗ್ಯವೃದ್ಧಿಯಾಗುತ್ತದೆ ಮತ್ತು ಹಣಕಾಸಿನ ಸಮಸ್ಯೆಯು ಕ್ರಮೇಣ ಕಡಿಮೆಯಾಗುತ್ತಾ ಬರುತ್ತದೆ ಹಾಗೂ ಲಕ್ಷ್ಮೀದೇವಿ ಶಾಶ್ವತವಾಗಿ ಮನೆಯಲ್ಲಿ ನೆಲೆಸುತ್ತಾಳೆ.