ಪದೇಪದೇ ಕಂಕಣಭಾಗ್ಯ ಕೂಡಿ ಬರುತ್ತಿಲ್ಲ ಎಂದರೆ ಏನು ಮಾಡಬೇಕೆಂಬುದು ಗೊತ್ತೇ ನಿಮಗೆ ?

ಜ್ಯೋತಿಷ್ಯ

ಪ್ರತಿಯೊಬ್ಬ ತಂದೆ ತಾಯಂದಿರಿಗೆ ತಮ್ಮ ಮಕ್ಕಳಿಗೆ ಮದುವೆಯನ್ನು ಮಾಡಬೇಕೆಂಬ ಆಸೆ ಇದ್ದೇ ಇರುತ್ತದೆ, ಆದರೆ ಕೆಲವೊಂದು ಬಾರಿ ಮಕ್ಕಳಿಗೆ 35 ಅಥವಾ 40 ವರ್ಷವಾದರೂ ಕಂಕಣಭಾಗ್ಯ ಕೂಡಿ ಬಂದಿರುವುದಿಲ್ಲ. ಪದೇಪದೇ ವಿವಾಹಕ್ಕೆ ಸಂಬಂಧಪಟ್ಟ ಕಾರ್ಯಗಳು ಬಂದಾಗ ಅಡಚಣೆ ಉಂಟಾಗುವುದು ಅಥವಾ ಮನೆಗೆ ವಿವಾಹದ ಪ್ರಸ್ತಾಪವನ್ನು ಇಟ್ಟುಕೊಂಡು ಬಂದಾಗ ತೊಂದರೆ ಉಂಟಾಗುವುದು,ಕೆಲವೊಂದು ಬಾರಿ ಮಕ್ಕಳಿಗೆ ವಿವಾಹವನ್ನು ಮಾಡಿಕೊಳ್ಳಬೇಕು ಎಂಬ ಇಚ್ಛೆ ಇದ್ದರೂ ಕೆಲವೊಂದು ದಾರಿದ್ರತೆಗಳಿಂದ ತಂದೆ-ತಾಯಿಯೇ ಮಾಡಲಿ ಬಿಡು ಎಂದು ಅವರ ಮೇಲೆ ಜವಾಬ್ದಾರಿಯನ್ನು ಹಾಕಿ ಅವರು ಸುಮ್ಮನಾಗಿ ಬಿಡುತ್ತಾರೆ. ನಂತರ ತಂದೆ-ತಾಯಿಗಳು ಮದುವೆ ಮಾಡುವುದಕ್ಕೆ ಸಾಕಷ್ಟು ಪ್ರಯತ್ನಪಟ್ಟರೂ ಆಗುತ್ತಿಲ್ಲವೆಂದರೆ ಈ ಚಿಕ್ಕ ಪರಿಹಾರವನ್ನು ಮಾಡುವುದರಿಂದ ಕಂಕಣಭಾಗ್ಯ ಅತಿ ಶೀಘ್ರದಲ್ಲಿ ಕೂಡಿಬರಲಿದೆ. ಒಂದು ವೇಳೆ ಹೆಣ್ಣುಮಕ್ಕಳಿಗೆ ವಿವಾಹ ತಡವಾಗಿ ಆಗುತ್ತಿದ್ದರೆ ಅಥವಾ ವಿಳಂಬವಾಗುತ್ತಿದ್ದರೆ ತಂದೆ-ತಾಯಂದಿರಿಗೆ ಮಡಿಲಿನಲ್ಲಿ ಕೆಂಡವನ್ನು ಇಟ್ಟುಕೊಂಡಂತೆ ಆಗುತ್ತದೆ. ಅಕ್ಕಪಕ್ಕದವರು ಮದುವೆ ಆಯಿತಾ ಎಂದು ಕೇಳುವುದರಿಂದ ಬೇಸರವಾಗುತ್ತದೆ.

ಹೆಣ್ಣುಮಕ್ಕಳು 5 ಸೋಮವಾರ ಶಿವನ ದೇವಸ್ಥಾನಕ್ಕೆ ಒಂದು ತೆಂಗಿನಕಾಯಿಯನ್ನು ತೆಗೆದುಕೊಂಡು ಹೋಗಿ ಅಲ್ಲಿಯ ಅರ್ಚಕರಿಗೆ ಅಥವಾ ಪುರೋಹಿತರಿಗೆ ಕೊಟ್ಟು ವಿವಾಹಕ್ಕೆ ಸಂಬಂಧಪಟ್ಟಂತ ಪೂಜೆಯನ್ನು ಮಾಡಿಕೊಡಿ ಎಂದು ಕೇಳಬೇಕು. ಇದಕ್ಕೂ ಮುಂಚೆ ಮೊದಲು ಮುಂಜಾನೆ ಶಿವನಿಗೆ ಜಲಾಭಿಷೇಕವನ್ನು ಮಾಡಿಸಬೇಕು ನಂತರ ತೆಂಗಿನಕಾಯಿಯಿಂದ ಪೂಜೆಯನ್ನು ಮಾಡಿಸಿ ಮನೆಗೆ ತರಬೇಕು. ಪೂಜೆ ಮಾಡಿಸಿಕೊಂಡು ತಂದ ತೆಂಗಿನಕಾಯಿಯಿಂದ ಮನೆಯಲ್ಲಿ ಯಾವುದಾದರೂ ಒಂದು ತಿಂಡಿಯನ್ನು ಮಾಡಿ ಸೇವಿಸಬೇಕು.ಈ ರೀತಿಯಾಗಿ ಪ್ರತಿ ಸೋಮವಾರ ಶಿವನ ದೇವಸ್ಥಾನಕ್ಕೆ ಹೋಗಿ ಪೂಜೆಯನ್ನು ಮಾಡಿಸಿ ಸಾಯಂಕಾಲದ ಊಟದಲ್ಲಿ ಪೂಜೆಮಾಡಿಸಿದ ತೆಂಗಿನಕಾಯಿಯಿಂದ ಯಾವುದಾದರೂ ತಿಂಡಿಯನ್ನು ಮಾಡಿ ಸೇವಿಸುವುದರಿಂದ ಕಂಕಣ ಭಾಗ್ಯ ಕೂಡಿ ಬರಲಿದೆ.ಗಂಡು ಮಕ್ಕಳು 3 ಗುರುವಾರ ಮನೆಯಲ್ಲಿ 3 ಚಪಾತಿಯನ್ನು ಮಾಡಿಸಿ ಅದಕ್ಕೆ ಸಂಪೂರ್ಣವಾಗಿ ಅರಿಶಿಣವನ್ನು ಹಚ್ಚಿ ನಂತರ ಆ ಚಪಾತಿಯನ್ನು ಹಸುವಿಗೆ ತಿನ್ನಿಸಬೇಕು. ಈ ರೀತಿಯಾಗಿ 3 ಗುರುವಾರ ಮಾಡಿದ ನಂತರ 4 ನೇ ಗುರುವಾರದಿಂದ ಹುಡುಗಿಯನ್ನು ಹುಡುಕಲು ಪ್ರಾರಂಭ ಮಾಡಿದರೆ ಖಂಡಿತವಾಗಿಯೂ ವಿವಾಹವು ಅತಿ ಶೀಘ್ರದಲ್ಲಿ ಆಗುತ್ತದೆ.